'ತುಳುನಾಡ್ ತಿರ್ಗಾಟದ ತೇರ್'ಗೆ ಪೇಜಾವರ ಶ್ರೀ ಸ್ವಾಗತ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಸೆಪ್ಟೆಂಬರ್ 9: ಎಲ್ಲ ತೊಳೆಗಳು ಒಟ್ಟಿಗೆ ಇದ್ದಾಗ ಮಾತ್ರ ಕಿತ್ತಳೆ ಹಣ್ಣಿಗೆ ಬೆಲೆ ಇರುವಂತೆ ಎಲ್ಲ ಭಾಷೆಗಳು ಒಟ್ಟಾಗಿದ್ದು, ಉಳಿದು- ಬೆಳೆಯಬೇಕು. ಪ್ರತ್ಯೇಕವಾಗಿ ಬೆಳೆಯುವುದಕ್ಕೆ ಹೊರಟರೆ ಅಂತಹ ಭಾಷೆ ಬೆಲೆ ಕಳೆದುಕೊಳ್ಳುತ್ತದೆ ಎಂದು ಪೇಜಾವರ ಮಠದ ವಿಶೇಷ ತೀರ್ಥ ಸ್ವಾಮೀಜಿ ಹೇಳಿದರು.

ಕಾಸರಗೋಡಿನ ಬದಿಯಡ್ಕದಲ್ಲಿ ಡಿ.9 ರಿಂದ 13ರ ವರೆಗೆ ನಡೆಯುವ 'ವಿಶ್ವ ತುಳುವೆರೆ ಆಯನೊ-2016' ಕ್ಕೆ ಪೂರ್ವಭಾವಿಯಾಗಿ ಹೊರಟಿರುವ ಪ್ರಚಾರ ರಥ 'ತುಳುನಾಡ್ ತಿರ್ಗಾಟದ ತೇರ್' ಅನ್ನು ಗುರುವಾರ ಬರಮಾಡಿಕೊಂಡು, ಮುಂದಿನ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.[ಉಡುಪಿ ಕೃಷ್ಣ ಮಠದ ಸೇವೆ ಬುಕ್ ಮಾಡಲು ವೆಬ್ ಸೈಟ್]

'Tulunadu tirgatada ter' welcomed by Pejawar seer

ಕನ್ನಡ ನಮ್ಮ ರಾಜ್ಯ ಭಾಷೆಯಾಗಿದೆ. ತುಳುನಾಡಿನಲ್ಲಿ ತುಳು ಮಾತೃ ಭಾಷೆಯಾದರೂ ಬದುಕುವುದಕ್ಕೆ ಇತರ ವ್ಯಾವಹಾರಿಕ ಭಾಷೆಗಳನ್ನು ಕಲಿಯಬೇಕಾಗುತ್ತದೆ. ಆದರೆ ವ್ಯಾವಹಾರಿಕ ಭಾಷೆಗಳನ್ನು ಕಲಿತ ಮೇಲೆ ಮಾತೃ ಭಾಷೆಯನ್ನು ಮರೆಯಬಾರದು. ಮಾತ್ರ ಭಾಷೆ ಕಲಿಸಿದ ಸಂಸ್ಕೃತಿ - ಸಂಸ್ಕಾರಗಳನ್ನು ಬಿಡಬಾರದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
'World tulu meet' will be in Kasargod, from December 9th to 13th. Before the meet there is a publicity by 'Tulunadu tirgatada ter', welcomed to Udupi by Pejawar seer.
Please Wait while comments are loading...