ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ತ್ಯಾಜ್ಯ ವಿಲೇವಾರಿಗೆ 13.5 ಕೋಟಿಯ ಮಾಸ್ಟರ್ ಪ್ಲ್ಯಾನ್

ಈ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಅಂದಾಜು ವೆಚ್ಚ ರೂ 13.5 ಕೋಟಿ. ನಿರ್ವಹಣಾ ವೆಚ್ಚ ಪ್ರತಿ ವರ್ಷಕ್ಕೆ ಸುಮಾರು ರೂ 10 ಕೋಟಿ. ಈ ಎಲ್ಲ ವೆಚ್ಚವನ್ನು ಉಡುಪಿ ನಗರಪಾಲಿಕೆ ಭರಿಸಲಿದೆ.

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 24: ಉಡುಪಿ ನಗರ ಸಭೆ 13.5 ಕೋಟಿ ವೆಚ್ಚದಲ್ಲಿ ನೂತನ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಆರಂಭಸಲಿದೆ. ವಿವಿಧ ತಂತ್ರಗಳನ್ನು ಬಳಸಿಕೊಂಡು ಸಂಪೂರ್ಣ ತ್ಯಾಜ್ಯ ನಿರ್ವಹಣೆ ಮಾಡುವುದೇ ಈ ವ್ಯವಸ್ಥೆಯ ಉದ್ದೇಶವಾಗಿದೆ.

ಕಾಂಪೋಸ್ಟ್ ಪೈಪ್ ಅಥವಾ ಇತರ ಯಾವುದೇ ಕಾಂಪೋಸ್ಟ್ ವ್ಯವಸ್ಥೆ ಬಳಸಿಕೊಂಡು ಪ್ರತಿ ಮನೆ ಅಥವಾ ಅಪಾರ್ಟ್‍ಮೆಂಟಿನ ತ್ಯಾಜ್ಯವನ್ನು ಸಾಧ್ಯವಾದಷ್ಟು ವಿಲೇವಾರಿ ಮಾಡುವುದು ಈ ಪ್ರಸ್ತಾವನೆಯ ಗುರಿ. ಈ ಯೋಜನೆಯ ವೆಚ್ಚ ಅಂದಾಜು ರೂ 13.5 ಕೋಟಿ. ನಿರ್ವಹಣಾ ವೆಚ್ಚ ಪ್ರತಿ ವರ್ಷಕ್ಕೆ ಸುಮಾರು ರೂ 10 ಕೋಟಿ. ಈ ಎಲ್ಲ ವೆಚ್ಚವನ್ನು ಉಡುಪಿ ನಗರಪಾಲಿಕೆ ಭರಿಸಲಿದೆ.[ನಾನು ಢೋಂಗಿ ಆಸ್ತಿಕನಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ]

Udupi to have high trend garbage disposal system soon

ಹೊಸ ವ್ಯವಸ್ಥೆಯ ಪ್ರಕಾರ ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯ ಪ್ರತ್ಯೇಕಿಸಿಡಬೇಕು. ಹಸಿ ತ್ಯಾಜ್ಯವನ್ನು ವಾರಕ್ಕೆ ಒಂದು ಬಾರಿ ಮತ್ತು ಒಣ ತ್ಯಾಜ್ಯವನ್ನು ಪ್ರತಿದಿನ ವಿಲೇವಾರಿ ಮಾಡಲಾಗುವುದು.

ಸಂಗ್ರಹಿಸಿದ ತ್ಯಾಜ್ಯ ಸಾಗಿಸಲು ನಗರಪಾಲಿಕೆಯಲ್ಲಿ ಕೇವಲ 18 ವಾಹನಗಳಿವೆ. ಉಡುಪಿ ನಗರಪಾಲಿಕೆ ಈಗಾಗಲೇ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಇದು ಆರಂಭವಾದರೆ ಇನ್ನೂ ಹೆಚ್ಚಿನ ವಾಹನಗಳು ಜತೆಗೆ ತ್ಯಾಜ್ಯ ವಿಲೇವಾರಿಗೆ ಸಹಾಯಕವಾಗಲಿದೆ.[ಉಡುಪಿಗೂ ಬಂತು ಅಲ್ ಟೆರೇನ್ ಬೈಕ್, ಕಾಯಕ್ ಬೋಟ್]

ಈಗಾಗಲೇ ಯೋಜನೆಯ ಡಿಪಿಆರ್ ಸಿದ್ಧವಾಗಿದೆ. ಇದನ್ನು ಸದ್ಯದಲ್ಲೇ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಗೆ ಕಳುಹಿಸಲಾಗುವುದು. ಇದನ್ನು ಪರೀಕ್ಷಿಸಿ, ತಪ್ಪುಗಳಿದ್ದಲ್ಲಿ ಸರಿಪಡಿಸಿ ಸಮಿತಿ ಸಲಹೆಗಳನ್ನು ನೀಡುತ್ತದೆ. ಆ ಪ್ರಕಾರ ತಪ್ಪುಗಳನ್ನು ಸರಿಪಡಿಸಿ ಮರು ಕಳುಹಿಸಿದರೆ ಯೋಜನೆಗೆ ತಾಂತ್ರಿಕ ಪರಿಣತರು ಅನುಮತಿ ನೀಡಲಿದ್ದಾರೆ.

ಆ ಬಳಿಕ ಆಡಳಿತಾತ್ಮಕ ಸಮಿತಿಯ ಅನುಮತಿ ಅವಶ್ಯಕತೆ ಇದೆ. ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳನ್ನು ಬಿಡುಗಡೆಗೊಳಿಸಲಿವೆ. ಇದರೊಂದಿಗೆ ನಗಪಾಲಿಕೆ ತನ್ನ ಪಾಲು ಕೂಡ ನೀಡಲಿದೆ ಎಂದು ಪರಿಸರ ಇಂಜಿನಿಯರ್ ರಾಘವೇಂದ್ರ ಹೇಳಿದ್ದಾರೆ.

English summary
Udupi City Municipal Council to have high trend solid waste management system costing 13.5 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X