ಉಡುಪಿಯಲ್ಲಿ ಆರೋಗ್ಯ ಕಾರ್ಯಕರ್ತೆಗೆ ಬೆದರಿಕೆ
ಉಡುಪಿ, ಏಪ್ರಿಲ್ 22: ಪಕ್ಕದ ಮನೆಯವರಿಗೆ ಬುದ್ಧಿವಾದ ಹೇಳಿದ್ದರಿಂದ ಆರೋಗ್ಯ ಉಪಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಶ್ಯಾಮಲಾ ಅವರಿಗೆ ಬೆದರಿಕೆ ಹಾಕಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಉಚ್ಚಿಲದಲ್ಲಿ ನಡೆದಿದೆ.
ಶ್ಯಾಮಲಾ ನೆರೆಮನೆಯಲ್ಲಿರುವ ಮಮ್ತಾಜ್ ಮತ್ತು ಆಕೆಯ ಸಹೋದರ ಮನ್ಸೂರ್ ನಿಂದ ಬೆದರಿಕೆ ಹಾಕಲಾಗಿದೆ. ಮಮ್ತಾಜ್ ಮನೆಗೆ ನಿರಂತರ ಅತಿಥಿಗಳು ಬರುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಕೆಲವರು ಬಂದಿರುವ ಬಗ್ಗೆ ಶ್ಯಾಮಲಾಗೆ ಸಂಶಯ ಬಂದಿತ್ತು.
ಕೊರೊನಾ ವೈರಸ್ ಇದೆ ದಯವಿಟ್ಟು ಎಚ್ಚರವಹಿಸಿ ಎಂದು ಆರೋಗ್ಯ ಸಹಾಯಕಿ ಶ್ಯಾಮಲಾ ಎಚ್ಚರಿಕೆ ನೀಡಿದ್ದರು. ಮನೆಗೆ ಹೊರಗಿನ ಜನರು ಬಂದರೆ ಅಪಾಯ ಅಂತ ಎಚ್ಚರಿಸಿದ್ದಕ್ಕೆ, ಮಮ್ತಾಜ್ ಹಾಗೂ ಮನ್ಸೂರ್ ಇಬ್ಬರೂ ಸೇರಿ ನಿನ್ನನ್ನು ಬಿಡಲ್ಲ, ಫೀಲ್ಡ್ ಗೆ ಹೋಗುವಾಗ ನೋಡಿಕೊಳ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಮನೆಗೆ ಗುಂಪು ಕಟ್ಟಿಕೊಂಡು ಬಂದು ಮನ್ಸೂರ್ ಬೆದರಿಕೆ ಹಾಕಿದ್ದಾರೆ ಎಂದು ಪಡುಬಿದ್ರಿ ಪೊಲೀಸ್ ಠಾಣೆಗೆ ಆರೋಗ್ಯ ಸಹಾಯಕಿ ದೂರು ನೀಡಿದ್ದು, ಪೊಲೀಸರಿಂದ ಆರೋಪಿ ಕುಟುಂಬದ ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications