ಗೋ ರಕ್ಷಣೆಗಾಗಿ ಪೇಜಾವರ ಶ್ರೀಗಳಿಂದ ಫೆ. 26ರಂದು ಸತ್ಯಾಗ್ರಹ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಡಿಸೆಂಬರ್, 24 : ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಒತ್ತಾಯಿಸಿ ರಾಜ್ಯ ಗೋಶಾಲೆಗಳ ಒಕ್ಕೂಟದ ವತಿಯಿಂದ ಫೆಬ್ರವರಿ 26 ರ ಬೆಳಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ ರಾಜ್ಯಾದ್ಯಂತ ಸಂತರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಗೋ ರಕ್ಷಣೆ ವಿಚಾರವಾಗಿ ಶ್ರೀ ಕೃಷ್ಣ ಮಠದಿಂದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ. ಇದೇ ವೇಳೆ ತಾವು ಕೂಡ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.

ಗೋವುಗಳ ರಕ್ಷಣೆ ಜೊತೆಗೆ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಬೇಕು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಇದು ಜಾರಿಗೆ ಬರುತ್ತಿಲ್ಲ ಎಂದು ಪೇಜಾವರ ಶ್ರೀ ಕಿಡಿಕಾರಿದರು.

Pejawar seer to fast for a day to support ‘Go-Satyagraha’ on February 26, 2017

ಬೇರೆ ಎಲ್ಲಾ ಪ್ರಾಣಿಗಳಿಗೆ ರಕ್ಷಣೆ ಇದ್ದರೂ ಗೋಗಳಿಗೆ ಯಾಕೆ ರಕ್ಷಣೆ ಇಲ್ಲ ಎಂದು ಪ್ರಶ್ನಿಸಿದರು. ಗೋ ಹತ್ಯೆ ನಿಷೇಧ ದೇಶದಲ್ಲಾಗಬೇಕು. ಇದಕ್ಕೆ ಪ್ರತಿ ರಾಜ್ಯ ಸರ್ಕಾರಗಳ ಬೆಂಬಲ ಸಹ ಅಗತ್ಯ ಎಂದರು.

ಹೀಗಾಗಿ ಸರ್ಕಾರವನ್ನು ಎಚ್ಚರಿಸುವ ಹಾಗೂ ಜನಜಾಗೃತಿ ಮೂಡಿಸಲು ನಾವು ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Vishwesha Tirtha Swami of Pejawar Mutt said on Thursday that he would sit on a day’s fast here from 10 a.m. to 4 p.m. on February 26, 2017 to support the State-wide “Go Satyagraha” seeking a ban on cow slaughter in the country and other demands related to cow.
Please Wait while comments are loading...