• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಲ್ಲಿ ಭಾರೀ ಮಳೆ: ಪ್ರತ್ಯೇಕ ಅವಘಡದಲ್ಲಿ ಇಬ್ಬರ ಸಾವು

By ಉಡುಪಿ ಪ್ರತಿನಿಧಿ
|

ಉಡುಪಿ, ಸೆಪ್ಟೆಂಬರ್ 3: ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯ ಸಂದರ್ಭ ಬೈಕ್ ಸವಾರನ ಮೇಲೆ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಕೊಲ್ಲೂರು ಮಾರ್ಗ ಹೆಬ್ರಿ ದೂಪದಕಟ್ಟೆ ಬೇಳಂಜೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಹೆಬ್ರಿ ಬೇಳಂಜೆಯ ಪ್ರದೀಪ್ ಶೆಟ್ಟಿ ಮೃತಪಟ್ಟ ನತದೃಷ್ಟ.

   MJ Appaji Gowda JDS ಶಕ್ತಿ ಭದ್ರಾವತಿ ಶಾಸಕ ಇನ್ನಿಲ್ಲ | Oneindia Kannada

   ನಿನ್ನೆ ಸುರಿದ ಭಾರೀ ಗಾಳಿಗೆ ರಸ್ತೆ ಪಕ್ಕ ಇದ್ದ ಮರ ಉರುಳಿಬಿದ್ದಿದೆ. ಇದೇ ಸಂದರ್ಭ ಬೈಕ್ ನಲ್ಲಿ ಸಾಗುತ್ತಿದ್ದ ಪ್ರದೀಪ್ ಶೆಟ್ಟಿ ಮೇಲೆ ಮರ ಬಿದ್ದಿದೆ. ಸ್ಥಳಕ್ಕೆ ಭೇಟಿ ನೀಡಿದ ಹೆಬ್ರಿ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.

   ಶಿವಮೊಗ್ಗ ಕ್ರಶರ್ ಅವಘಡ; ಅಸ್ಸಾಂನ ಇಬ್ಬರು ಕಾರ್ಮಿಕರ ಸಾವು

   ಮಳೆ ಸಂದರ್ಭ ನಡೆದ ಅಪಘಾತದಲ್ಲಿ ಕುಂದಾಪುರ ತಾಲೂಕಿನ ತಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಮತ್ತು ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಈ ವೇಳೆ ಬೈಕ್ ಸವಾರ ಸೀತಾರಾಂ ಶೆಟ್ಟಿ (48) ಸ್ಥಳದಲ್ಲೇ ಅಸುನೀಗಿದ್ದಾರೆ.

   ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

   English summary
   A person dies by falling tree on him due to heavy rain in udupi district last night,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X