ಬಿಜೆಪಿ ಅಪರೇಷನ್ ಕಮಲ ಮಾಡಲ್ಲ: ಶೋಭಾ ಕರಂದ್ಲಾಜೆ

Recommended Video

      ಸಮ್ಮಿಶ್ರ ಸರ್ಕಾರದ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿದ್ದು ಹೀಗೆ | Oneindia Kannada

      ಉಡುಪಿ, ಜು.4: ಬಿಜೆಪಿ ರಾಜ್ಯದಲ್ಲಿ ಅಪರೇಷನ್ ಕಮಲ ಮಾಡಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
      ಕಾಂಗ್ರೆಸ್ ಮಾಡಿದ ಪಾಪಗಳು ಅವರಿಗೇ ತಟ್ಟಲಿದೆ.

      ಸಮ್ಮಿಶ್ರ ಸರ್ಕಾರ ಮಾಡುತ್ತಿರುವ ಪಾಪಕ್ಕೆ ಅವರೇ ಬೀಳ್ತಾರೆ. ಮಂತ್ರಿ ಮಂಡಲ ವಿಸ್ತರಣೆಗಾಗಿ ಶಾಸಕರು ಕಾಯುತ್ತಿದ್ದಾರೆ. ಆದರೆ ಅವರನ್ನು ಸಮಾಧಾನಪಡಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ನಾವು ಜೆಡಿಎಸ್ ಜೊತೆ ಹೋಗಬಾರದಿತ್ತು ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.

      ಜೆಡಿಎಸ್ ಕಾಂಗ್ರೆಸ್ ಅನ್ನು ಒಂದು ದಿನ ತಿಂದು ಹಾಕುತ್ತೆ ಅನ್ನುವ ಭಯದಲ್ಲಿದ್ದಾರೆ ಶಾಸಕರು. ಕಾಂಗ್ರೆಸ್ ಹಿಂಬಾಗಿಲಿನ ಮೂಲಕ ಪಾಪದ ಕೃತ್ಯ ಎಸಗಿದೆ. ನಮ್ಮೊಂದಿಗೆ ಹತ್ತಾರು ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಸುಳಿವು ನೀಡಿದರು.

      Shobha Karandlaje said BJP do not operation kamala in the state

      ಆದರೆ ನಮಗೆ ಹೈಕಮಾಂಡ್ ಆದೇಶವಿದೆ. ಹಾಗಾಗಿ ನಾವು ಸರ್ಕಾರ ಬೀಳಿಸಲ್ಲ. ಜಮೀರ್ ಅಹ್ಮದ್ ಅವರಿಗೆ ದುರಹಂಕಾರ. ಜಮೀರ್-ಕುಮಾರಸ್ವಾಮಿ ಹೇಗೆ ಕಿತ್ತಾಡಿದರು ಎಂಬುದನ್ನು ನಾವು ನೋಡಿದ್ದೇವೆ.

      ಇಂತಹದ್ದೇ ಕಾರು ಬೇಕೆನ್ನುವ ಮೂಲಕ ತನ್ನ ಅಹಂ ತೋರಿಸಿದ್ದಾರೆ. ಸರ್ಕಾರ ಇವರ ಬಗ್ಗೆ ಜಗ್ಗಬಾರದು. ಅವರಿಗೆ ಕೊಟ್ಟರೆ ಎಲ್ಲರಿಗೂ ಕೊಡುವಂತಾಗಬೇಕೆಂದು ಎಂದು ಕಾಂಗ್ರೆಸ್-ಜೆಡಿಎಸ್ ಶಾಸಕರ ಬಗ್ಗೆ ವ್ಯಂಗ್ಯಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+