ಉಡುಪಿಯಲ್ಲೂ ನೀರಿಗೆ ಬರ..! ನಾಳೆಯಿಂದ ಎರಡು ದಿನಕ್ಕೊಮ್ಮೆ ನೀರು
ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ತೀರಾ ಕುಸಿದಿದೆ. ಹೀಗಾಗಿ ನಗರಸಭಾ ವ್ಯಾಪ್ತಿಯಲ್ಲಿ ಮಾರ್ಚ್ 23ರಿಂದ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲು ತೀರ್ಮಾನಿಸಲಾಗಿದೆ.
ಉಡುಪಿ, ಮಾರ್ಚ್ 22: ಮಂಗಳೂರಿನ ರೀತಿಯಲ್ಲೇ ಉಡುಪಿಯಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ.
ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ತೀರಾ ಕುಸಿದಿದೆ. ಹೀಗಾಗಿ ಉಡುಪಿ ನಗರಸಭಾ ವ್ಯಾಪ್ತಿಯನ್ನು ಎರಡು ವಿಭಾಗಗಳನ್ನಾಗಿ ಮಾಡಲಾಗಿದ್ದು, ಮಾರ್ಚ್ 23ರಿಂದ ದಿನ ಬಿಟ್ಟು ದಿನ ಬೆಳಗ್ಗೆ 6 ಗಂಟೆಗೆ ನೀರು ಸರಬರಾಜು ಮಾಡಲು ನಗರಸಭೆ ತೀರ್ಮಾನಿಸಿದೆ.

ನೀರು ಸರಬರಾಜು ಹೇಗೆ..?
ಮಾರ್ಚ್ 23 ರಂದು ಕುಂಜಿಬೆಟ್ಟು, ತೆಂಕಪೇಟೆ, ಒಳಕಾಡು, ಬೈಲೂರು, ಕಿನ್ನಿಮೂಲ್ಕಿ, ಅಜ್ಜರಕಾಡು, ಅಂಬಲಪಾಡಿ, ಬನ್ನಂಜೆ, ಶಿರಿಬೀಡು, ಕೊಳ, ವಡಬಾಂಡೇಶ್ವರ, ಕಲ್ಮಾಡಿ, ಇಂದಿರಾ ನಗರ, ಚಿಟ್ಪಾಡಿ, ಬಡಗುಬೆಟ್ಟು, ಕೊಡವೂರು, ಕಸ್ತೂರ್ಬಾ ನಗರ, ಮಲ್ಪೆ ಸೆಂಟ್ರಲ್, ಇಂದ್ರಾಳಿ, ಸಗ್ರಿ, ಮೂಡುಪೆರಂಪಳ್ಳಿ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.[ಉಡುಪಿಯಲ್ಲಿ ರಾಜ್ಯದ ಪ್ರಪ್ರಥಮ ಒಳಾಂಗಣ ಟೆನಿಸ್ ಕೋರ್ಟ್]
ಮಾರ್ಚ್ 24ರಂದು ಸರಳೇಬೆಟ್ಟು, ಈಶ್ವರನಗರ, ಮಣಿಪಾಲ, ಕಕ್ಕುಂಜೆ, ಕರಂಬಳ್ಳಿ, ಮೂಡುಬೆಟ್ಟು, ಕೊಡಂಕೂರು, ನಿಟ್ಟೂರು, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಕಡಿಯಾಳಿ, ಗುಂಡಿಬೈಲು, ಸೆಟ್ಟಿಬೆಟ್ಟು, ಪರ್ಕಳ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.
ಬಳಿಕ ಇದೇ ಮಾದರಿಯಲ್ಲಿ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತದೆ. ನಳ್ಳಿ ನೀರು ಬಂದ ದಿನ ಸಂಬಂಧಪಟ್ಟ ವಾರ್ಡ್‌ಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಅಂತಹ ಮನೆಗಳಿಗೆ ಟ್ಯಾಂಕರ್‌ಗಳ ಮೂಲಕ ತಲಾ 500 ಲೀ. ನೀರು ಸರಬರಾಜು ಮಾಡಲಾಗುತ್ತದೆ.[ಉಡುಪಿ: ಅಪಾಯದಂಚಿನಲ್ಲಿ ಅಂಗನವಾಡಿ!]
ಕುಡಿಯುವ ನೀರಿಗೆ ಸಂಬಂಧಿಸಿ ದೂರುಗಳಿದ್ದಲ್ಲಿ ಮೊಬೈಲ್ ಸಂಖ್ಯೆ 8496989248, 8496989166, 8496989184, 8496989122ಕ್ಕೆ ಕರೆ ಮಾಡಬಹುದು. ಈ ಸಂಖ್ಯೆಗಳು ದೂರಿಗೆ ಸ್ಪಂದಿಸದಿದ್ದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಗಣೇಶ್ (ಮೊ. 8496989759) ಅಥವಾ ಪರಿಸರ ಅಭಿಯಂತರ ರಾಘವೇಂದ್ರ ಬಿ.ಎಸ್. (9448507244) ಇವರಿಗೆ ಕರೆ ಮಾಡಬಹುದು.












Click it and Unblock the Notifications