• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಗೆ 2 ನೇ ಸಾವು

By ಉಡುಪಿ ಪ್ರತಿನಿಧಿ
|

ಉಡುಪಿ, ಜೂನ್ 19: ಉಡುಪಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ 2 ನೇ ಸಾವು ಸಂಭವಿಸಿದೆ. ಮುಂಬೈನಿಂದ ಬಂದ ವ್ಯಕ್ತಿ ದಿಢೀರ್ ಆಗಿ ಸಾವನ್ನಪ್ಪಿದ್ದು, ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಗುರುವಾರ ಮಧ್ಯಾಹ್ನ ಮಹಾರಾಷ್ಟ್ರ ದಿಂದ ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಬಂದಿದ್ದರು. ಮೃತ ವ್ಯಕ್ತಿ ತೆಕ್ಜಟ್ಟೆಯ ನಿವಾಸಿಯಾಗಿದ್ದಾನೆ. ನಾಲ್ಕು ಜನ ಮಹಾರಾಷ್ಟ್ರ ದಿಂದ ಬಂದಿದ್ದವರು, ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದರು.

ಕೊರೊನಾ ಸಂಕಷ್ಟ: ಉಡುಪಿಯಲ್ಲಿ ಎರಡು ದಿನದಲ್ಲಿ ಮೂವರ ಆತ್ಮಹತ್ಯೆ

ಉಡುಪಿಗೆ ಬಂದಾಗ ಸಂಪೂರ್ಣ ತಪಾಸಣೆ ಮಾಡಿದ್ದೇವೆ, ಮೃತ ವ್ಯಕ್ತಿಯಲ್ಲಿ ಕೊರೊನಾ ವೈರಸ್ ನ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಮನೆಯಲ್ಲೇ ಸಾವನ್ನಪ್ಪಿದ್ದಾನೆ. ಮರಣಕ್ಕೆ ಕಾರಣವನ್ನು ಪೋಸ್ಟ್ ಮಾರ್ಟಂ ನಿಂದ ತಿಳಿಯಬೇಕು. ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರೋದು ಗೊತ್ತಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

English summary
2nd victim deaths due to coronavirus infection in Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X