• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಾಯಿ ಮನೆಗೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಸೋಂಕು; ಉಡುಪಿ ವಿದ್ಯಾರ್ಥಿ ಆತ್ಮಹತ್ಯೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 7: ತನ್ನ ತಾಯಿಯು ಮನೆಗೆಲಸ ಮಾಡುತ್ತಿದ್ದ ಮನೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ವಿಚಾರವಾಗಿ ಮನನೊಂದು ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

   ಬೆಂಗಳೂರಿನಿಂದ ಬರುವವರಿಗೆ ಇಲ್ಲ ಪ್ರವೇಶ | Oneindia Kannada

   ಸಾಲಿಗ್ರಾಮದ ಮಾಣಿಕಟ್ಟಿ ನಿವಾಸಿ, 10ನೇ ತರಗತಿ ವಿದ್ಯಾರ್ಥಿ ಕಾರ್ತಿಕ (15) ಆತ್ಮಹತ್ಯೆ ಮಾಡಿಕೊಂಡವನು. ಕೋಟ ವಿವೇಕ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಕಾರ್ತಿಕ್ ತಾಯಿ ಮನೆಗೆಲಸ ಮಾಡಿದ್ದರು. ಅವರು ಮನೆಗೆಲಸ ಮಾಡಿಕೊಂಡಿದ್ದ ಮನೆಯ ಸದಸ್ಯರೊಬ್ಬರಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು.

   ಕೊರೊನಾ ವೈರಸ್‌ ಭೀತಿಗೆ ಮಂಡ್ಯ ವೃದ್ಧ ಆತ್ಮಹತ್ಯೆಕೊರೊನಾ ವೈರಸ್‌ ಭೀತಿಗೆ ಮಂಡ್ಯ ವೃದ್ಧ ಆತ್ಮಹತ್ಯೆ

   ಈ ಹಿನ್ನೆಲೆಯಲ್ಲಿ ತಾಯಿ ರುದ್ರಮ್ಮ ಮತ್ತು ಮಗ ಕಾರ್ತಿಕ್ ಗೆ ಹೋಂ ಕ್ವಾರಂಟೈನ್ ವಿಧಿಸಲಾಗಿತ್ತು. ಇದೇ ವಿಚಾರವಾಗಿ ಮನನೊಂದು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತನ ಕೊರೊನಾ ಸೋಂಕಿನ ವರದಿ ಬಂದ ಬಳಿಕ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಚೂರಿ ಇರಿದು ಯುವಕನ ಕೊಲೆ: ಉಡುಪಿಯಲ್ಲಿ ಯುವಕನೊಬ್ಬನನ್ನು ಚೂರಿ ಇರಿದು ಕೊಲೆ ಮಾಡಲಾಗಿದೆ. ತಡರಾತ್ರಿ ಉಡುಪಿಯ ಲಕ್ಷ್ಮೀ ನಗರದಲ್ಲಿ ಈ ಘಟನೆ ನಡೆದಿದೆ. ಇರಿತಕ್ಕೊಳಗಾದ ಯೋಗೀಶ್ (28) ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಯೋಗೀಶ್ ಮೀನುಗಾರಿಕಾ ವೃತ್ತಿ ಮಾಡುತ್ತಿದ್ದ.

   ಐದು ಮಂದಿಯ ತಂಡ ಚೂರಿ ಇರಿದು ಪರಾರಿ ಆಗಿದ್ದಾರೆ. ವ್ಯವಹಾರ ವಿಚಾರದಲ್ಲಿ ಗಲಾಟೆ ನಡೆದಿರುವ ಸಾಧ್ಯತೆಯಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   English summary
   A student who was in home quarantine committed suicide in udupi
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X