ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಮೈತ್ರಿ ಗೆಲುವು ಸುಲಭವಲ್ಲ

|
Google Oneindia Kannada News

ಉಡುಪಿ ಮಾರ್ಚ್ 23: ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರ ಉಡುಪಿ ಚಿಕ್ಕ ಮಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದಾರೆ.

ಸ್ವ ಪಕ್ಷಿಯರಿಂದಲೇ ಕೆಂಗಣ್ಣಿಗೆ ಗುರಿಯಾಗಿದ್ದ ಶೋಭಾ ಎಡರು ತೊಡರುಗಳನ್ನು ಸಂಭಾಳಿಸಿ ಯಶಸ್ವಿಯಾಗಬೇಕಾದ ಅನಿವಾರ್ಯತೆ . ಇನ್ನೊಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆ

ಹಲವಾರು ವಿವಾದ , ಆರೋಪ ಪ್ರತ್ಯಾರೋಪ, ಅಭಿಯಾನ ಗಳಿಂದ ಸುದ್ದಿಯಾಗಿದ್ದ ಉಡುಪಿ ಚಿಕ್ಕ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆ ಮಾಡಲಾಗಿದೆ.

Stage set for big fight in Udupi-Chikkamagaluru Loksabha constituency

ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ‌ ಸೀತಾರಾಮನ್ ಉಪಸ್ಥಿತಿಯಲ್ಲಿ 26ರಂದು ಶೋಭಾ ನಾಮಪತ್ರ ಸಲ್ಲಿಸಲಿದ್ದಾರೆ. ಸ್ವ ಪಕ್ಷೀಯರಿಂದ ಗೋ ಬ್ಯಾಕ್ ಶೋಭಾ ಎಂಬ ಅಭಿಯಾನದಿಂದ ಸ್ವಲ್ಪ ಮಟ್ಟಿಗೆ ಅವಮಾನ ಮತ್ತು ಚಿಂತೆಗೊಳಗಾಗಿದ್ದ ಶೋಭಾ ಕೇಂದ್ರದ ನಾಯಕರ ಕೃಪಾಕಟಾಕ್ಷದಿಂದ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.

ಶೋಭಾ ಕರಂದ್ಲಾಜೆ-ಪ್ರಮೋದ್ ಮಧ್ವರಾಜ್ ಜಿದ್ದಾಜಿದ್ದಿಗೆ ವೇದಿಕೆ ಸಿದ್ಧ ಶೋಭಾ ಕರಂದ್ಲಾಜೆ-ಪ್ರಮೋದ್ ಮಧ್ವರಾಜ್ ಜಿದ್ದಾಜಿದ್ದಿಗೆ ವೇದಿಕೆ ಸಿದ್ಧ

ಶೋಭಾ ಹೆಸರು ಫೈನಲ್ ಅಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಶೋಭಾ ಫೇಸ್ ಬುಕ್ ಪೇಜ್ ನಲ್ಲಿ ಸರೀ ಕ್ಲಾಸ್ ತೆಗೊಂಡಿದ್ದಾರೆ. ಇದೆಲ್ಲಾ ಕಾಂಗ್ರೆಸ್ ಆಟ ಅಂತ ಶೋಭಾ ತೇಪೆ ಹಚ್ಚಿದ್ದಾರೆ.

ವಿಶ್ಲೇಷಕರ ಪ್ರಕಾರ ಪ್ರಕಾರ ಈ ಬಾರಿ ಉಡುಪಿ ಚಿಕ್ಕ ಮಗಳೂರು ಕ್ಷೇತ್ರ ಜಿದ್ದಾಜಿದ್ದಿಗೆ ವೇದಿಕೆ ಯಾಗಲಿದ್ದು ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ನೋಟಾ ಅಭಿಯಾನ ಆರಂಭವಾಗಿರುವುದು ಬಿಜೆಪಿಗೆ ಹಿನ್ನಡೆಯಾಗುವ ಸಂಭವವಿದೆ. ಆದರೆ ಶೋಭಾ ಜಾಣ ನಡೆ ಮುಂದಿಟ್ಟು ಕ್ಷೇತ್ರದ ಅಭ್ಯರ್ಥಿ ಯಾರೇ ಆಗಲಿ ಪ್ರಧಾನಿ ನರೇಂದ್ರ ಮೋದಿಯೇ ಇಲ್ಲಿಯ ಅಭ್ಯರ್ಥಿ. ಮೋದಿ ಅವರ ಕೈ ಬಲಪಡಿಸಲು ಶ್ರಮಿಸ ಬೇಕಾಗಿದೆ ಎಂದು ಹೇಳಿಕೆ ನೀಡಿ ಪಕ್ಷದ ಕಾರ್ಯಕರ್ತರನ್ನು ಭಾವನಾತ್ಮಕ ವಾಗಿ ಕಟ್ಟಿಹಾಲು ಪ್ರಯತ್ನಿಸಿದ್ದಾರೆ . ಇನ್ನೊಂದೆಡೆ ಮೋದಿ ಹೆಸರಿನಲ್ಲಿ ಮತ ಪಡೆಯಲು ಮುಂದಾಗಿದ್ದಾರೆ .

ಶೋಭಾ ಕರಂದ್ಲಾಜೆಗೆ ಟಿಕೆಟ್:ಪಕ್ಷೀಯರಿಂದಲೇ ನೋಟಾ ಅಭಿಯಾನ! ಶೋಭಾ ಕರಂದ್ಲಾಜೆಗೆ ಟಿಕೆಟ್:ಪಕ್ಷೀಯರಿಂದಲೇ ನೋಟಾ ಅಭಿಯಾನ!

ಆದರೆ ನೋಟಾ ಅಭಿಯಾನ ಶೋಭಾ ವಿರುದ್ಧ ಇರೋದ್ರಿಂದ ಬಿಜೆಪಿಗೆ ಮತ ಕಡಿಮೆಯಾಗಬಹುದು ಎಂದು ಹೇಳಲಾಗಿದೆ . ಆದರೂ ಈ ಕ್ಷೇತ್ರದಲ್ಲಿ ಗೆಲುವಿನ ಅವಕಾಶ ಬಿಜೆಪಿಗೆ ಹೆಚ್ಚು ಇದೆ. ಇನ್ನೊಂದೆಡೆ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಗೆ ಜೆಡಿಎಸ್ ಬಿ ಫಾರಂ ನೀಡಿದ್ದು ಅವರು ಜೆಡಿಎಸ್ ನಿಂದ ಸ್ಪರ್ಧಿಸಿದ್ರೆ ಅವರ ನಿಷ್ಠಾವಂತ ಕಾರ್ಯಕರ್ತರು ತಿರುಗಿ ಬೀಳೋದು ಖಂಡಿತ ಎಂದು ವಿಶ್ಲೇಷಿಸಲಾಗಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಕಾಂಗ್ರೆಸ್ ನಾಯಕರಾಗಿ ಗುರುತಿಸಿ ಕೊಂಡಿರುವ ಪ್ರಮೋದ್ ಮಧ್ವರಾಜ್ ಜೆಡಿಎಸ್ ನಿಂದ ಕಣಕ್ಕಿಳಿದರೆ ಮತದಾರರಲ್ಲಿಯೂ ಗೊಂದಲ ಮೂಡುವುದು ಸಹಜ . ನಿಷ್ಠಾವಂತ ಕಾಂಗ್ರೆಸ್ ಮತಗಳು ಜೆಡಿಎಸ್ ಗೆ ಬೀಳುವುದು ಅನುಮಾನ ಎಂದೇ ವಿಶ್ಲೇಷಿಸಲಾಗುತ್ತದೆ.

ಒಟ್ಟಿನಲ್ಲಿ ಮೋದಿ ಅಲೆಯ ಮೇಲೆ ಶೊಭಾ ಗೆಲುವಿನ ಲೆಕ್ಕಾಚಾರ ಹಾಕಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣಗಳ ಗೋ ಬ್ಯಾಕ್ ಸ್ವಲ್ಪ ಮಟ್ಟಿನ ತೊಂದರೆ ಕೊಡುವುದಂತು ನಿಜ . ಈ ಅಡೆತಡೆ ಗಳನ್ನು ದೂರಮಾಡಿ ಹೋಗಬೇಕಾದ ಸವಾಲು ಶೋಭಾ ಮುಂದಿದೆ. ಅವರು ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಾರೆ ಎಂಬುದೆ ಕತೂಹಲಕ್ಕೆ ಕಾರಣ ವಾಗಿದೆ.

English summary
BJP and JDS announced their candidates in Udupi-Chikkamagaluru Lokasabha constituency. Shobha Karandlaje from BJP and Pramodh Madhwaraj contesting from JDS. Now stage Stage set for big fight in Udupi-Chikkamagaluru constituency ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X