ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಮುಂದುವರೆದ ಮಳೆ ಆರ್ಭಟ: ತೀವ್ರಗೊಂಡ ಕಡಲ್ಕೊರೆತ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್.25: ಉಡುಪಿಯಾದ್ಯಂತ ಇಂದೂ ಕೂಡ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದೆರಡು ದಿನಗಳಿಂದ ಉಡುಪಿಯ ಮೂರೂ ತಾಲೂಕುಗಳಲ್ಲಿ ಒಂದೇ ಸಮನೆ ಮಳೆಯಾಗುತ್ತಿದೆ.

ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು ,ಜಲಾಶಯಗಳು ಭರ್ತಿಯಾಗಿವೆ. ಮಳೆ ತೀವ್ರಗೊಂಡಿರುವುದರಿಂದ ಉಡುಪಿಯ ಕೆಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದ್ದು ಕೃತಕ ನೆರೆ ಸೃಷ್ಟಿಯಾಗಿದೆ.

ಉತ್ತರ ಭಾರತದತ್ತ ಮುಖಮಾಡಿದ ಮುಂಗಾರು ಮಾರುತಉತ್ತರ ಭಾರತದತ್ತ ಮುಖಮಾಡಿದ ಮುಂಗಾರು ಮಾರುತ

ಮಳೆಯಿಂದಾಗಿ ಪಾದಚಾರಿಗಳು, ವಾಹನ ಸವಾರರು ಮತ್ತು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದೇ ವೇಳೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಕಡಲ್ಕೊರೆತವೂ ತೀವ್ರಗೊಂಡಿದ್ದು, ಅಲ್ಲಿ ತಡೆಗೋಡೆ ಕಾರ್ಯ ಬಿರುಸುಗೊಂಡಿದೆ.

Udupi also has heavy rainfall today.

ಈ ಋತುವಿನ ಯಾಂತ್ರೀಕೃತ ಮತ್ತು ಆಳಸಮುದ್ರ ಮೀನುಗಾರಿಕೆ ಕೊನೆಗೊಂಡಿದ್ದು, ಮೀನುಗಾರರು ನಾಡದೋಣಿ ಮೀನುಗಾರಿಕೆ ಪ್ರಾರಂಭಿಸಿದ್ದಾರೆ.

ಕಳೆದೊಂದು ವಾರದಿಂದ ಕಡಲು ಪ್ರಕ್ಷುಬ್ದಗೊಂಡಿದ್ದು, ಕಡಲ್ಕೊರೆತ ತೀವ್ರಗೊಂಡಿದೆ. ಮಲ್ಪೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಕಡಲತೀರದ ಜನರು ಆತಂಕಗೊಂಡಿದ್ದಾರೆ. ಇನ್ನು ತೂಫಾನಿನ ತೀವ್ರತೆ ಹೆಚ್ಚಿದ್ದು ಮೀನುಗಾರರು ಕಡಲಿಗೆ ಇಳಿಯಲು ಹಿಂಜರಿಯುವಂತಾಗಿದೆ.

ಮುಂಬೈ ಮಹಾನಗರಿಯಲ್ಲಿ ಆರ್ಭಟಿಸಿದ ಮುಂಗಾರುಮಳೆಮುಂಬೈ ಮಹಾನಗರಿಯಲ್ಲಿ ಆರ್ಭಟಿಸಿದ ಮುಂಗಾರುಮಳೆ

ಕಳೆದ ನಾಲ್ಕಾರು ದಿನಗಳ ಮಳೆಯ ಆರ್ಭಟಕ್ಕೆ ಕಡಲು ಒಂದೇ ಸಮನೆ ಭೋರ್ಗರೆಯತ್ತಿದೆ. ಇದರ ಪರಿಣಾಮವಗಿ ಕೆಲವೆಡೆಗಳಲ್ಲಿ ಕಡಲ್ಕೊರೆತವೂ ತೀವ್ರಗೊಂಡಿದೆ. ಈ ಪ್ರದೇಶಗಳಲ್ಲಿ ಮೀನುಗಾರರ ಅನೇಕ ಮನೆಗಳಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

English summary
Udupi also has heavy rainfall today. All three taluks in Udupi have the continuous rainfall. Kundapur and Karkala taluks have the highest rainfall and the reservoirs are filled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X