ಸಿದ್ದರಾಮಯ್ಯಗೆ ಹಿಂದೂಗಳ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ; ಕಿಷ್ಕಿಂದೆ ಶ್ರೀ
ಉಡುಪಿ, ಮಾರ್ಚ್ 25; ಸ್ವಾಮೀಜಿಗಳು ಕೂಡಾ ತಲೆ ಮೇಲೆ ಬಟ್ಟೆ ಹಾಕಲ್ವಾ?" ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಉಡುಪಿಯ ಕೊಲ್ಲೂರಿನಲ್ಲಿ ಕಿಷ್ಕಿಂದೆಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಕೂಡಾ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಶುಕ್ರವಾರ ಈ ಬಗ್ಗೆ ಕೊಲ್ಲೂರಿನಲ್ಲಿ ಮಾತನಾಡಿದ ಶ್ರೀ ಗೋವಿಂದಾನಂದ ಸ್ವರಸ್ವತಿ ಸ್ವಾಮೀಜಿ, "ಸಿದ್ದರಾಮಯ್ಯ ಮಾತನಾಡಿರುವುದು ಹಿಂದೂಗಳ ಮತ್ತು ಧರ್ಮದ ವಿರುದ್ಧವಾಗಿದೆ. ಇಂಥ ಹೇಳಿಕೆಗಳನ್ನೆಲ್ಲಾ ಅವರು ಕೊಡಬಾರದು. ಸಿದ್ದರಾಮಯ್ಯ ಹೆಸರಿನಲ್ಲಿ ರಾಮನ ಹೆಸರು ಇದೆ. ಹಿಂದೂ ಧರ್ಮ, ಹಿಂದೂ ದೇವರ ವಿರುದ್ಧ ಅವರು ಕೆಲಸ ಮಾಡುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯನವರ ವರ್ತನೆ ಸರಿಯಲ್ಲ" ಎಂದರು.
"ತಲೆಯ ಮೇಲಿನ ಬಟ್ಟೆ ತೆಗೆಯಲು ಸನ್ಯಾಸಿಗಳು ಕಾಲೇಜಿಗೆ ಹೋಗುತ್ತಿದ್ದೆವೆಯೇ?. ಹಿಜಾಬ್ ವಿಚಾರಕ್ಕೂ ಸನ್ಯಾಸಿಗಳ ವಿಚಾರಕ್ಕೂ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿಲ್ಲವೇ?. ನಿಮಗೆ ಸ್ವಲ್ಪವೂ ಜ್ಞಾನ ಇಲ್ಲವೇ?. ಹಿಂದೂ ಸನ್ಯಾಸಿಗಳಲ್ಲ ಹಿಂದೂ ಧರ್ಮೀಯರ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ. ಹಿಂದೂ ಎಂಬ ಪದ ಉಚ್ಚರಣೆ ಮಾಡಲಿಕ್ಕೂ ನಿಮಗೆ ಅಧಿಕಾರ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಸಿದ್ದರಾಮಯ್ಯ ಒಬ್ಬರಿಗೆ ಎಚ್ಚರಿಕೆಯಲ್ಲ. ಎಲ್ಲಾ ನಾಯಕರಿಗೆ ಇದೆ ಎಚ್ಚರಿಕೆ ನೀಡುತ್ತಿದ್ದೇವೆ. ರಾವಣಾಸುರನಿಗೆ ಹಿರಣ್ಯಾಕ್ಷನಿಗೆ ಯಾವ ಗತಿಯಾಯಿತೋ ಅವರುಗಳಿಗೂ ಅದೇ ಗತಿಯಾಗುತ್ತದೆ. ಸಾವಿರ ಕೋಟಿ ಜನ್ಮ ಎತ್ತಿದರೂ ಹಿಂದೂ ಸಂತರ ಬಗ್ಗೆ ಮಾತನಾಡಲು ನಿಮಗೆ ಮಾತನಾಡಲು ಅರ್ಹತೆ ಇಲ್ಲ. ಸುಮ್ಮನೆ ಮನೆಯಲ್ಲಿ ಇದ್ದುಕೊಂಡು ರಾಮನಾಮ ಜಪ ಮಾಡಿಕೊಳ್ಳಿ. ನಿಮ್ಮ ಜನ್ಮ ಉದ್ದಾರ ಆಗುತ್ತದೆ, ಹಿಂದೂ ಧರ್ಮದ ಮೇಲೆ ಕೈಇಡುತ್ತೇನೆ ಹಿಂದೂ ಧರ್ಮವನ್ನು ಪ್ರಶ್ನೆ ಮಾಡುತ್ತೇನೆ ಎಂದು ಮುಂದಾದರೆ, ಹಿಂದೆ ರಾಕ್ಷಸರಿಗೆ ಆದ ಗತಿ ನಿಮಗೂ ಆಗುತ್ತದೆ" ಎಂದು ಗೋವಿಂದ ಸರಸ್ವತಿ ಸ್ವಾಮೀಜಿ ಹೇಳಿದರು.
"ಸಿದ್ದರಾಮಯ್ಯ ನೀವು ಹಿಂದೂಗಳಲ್ಲಿ ಕ್ಷಮೆ ಕೇಳಲೇ ಬೇಕು. ನೀವು ಕ್ಷಮೆ ಕೇಳದಿದ್ದರೆ ಹಿಂದೂಗಳ ಪರ ಇಲ್ಲವೆಂದು ಅರ್ಥ. ರಾಮ, ಸಿದ್ದ ಹೆಸರು ತೆಗೆದಿಟ್ಟು ಅಲ್ಲಾವುದ್ದೀನ್ ಖಿಲ್ಜಿ ಇಲ್ಲ, ಥಾಮಸ್ ಹೆಸರಿಗೆ ಮತಾಂತರ ಆಗಿ. ಅವರು ರಾಮನ ಪಾರ್ಟಿಯಲ್ಲಿ ಇಲ್ಲ ರಾವಣನ ಪಾರ್ಟಿಯಲ್ಲಿರಬೇಕು. ಹಿಂದೂಗಳ ಜೊತೆಯಲ್ಲಿದ್ದು ನರಿಗಳ ತರ ಹಿಂದುಗಳ ಮೇಲೆ ಟೀಕೆ ಮಾಡೋದು ಸರಿಯಲ್ಲ. ಅದು ಧರ್ಮ ಅಲ್ಲ. ಹಿಂದೂಗಳ ಬಟ್ಟೆ ಹಾಕಿ ಹಿಂದೂಗಳ ಭಿಕ್ಷೆಯಲ್ಲಿ ಬದುಕುವ ನೀವು ಅನಾಹುತ ಮಾಡಬೇಡಿ" ಎಂದರು.
"ಸಿದ್ದರಾಮಯ್ಯ ಹಿಂದೂಗಳ ಕ್ಷಮೆ ಕೇಳಬೇಕು. ರಾವಣಾಸುರ ತಪ್ಪು ಮಾಡಿದ ಮೇಲೆ ರಾಕ್ಷಸ ವಂಶವೂ ಹಾಳಾಗುತ್ತದೆ. ಕರ್ನಾಟಕದಲ್ಲಿ ನೀವು, ಕಾಂಗ್ರೆಸ್ ಪಕ್ಷ ಭೂಸ್ಥಾಪಿತ ಆಗುತ್ತೀರಿ. ಹಿಂದಿನ ಕಾಲದಲ್ಲಿ ಎಲ್ಲವೂ ನಡೆಯುತ್ತಿತ್ತು, ಸ್ಥಿತಿ ಈಗ ಹಾಗೆ ಇಲ್ಲ. ನಿಮ್ಮಂತಹ ಸಾವಿರ ಜನ ಬಂದರೂ ಸನಾತನ ಧರ್ಮ ಅಜರಾಮರ. ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡಿ ಮುಸಲ್ಮಾನರ ಮತ ಸೆಳೆಯಲು ಪ್ಲಾನ್ ಬಿಡಿ. ಸಿದ್ದರಾಮಯ್ಯ ತನ್ನ ಭ್ರಮೆಯನ್ನು ಬಿಡಬೇಕು. ಕಾಂಗ್ರೆಸ್ ಮುಸಲ್ಮಾನರನ್ನು ಉದ್ಧಾರ ಮಾಡುತ್ತದೆ ಎಂಬುದು ಕೂಡ ಒಂದು ಭ್ರಮೆಯಾಗಿದೆ. ಕಾಂಗ್ರೆಸ್ ಮುಸಲ್ಮಾನರನ್ನು ಟಿಶ್ಯು ಪೇಪರ್ ತರ ಬಿಸಾಕಿಬಿಡುತ್ತದೆ. ಹಿಂದೂಗಳ ಸಹನೆಯನ್ನು ನೀವು ದುರುಪಯೋಗಪಡಿಸಿಕೊಳ್ಳಬೇಡಿ. ನಿಮ್ಮಂತ ಕೋಟಿ ಜನ ಬಂದರು ಸನಾತನ ಧರ್ಮವನ್ನು ಮುಟ್ಟಲು ಸಾಧ್ಯವಿಲ್ಲ" ಎಂದು ತಿಳಿಸಿದರು.












Click it and Unblock the Notifications