ಹುಲಿ ಅಸಲಿ, ವಿಡಿಯೋ ನಕಲಿ, ಕಮಲಶಿಲೆ ಜನ ಗಲಿಬಿಲಿ

ಉಡುಪಿಯ ಕುಂದಾಪುರ ಪರಿಸರದಲ್ಲಿ ಹುಲಿ ಇದೆ ಎಂಬುದು ಇತ್ತೀಚೆಗೆ ಸುದ್ದಿಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಇಲ್ಲಿ ಇತ್ತೀಚೆಗೆ ಹರಿದಾಡಿದ ಹುಲಿಯೊಂದರ ವಿಡಿಯೋ. ಆದರೆ ಸದ್ಯ ಆ ವಿಡಿಯೋ ಹಳೆಯದು ಎಂದು ಗೊತ್ತಾಗಿದೆ.

ಉಡುಪಿ, ಫೆಬ್ರವರಿ 2: ದೊಡ್ಡ ಗಾತ್ರದ ಹುಲಿಯೊಂದು ರಸ್ತೆಯಲ್ಲಿ ನಡೆದು ಹೋಗುತ್ತಿರುವ ವಿಡಿಯೋ ಇತ್ತೀಚೆಗೆ ಉಡುಪಿಯ ಕುಂದಾಪುರ ಪರಿಸರದಲ್ಲಿ ವೈರಲ್ ಆಗಿತ್ತು. ಕುಂದಾಪುರದ ಕಮಲಶಿಲೆ ರಸ್ತೆಯಲ್ಲಿ ಈ ಹುಲಿ ಕಾಣಿಸಿಕೊಂಡಿದೆ ಎಂಬ ಸಂದೇಶ ಇಲ್ಲಿನ ಜನರಲ್ಲಿ ಆತಂಕವನ್ನೂ ಮೂಡಿಸಿತ್ತು. ಇದೀಗ ಆ ವಿಡಿಯೋ ಸುಳ್ಳು ಎಂದು ಗೊತ್ತಾಗಿದೆ.

ಫೇಸ್ಬುಕ್ ಮತ್ತು ವಾಟ್ಸಾಪ್ ಗಳಲ್ಲಿ ವೈರಲ್ ಆಗಿದ್ದ ಹುಲಿಯ ವಿಡಿಯೋ ಒಂದು ನಿಮಿಷದ ಅವಧಿಯದಾಗಿತ್ತು. ಇದೊಂದು ಮೊಬೈಲ್ ಕ್ಯಾಮೆರಾದಲ್ಲಿ ಶೂಟ್ ಮಾಡಿದ ವೀಡಿಯೋ ಆಗಿದ್ದು, ಹಿಂಬದಿಯಿಂದ ವಾಹನದಲ್ಲಿರುವರು ಈ ವೀಡಿಯೋ ತೆಗೆದಂತೆ ಕಾಣಿಸುತ್ತದೆ.[ಕುಂದಾಪುರ: ಮನೆಯೊಂದರಲ್ಲಿ ಭುಸ್ಸೆಂದ ಕಾಳಿಂಗ ಸರ್ಪ]

Truth revealed: Viral tiger video in Kundapur is old one

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟ ಕಿಡಿಗೇಡಿಗಳು, ಕುಂದಾಪುರ ತಾಲೂಕಿನ ಕಮಲಶಿಲೆ ಸಂಪರ್ಕ ರಸ್ತೆಯಲ್ಲಿ ಹುಲಿ ಸಂಚಾರ ಎಂಬ ಸಂದೇಶವನ್ನೂ ಜತೆಗೆ ಹಾಕಿದ್ದರು. ಇದರಿಂದ ಕುಂದಾಪುರ ಹಾಗೂ ಕಮಲಶಿಲೆಯ ಗ್ರಾಮಸ್ಥರು ನೆಮ್ಮದಿ ಕಳೆದುಕೊಂಡು ಭಯಭೀತರಾಗಿದ್ದರು.

ಆದರೆ ಇದೀಗ ಆ ವಿಡಿಯೋ ಹಳೆಯದು ಎಂದು ಗೊತ್ತಾಗಿದೆ. ಈ ವಿಡಿಯೋ ಈ ಹಿಂದೆಯೂ ವೈರಲ್ ಆಗಿದ್ದು ಅದರಲ್ಲಿ ಮರಾಠಿ ಮಾತನಾಡುವುದು ಕೇಳಿಸುತ್ತದೆ. ಅದೇ ವಿಡಿಯೋವನ್ನೇ ಕಿಡಿಗೇಡಿಗಳು ಮ್ಯೂಟ್ ಮಾಡಿ, ನಂತರ ಕುಂದಾಪುರದ ಕಮಲ ಶಿಲೆ ಹೆಸರಿನಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.[ಕಾರ್ಕಳ ನಕ್ಸಲ್ ಮುಖಂಡ ನೀಲಗುಳಿ ಸಿಓಡಿ ಕಸ್ಟಡಿಗೆ]

Truth revealed: Viral tiger video in Kundapur is old one

ಈ ಹಿನ್ನಲೆಯಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳನ್ನು ವಿಚಾರಿಸಿದರೆ, "ಇಲ್ಲಿವರೆಗೆ ಈ ಪರಿಸರದಲ್ಲಿ ಹುಲಿ ಓಡಾಟದ ಮಾಹಿತಿಯಿಲ್ಲ. ಸಾರ್ವಜನಿಕರಿಂದಲೂ ಯಾವುದೇ ದೂರು ಬಂದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+