ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಗೆ ಶುಭ ಹಾರೈಸಿದ ಪೇಜಾವರ ಶ್ರೀ

ಉಡುಪಿ, ಜೂನ್ 22 : ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ರಾಮ್ ನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಿದಕ್ಕೆ ಉಡುಪಿಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿ ಪೇಜಾವರ ಶ್ರೀ, "ರಾಷ್ಟ್ರಪತಿ ಹುದ್ದೆಗೆ ಓರ್ವ ದಲಿತ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಸಂತೋಷವಾಗಿದೆ. ರಾಮ್ ನಾಥ್ ಕೋವಿಂದ್ ರಾಷ್ಟ್ರಪತಿಯಾಗಿ ಆಯ್ಕೆಯಾಗಬಹುದೆಂಬ ನಿರೀಕ್ಷೆಯಿದ್ದು, ಕೋವಿಂದ್ ಅವರಿಗೂ ಮತ್ತು ದೇಶಕ್ಕೂ ಒಳ್ಳೆಯದಾಗಲಿ ಎಂದು ಹಾರೈಸಿದರು.

Ramnath Kovind’s selection a matter of pride for dalits - pejawar shree

ದಲಿತರು ದೇಶದ ಪ್ರಥಮ ಪ್ರಜೆಯಾಗಬೇಕು ಎಂದು ಮಹಾತ್ಮ ಗಾಂಧೀಜಿಯವರೇ ಹೇಳಿದ್ದರು. ಆ ಸ್ಥಾನಕ್ಕೆ ರಾಮ್ ನಾಥ್ ಕೋವಿಂದ್ ಸೂಕ್ತ ವ್ಯಕ್ತಿ. ಕೋವಿಂದ್ ಆಯ್ಕೆ ಬಗ್ಗೆ ಟೀಕೆಗೆ ಕಾರಣವಿಲ್ಲ, ದಲಿತ ಸಮುದಾಯದ ಕಡೆ ಎಲ್ಲರೂ ಗಮನ ಕೊಡಬೇಕು.

ದಲಿತರು ರಾಷ್ಟ್ರೀಯ ವಾಹಿನಿಗೆ ಬರಬೇಕು. ದೇಶದಲ್ಲಿ ದಲಿತರ ಮೇಲೆ ಕಿರುಕುಳ ಇನ್ನೂ ನಡೆಯುತ್ತಿದೆ. ರಾಮ್ ನಾಥ್ ಅವರು ರಾಷ್ಟ್ರಪತಿಯಾದರೆ ಅಸ್ಪೃಶ್ಯತೆ ನಿವಾರಣೆಯಾಗಬಹುದು ಎಂದು ಶ್ರೀಗಳು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+