ಜನರ ಶ್ರಮಕ್ಕೆ ಮಾಡುವ ಅವಮಾನ ನಿಲ್ಲಿಸಿ: ಮೋದಿಗೆ ರಾಹುಲ್ ಆಗ್ರಹ

Recommended Video

      ನರೇಂದ್ರ ಮೋದಿಜೀ, ಜನರ ಶ್ರಮಕ್ಕೆ ಅವಮಾನ ಮಾಡೋದು ನಿಲ್ಲಿಸಿ ಅಂದ್ರು ರಾಹುಲ್ | Oneindia Kannada

      ಪಡುಬಿದ್ರಿ (ಉಡುಪಿ), ಮಾರ್ಚ್ 20: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕರಾವಳಿ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದು, ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಇಂದು ಮಧ್ಯಾಹ್ನ ಪಡುಬಿದ್ರಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಮೋದಿ ಹೇಳುತ್ತಿದ್ದಾರೆ. ಇದು ಹಿರಿಯರು, ಈ ದೇಶದ ರೈತರು, ಬಡವರ ಶ್ರಮಕ್ಕೆ ಮಾಡಿದ ಅವಮಾನ ಎಂದು ಹೇಳಿರುವ ರಾಹುಲ್, ದೇಶದ ಜನರ ಶ್ರಮಕ್ಕೆ ಮಾಡುವ ಅವಮಾನವನ್ನು ತಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.

      In Pics: ರಾಹುಲ್ ಗಾಂಧಿ ಸ್ವಾಗತಕ್ಕೆ ಸಿಂಗಾರಗೊಂಡ ಮಂಗಳೂರು

      "ನರೇಂದ್ರ ಮೋದಿ ಹೋದಲ್ಲಿ ಬಂದಲ್ಲಿ 70 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುತ್ತಾರೆ. ದೇಶದಲ್ಲಿ ಒಬ್ಬರೇ ಏನೂ ಮಾಡಲು ಸಾಧ್ಯವಿಲ್ಲ. ದೊಡ್ಡ ರಾಷ್ಟ್ರಗಳ ಮುಂದೆ ಇವತ್ತು ಭಾರತ ತಲೆ ಎತ್ತಿ ನಿಲ್ಲಬೇಕಿದ್ದರೆ ಇದರ ಹಿಂದೆ ಹಲವು ವರ್ಷಗಳ ಶ್ರಮ ಇದೆ. ಒಬ್ಬ ವ್ಯಕ್ತಿಯಿಂದ ಈ ದೇಶ ಪ್ರಗತಿಯಾಗುವುದಿಲ್ಲ. ಈ ದೇಶದ 125 ಕೋಟಿ ಜನರು ಒಗ್ಗೂಡಿದಾಗ ಮಾತ್ರ ಪ್ರಗತಿ ಸಾಧ್ಯ," ಎಂದು ಅಭಿಪ್ರಾಯಪಟ್ಟರು.

      Rahul Gandhi wants Modi to stop insulting peoples efforts

      "ಇವತ್ತು ಈ ದೇಶ ತಲೆ ಎತ್ತಿ ನಿಂತಿದ್ದರೆ ಅದಕ್ಕೆ ನಿಮ್ಮ ತಂದೆ-ತಾಯಿ, ಬಡವರು, ಸಣ್ಣ ಉದ್ಯಮಿಗಳ ಅವಿರತ ಶ್ರಮವೇ ಕಾರಣ. ಭಾರತ, ಕರ್ನಾಟಕ ಪ್ರಗತಿಯಾಗಿದೆ ಎಂದರೆ ಅದಕ್ಕೆ ಇವರೆಲ್ಲಾ ಬೆವರು, ರಕ್ತ ಸುರಿಸಿದ್ದಾರೆ," ಎಂದು ಹೇಳಿದ ರಾಹುಲ್, "ನರೇಂದ್ರ ಮೋದಿಯವರ ಮಾತು ಈ ದೇಶದ ಬಡವರು, ಸಣ್ಣ ಉದ್ಯಮಿಗಳು, ತಂದೆ-ತಾಯಿ, ರೈತರಿಗೆ ಮಾಡುವ ಅವಮಾನವಾಗಿದ್ದು ಅವರು ಈ ಕೂಡಲೇ ಈ ರೀತಿ ಅವಮಾನ ಮಾಡುವುದನ್ನು ನಿಲ್ಲಿಸಬೇಕು," ಎಂದು ಆಗ್ರಹಿಸಿದ್ದಾರೆ.

      "ನರೇಂದ್ರ ಮೋದಿ ಜೀ ನೀವು ಬಸವಣ್ಣರನ್ನು ಹೊಗಳುತ್ತೀರಿ. ಆದರೆ ನಿಮಗೆ ಬಡವ-ಬಲ್ಲಿದರ ಬಗ್ಗೆ ಕಾಳಜಿ ಇಲ್ಲ. 15 ಲಕ್ಷ ಬೇಡ ಖಾತೆಗೆ 10 ರುಪಾಯಿ ಹಾಕಿ. ಮೋದಿ ಜೀ ನೀವು ನುಡಿದಂತೆ ನಡೆಯಿರಿ," ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಎಷ್ಟು ಯುವಕರಿಗೆ ಮೋದಿ ಕೆಲಸ ಕೊಟ್ಟಿದ್ದಾರೆ ಎಂದೂ ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

      Rahul Gandhi wants Modi to stop insulting peoples efforts

      ಉಡುಪಿಯ ಊಟ ಮತ್ತು ಉಪಾಹಾರವನ್ನು ಇಂದು ವಿಶ್ವದ ಎಲ್ಲೆಡೆ ನೋಡಬಹುದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

      ದೇಶದಲ್ಲಿ ಟೆಲಿಕಾಂ ಕ್ರಾಂತಿಯಾಗಲು ಕರ್ನಾಟಕದ ಯುವಜನರೂ ಕಾರಣ. ಕರ್ನಾಟಕದ ಯುವಜನರು ಟೆಲಿಕಾಂ ಕ್ರಾಂತಿಗೆ ಅವಿರತವಾಗಿ ದುಡಿದಿದ್ದಾರೆ ಎಂದು ರಾಹುಲ್ ಗಾಂಧಿ ಹೊಗಳಿದರು.

      ಅಮೆರಿಕನ್ನರು ಜಾತಿ, ಧರ್ಮ, ಪ್ರದೇಶಗಳನ್ನು ನೋಡದೆ ಅವರೆಲ್ಲರೂ ಭಾರತದ ಕಡೆ ನೋಡುತ್ತಿದ್ದಾರೆ. ಇದಕ್ಕೆಲ್ಲಾ ಭಾರತದ ಪ್ರಗತಿಯೇ ಕಾರಣ. ಪ್ರೀತಿ ಮತ್ತು ವಿಶ್ವಾಸದಿಂದ ದೇಶವನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎಂದು ಅವರು ಹೆಮ್ಮೆಯಿಂದ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+