ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಪು ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೊಲೆಂಜಿರ್ ಮೀನುಗಳು!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್.06: ಉಡುಪಿಯಲ್ಲಿ ಬುಧವಾರ ಮೀನು ಪ್ರಿಯರಿಗೆ ಸುಗ್ಗಿಯೋ ಸುಗ್ಗಿ. ಕಾಪು ಕಡಲ ಕಿನಾರೆಯಲ್ಲಿ ಸಮುದ್ರದ ಅಲೆಗಳೊಂದಿಗೆ ದಡಕ್ಕೆ ರಾಶಿ ರಾಶಿ ಮೀನುಗಳು ಬಂದು ಬಿದ್ದಿದ್ದು, ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

 ಇದು ಮೀನುಗಾರರ ಅದೃಷ್ಟದ ಮೀನು, 30 ಕೇಜಿ 5.5 ಲಕ್ಷಕ್ಕೆ ಮಾರಾಟ ಇದು ಮೀನುಗಾರರ ಅದೃಷ್ಟದ ಮೀನು, 30 ಕೇಜಿ 5.5 ಲಕ್ಷಕ್ಕೆ ಮಾರಾಟ

ಕಾಪು ತಾಲೂಕಿನ ಹೆಜಮಾಡಿಯಲ್ಲಿರುವ ಕೋಡಿ ಕಡಲ ಕಿನಾರೆಯಲ್ಲಿ ಸಮುದ್ರದಲೆಗಳೊಂದಿಗೆ ದಡಕ್ಕೆ ಅಪ್ಪಳಿಸಿದ ಬೊಲೆಂಜಿರ್ ಮೀನು ಅಥವಾ ಸಿಲ್ವರ್ ಫಿಶ್ ಗಳ‌ ರಾಶಿಯತ್ತ ಜನಸಾಗರವೇ ಹರಿದುಬಂದಿತ್ತು.

ವೈರಲ್ ವಿಡೀಯೋ: ವಿಮಾನದಿಂದ ಉದುರುವ ಮೀನುಗಳು, ಇದು ಪವಾಡವಲ್ಲ!ವೈರಲ್ ವಿಡೀಯೋ: ವಿಮಾನದಿಂದ ಉದುರುವ ಮೀನುಗಳು, ಇದು ಪವಾಡವಲ್ಲ!

ಮಳೆಗಾಲದ ಸಂದರ್ಭದಲ್ಲಿ ಪ್ರತೀ ವರ್ಷ ಮೀನುಗಳು ದಡಕ್ಕೆ ಅಪ್ಪಳಿಸುವುದು ಸಾಮಾನ್ಯ . ಆದರೆ ಈ ಬಾರಿ ಟನ್ ಗಟ್ಟಲೆ ಬೊಲೆಂಜಿರ್ ಮೀನುಗಳು ದಡಕ್ಕಪ್ಪಳಿಸಿವೆ.

There was a mass of fish in the Kapu beach in Udupi

ಕಾಪು ಕಡಲ ಕಿನಾರೆಯ ಒಂದು ಕಿಲೋಮೀಟರ್ ವರೆಗೂ ಮೀನುಗಳು ದಡಕ್ಕೆ ಅಪ್ಪಳಿಸಿದ್ದು, ಸಮುದ್ರ ಕಿನಾರೆಗೆ ದೌಡಾಯಿಸಿದ ಜನರು ಮೀನುಗಳನ್ನು ತಾ ಮುಂದು ನಾ ಮುಂದು ಎಂಬಂತೆ ಬುಟ್ಟಿ, ಗೋಣಿ, ರಿಕ್ಷಾ,ಟೆಂಪೋ, ವ್ಯಾನ್ ಗಳಲ್ಲಿ ತುಂಬಿಸಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.

 ಬುಡಮೇಲಾದ ಮೀನು ವ್ಯಾಪಾರ: ಸಾಮಾಜಿಕ ಜಾಲತಾಣದ ಮೊರೆಹೋದ ಮಹಿಳೆಯರು ಬುಡಮೇಲಾದ ಮೀನು ವ್ಯಾಪಾರ: ಸಾಮಾಜಿಕ ಜಾಲತಾಣದ ಮೊರೆಹೋದ ಮಹಿಳೆಯರು

There was a mass of fish in the Kapu beach in Udupi

ಇಷ್ಟು ಪ್ರಮಾಣದಲ್ಲಿ ಮೀನು‌ ಸಿಕ್ಕಿರುವುದು ಸ್ಥಳೀಯರಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

English summary
On Wednesday, there was a mass of fish in the Kapu beach in Udupi. Fish came through the waves and people took fish to home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X