ತ್ಯಾಜ್ಯ ನೀರನ್ನೇ ಮರು ಬಳಕೆ ಮಾಡುವ ಉಡುಪಿಯ ಮೊದಲ ದೇಗುಲ 

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಫೆಬ್ರವರಿ 5: ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಶ್ರೀಗುರು ನರಸಿಂಹ ದೇವಸ್ಥಾನವಿದೆ. ದೇಗುಲ ಅಂದ ಮೇಲೆ ಅಲ್ಲಿ ಪ್ರಾರ್ಥನೆ, ಪುನಸ್ಕಾರ ಸಾಮಾನ್ಯ. ಅದು ಬಿಟ್ಟರೆ ಜಾತ್ರೆ, ಬ್ರಹ್ಮಕಲಶೋತ್ಸವ ಹೀಗೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಇಷ್ಟೆ ಆಗಿದ್ದರೆ ಈ ದೇವಾಲಯದ ಪ್ರಸ್ತಾಪ ಮಾಡುವ ಯಾವ ಅವಶ್ಯಕತೆಯೇ ಇರಲಿಲ್ಲ.

ಆದರೆ ಇಲ್ಲಿ ತ್ಯಾಜ್ಯ ನೀರನ್ನೇ ಮರು ಬಳಕೆ ಮಾಡಿಕೊಳ್ಳಲಾಗ್ತಿದೆ. ಈ ಮೂಲಕ ನೀರಿನ ಕೊರತೆಯನ್ನು ದೇವಾಲಯದವರು ಇಲ್ಲವಾಗಿಸಿದ್ದಾರೆ. [ಹುಲಿ ಅಸಲಿ, ವಿಡಿಯೋ ನಕಲಿ, ಕಮಲಶಿಲೆ ಜನ ಗಲಿಬಿಲಿ]

Udupi: Guru Narasimha Temple adopted water recycle system

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ ಮತ್ತು ಕುಂದಾಪುರ ಮಧ್ಯೆ ಈ ಶ್ರೀಗುರು ನರಸಿಂಹ ದೇವಸ್ಥಾನವಿದೆ. ಈ ದೇಗುಲಕ್ಕೆ ಪ್ರತಿದಿನ 500 ಕ್ಕಿಂತಲೂ ಹೆಚ್ಚಿನ ಭಕ್ತರು ಬರುತ್ತಾರೆ. ಶನಿವಾರ ಬಂತೆಂದರೆ ಸಾಕು ಸುಮಾರು 4,000ಕ್ಕೂ ಅಧಿಕ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ.

Udupi: Guru Narasimha Temple adopted water recycle system

ಬಿಸಿಲ ಬೇಗೆ ಬೇರೆ. ಹೀಗಾಗಿ ನೀರಿನ ಕೊರತೆ ಇರುವುದನ್ನು ಮನಗಂಡ ದೇಗುಲದ ಅಧಿಕಾರಿಗಳು ಒಂದು ಯೋಜನೆಯನ್ನು ರೂಪಿಸಿದರು. ಅದೇನೆಂದರೆ ತ್ಯಾಜ್ಯ ನೀರನ್ನ ಮರು ಬಳಕೆ ಮಾಡುವುದು. ದಿನಾಲೂ ತ್ಯಾಜ್ಯ ನೀರನ್ನು ನಿರ್ವಹಿಸುವುದೂ ಬಹಳ ಕಷ್ಟವಾಗುತ್ತಿತ್ತು. ಹೀಗಾಗಿಕೆಲ ತಿಂಗಳ ಹಿಂದೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತ್ಯಾಜ್ಯ ನೀರು ಮರು ಬಳಕೆ ಸ್ಥಾವರ ಅಸ್ಥಿತ್ವಗೊಳಿಸುವ ಬಗ್ಗೆ ನಿರ್ಧಾರ ಕೈಗೊಂಡಿತು. ಇದರ ಫಲವೇ ಈ ದೇವಸ್ಥಾನದ ಉದ್ಯಾನವನದಲ್ಲಿ ತ್ಯಾಜ್ಯ ನೀರು ಮರು ಬಳಕೆ ಸ್ಥಾವರ ಅನುಷ್ಠಾನಗೊಂಡಿದೆ. [ಮಧ್ವಾಚಾರ್ಯರ ಬಗ್ಗೆ ತಪ್ಪು ಕಲ್ಪನೆ ಹರಡಿಸಲಾಗಿತ್ತು - ಪೇಜಾವರ ಶ್ರೀ ]

ಈ ಮೂಲಕ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ತ್ಯಾಜ್ಯ ನೀರು ಮರುಬಳಕೆ ಸ್ಥಾವರ ಅಳವಡಿಸಿದ ಮೊಟ್ಟ ಮೊದಲ ದೇವಸ್ಥಾನ ಇದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ತ್ಯಾಜ್ಯ ನೀರು ಮರು ಬಳಕೆ ಸ್ಥಾವರವನ್ನು ಅಳವಡಿಸಿಕೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Saligrama Sri Guru Narasimha Temple adopted water recycle system, which is the first temple in Udupi which adopted water recycle system.
Please Wait while comments are loading...