ಉಡುಪಿಯಲ್ಲಿ ರಸ್ತೆ ಅಪಘಾತ: ಲಾರಿ ಚಾಲಕ ಸ್ಥಳದಲ್ಲೇ ಸಾವು

ಉಡುಪಿ, ಏಪ್ರಿಲ್ 21: ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲದಲ್ಲಿ ನಡೆದಿದೆ.

ಇಂದು ಮುಂಜಾನೆ 4:30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಹುಬ್ಬಳ್ಳಿಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಮಸೀದಿ ಬಳಿ ಕೆಟ್ಟು ನಿಂತಿತ್ತು.

ಇದೇ ಸಂದರ್ಭದಲ್ಲಿ ಆ ಲಾರಿ ಚಾಲಕ ಕಲಘಟಗಿ ನಿವಾಸಿ ಮಹಾಂತೇಶ್ ಗೌಲಿ (33) ಎಂಬುವವರು ಲಾರಿ ಕೆಳಗಡೆ ಮಲಗಿ ರಿಪೇರಿ ಮಾಡುತ್ತಿದ್ದರು. ಇದೇ ವೇಳೆ ಉಡುಪಿ ಕಡೆಯಿಂದ ಮಂಗಳೂರಿನತ್ತ ಅದೇ ದಾರಿಯಾಗಿ ಬರುತ್ತಿದ್ದ ಲಾರಿಯು ಕೆಟ್ಟು ನಿಂತ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ.

Road Accident In Udupi: Lorry Driver Died On The Spot

ಇದರ ಪರಿಣಾಮ ಕೆಟ್ಟು ನಿಂತ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಫಘಾತದ ತೀವ್ರತೆಗೆ ಕೆಟ್ಟು ನಿಂತ ಲಾರಿ ಎಕ್ಸೆಲ್ ಸಹಿತ ನಾಲ್ಕೂ ಚಕ್ರ ಬೇರ್ಪಟ್ಟು ಲಾರಿ ನುಜ್ಜುಗುಜ್ಜಾಗಿದೆ.

Road Accident In Udupi: Lorry Driver Died On The Spot

ಸ್ಥಳಕ್ಕೆ ಕೂಡಲೇ ಪಡುಬಿದ್ರಿ ಪೊಲೀಸರು ಆಗಮಿಸಿದ್ದು, ಸ್ಥಳೀಯರ ಸಹಕಾರದಿಂದ ಲಾರಿಯಲ್ಲಿದ್ದ ಸರಕುಗಳನ್ನು ಖಾಲಿ ಮಾಡಿ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+