ಶ್ರೀಕೃಷ್ಣಕಥಾ – ಚಿಕ್ಕಮಕ್ಕಳಿಗಾಗಿ ಆನ್ ಲೈನ್ ಕಥಾ ಸ್ಪರ್ಧೆ

Posted By:
Subscribe to Oneindia Kannada

ಉಡುಪಿ, ಆಗಸ್ಟ್ 01 : ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ, ಶ್ರೀಹೃಷೀಕೇಶತೀರ್ಥ ಪೀಠ, ಶ್ರೀಪಲಿಮಾರು ಮಠ - ಉಡುಪಿ ಶ್ರೀಕೃಷ್ಣಕಥಾ - ಚಿಕ್ಕಮಕ್ಕಳಿಗಾಗಿ ಆನ್ ಲೈನ್ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಿದೆ.

ನಿಮ್ಮ ಮನೆಯಲ್ಲಿ 5 ರಿಂದ 8 ವರ್ಷದ ಮಗುವಿದೆಯೇ?
ಆ ಪುಟಾಣಿಯ ಮುದ್ದು ಮಾತನ್ನು ಎಲ್ಲರಿಗೂ ತೋರಿಸುವ ಬಯಕೆಯೇ ನಿಮಗೆ?
ಸ್ಮಾರ್ಟ್ ಫೋನೊಂದು ಇರಲೇಬೇಕಲ್ಲ ನಿಮ್ಮ ಬಳಿ!?

ಹಾಗಿದ್ದರೆ ಪಲಿಮಾರು ಮಠವು ಏರ್ಪಡಿಸಿರುವ ಕೃಷ್ಣನ ಕಥೆಯನ್ನು ಹೇಳುವ ಸ್ಪರ್ಧೆಯಲ್ಲಿ ನಿಮ್ಮ ಪ್ರಯತ್ನ ಹಾಗು ಮಗುವಿನ ಪ್ರತಿಭೆಯನ್ನು ಪ್ರದರ್ಶಿಸಿರಿ! ಜನ್ಮಾಷ್ಟಮಿಯ ಪ್ರಯುಕ್ತವಾಗಿ ಪುಟಾಣಿ ಮಕ್ಕಳಿಗಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದೊಂದು ಆನ್ ಲೈನ್ ಸ್ಪರ್ಧೆಯಾಗಿದ್ದು ಯಾರು ಬೇಕಾದರೂ ಭಾಗವಹಿಸಬಹುದು. ಆಗಸ್ಟ್ 11,2017 ಕೊನೆ ದಿನಾಂಕ.

Palimaru Matha – Udupi Sri Krishna Online Story telling competition for Kids

ನಿಯಮಗಳು
1. ಕಥೆಯನ್ನು ಕನ್ನಡ / ತೆಲುಗು / ತಮಿಳು / ಹಿಂದಿ ಭಾಷೆಯಲ್ಲಿ ಹೇಳಬಹುದು. ಆದರೆ, ಒಬ್ಬ ಕಂದನಿಗೆ ಒಂದು ಭಾಷೆಯಲ್ಲಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ.

2. ಮಗುವಿನ ವಯಸ್ಸು 5 ರಿಂದ 7ರ ಒಳಗೆ ಇರಲಿ. ಇದನ್ನು ನಿರ್ಧರಿಸಲು ನಾವೇನೂ ಮತ್ತೊಂದು ಪರೀಕ್ಷೆಯನ್ನು ಮಾಡೆವು. ನಿಮ್ಮ ಪ್ರಾಮಾಣಿಕತೆಯೇ ನಮ್ಮ ನಂಬಿಕೆಯಾಗಿದೆ.

3. ಒಂದೇ ಕುಟುಂಬದಲ್ಲಿ ಇರಬಹುದಾದ ಈ ವಯಸ್ಸಿನ ಎಲ್ಲ ಮಕ್ಕಳೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದರೆ ನಿಯಮ 1 ಹಾಗು 2 ಇವುಗಳಿಗೂ ಅನ್ವಯಿಸುತ್ತದೆ.

4. ಕಥೆಯು 3 ನಿಮಿಷಕ್ಕಿಂತ ಹೆಚ್ಚು ಇರಕೂಡದು. ಟೈಟಲ್ ಇತ್ಯಾದಿಗಳನ್ನು ಸೇರಿಸಿರುವ ವಿಡಿಯೋ ಆದಲ್ಲಿ ಕಥೆಯೂ ಸೇರಿ ವಿಡಿಯೋದ ಒಟ್ಟಾರೆ ಉದ್ದ 210 ಸೆಕೆಂಡುಗಳಿಗಿಂತ ಹೆಚ್ಚಾಗಿರಬಾರದು.

5. ಹಾರಿಜಾಂಟಲ್ ಮೋಡ್‌ನಲ್ಲಿಯೇ ವಿಡಿಯೋ ಶೂಟ್ ಮಾಡುವುದು ಕಡ್ಡಾಯ. ಅಂದರೆ ಫೋನನ್ನು ಉದ್ದಕ್ಕೆ ಹಿಡಿದು ವಿಡಿಯೋ ಮಾಡದಿರಿ. ಅಡ್ಡ ಹಿಡಿದೇ ಮಾಡಿರಿ.

6. ರೆಕಾರ್ಡ್ ಮಾಡಿರುವುದನ್ನು ಯುಟ್ಯೂಬಿಗೆ ಸೇರಿಸಿ. ವಿಡಿಯೋ ಜೊತೆಗೆ #palimaru_krishna_katha ಎನ್ನುವ ಹ್ಯಾಷ್ ಟ್ಯಾಗನ್ನು ಸೇರಿಸಲು ಮರೆಯದಿರಿ. ಯೂಟ್ಯೂಬಿನಲ್ಲಿಯೇ ವಿಡಿಯೋದ ಕೆಳಗೆ ಇರುವ ವಿವರಣೆಯ ವಿಭಾಗದಲ್ಲಿ ಮಗುವಿನ ಹೆಸರು, ತಂದೆ ತಾಯಿಯ ಹೆಸರು, ಊರಿನ ಹೆಸರು, ಅಧ್ಯಯನ ಮಾಡುತ್ತಿರುವ ತರಗತಿ, ಶಾಲೆಯ ಹೆಸರನ್ನೂ ನಮೂದಿಸಿ.

7. ಯುಟ್ಯೂಬಿನಲ್ಲಿ ಸೇರಿಸಿದ ನಂತರ ನಿಮ್ಮವರೆಲ್ಲರೊಂದಿಗೆ ಅದನ್ನ ಹಂಚಿಕೊಳ್ಳಿರಿ. ಜೊತೆಗೆ ಈ ಕೆಳಕಾಣಿಸಿದ ವಿಳಾಸಕ್ಕೂ ವಿಡಿಯೋ ಕೊಂಡಿಯನ್ನು (ವಿಡಿಯೋ ಕೊಂಡಿ ಎಂದು ಹೇಳಿರುವುದನ್ನು ಗಮನಿಸಿ. ಸಂಪೂರ್ಣ ವಿಡಿಯೋವನ್ನೇ ಎಂದು ಗೊಂದಲ ಮಾಡಿಕೊಳ್ಳದಿರಿ) ಈಮೈಲ್ ಮಾಡಿರಿ ಅಥವಾ ಕೆಳಕಾಣಿಸಿದ ಸಂಖ್ಯೆಗೆ ವಾಟ್ಸ್ಯಾಪ್ ಸಂದೇಶ ಕಳುಹಿಸಿ.

ಫೇಸ್ ಬುಕ್ಕಿನಲ್ಲಿ ಹಂಚಿಕೊಳ್ಳುವಾಗಲೂ ಯುಟ್ಯೂಬ್ ಲಿಂಕ್ ಅನ್ನೇ ಬಳಸಿರಿ. ಅಲ್ಲಿಯೂ #palimaru_krishna_katha ಟ್ಯಾಗಿನ ಜೊತೆಗೆ @Palimaru Matha - Udupi ಎನ್ನುವುದನ್ನೂ ಸೇರಿಸಿಕೊಳ್ಳಿರಿ. ಈ ಟ್ಯಾಗ್ ಇಲ್ಲದ ವಿಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸಲಾಗದು.

ನಿಮ್ಮ ವಿಡಿಯೋ ಲಿಂಕ್ ಅನ್ನು info@palimarumatha.org ಇಲ್ಲಿಗೆ ಕಳಿಸಿಕೊಡಿ. ಫೇಸ್ಬುಕ್ಕಿನಲ್ಲಿ ಕಳಿಸುತ್ತೀರಾದಲ್ಲಿ @Palimaru Matha - Udupi ಇದಕ್ಕೆ ಟ್ಯಾಗ್ ಮಾಡಿರಿ. ವಾಟ್ಸ್ಯಾಪ್ ಪ್ರಿಯರಾದಲ್ಲಿ ಈ ಕೆಳಕಂಡ ಸ್ವಯಂಸೇವಕರಿಗೆ ಯಾರಾದರೂ ಒಬ್ಬರಿಗೆ ಕಳಿಸಿರಿ.

Palimaru Matha – Udupi Sri Krishna Online Story telling competition for Kids

ಕನ್ನಡ
Dr. Vamshi Krishna Acharya : 8123458634
Srinivasa Bhat : 9480640050
Vishvavijaya Bhat : 9743701372
Jeevan Raj : 9164149680
Bhanu Simha : 9964068046
Smt. Sandhya Shingoti : 9403039825
Venugopal Bhat : 9844361289

ಏನಪ್ಪಾ ಇದಕ್ಕೆ ಸಿಗುವ ಪ್ರೈಜು?
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಮಗುವಿಗೂ ಆನ್ಲೈನ್ ಮೂಲಕ ಒಂದು ಪ್ರಶಸ್ತಿಪತ್ರವನ್ನು ಕಳಿಸಲಾಗುವುದು.
ಪ್ರತಿ ಒಂದು ಭಾಷೆಯಲ್ಲಿಯೂ ಮೊದಲಸ್ಥಾನ ಪಡೆದ ಮಗುವಿಗೆ ಶ್ರೀರಾಮಚಂದ್ರದೇವರಿಗೆ ಸಮರ್ಪಣೆ ಮಾಡಿದ ಒಂದು ಬೆಳ್ಳಿಯ ತುಳಸೀಮಾಲೆಯನ್ನು ಪಾರಿತೋಷಕವಾಗಿ ನೀಡಲಾಗುವುದು.

Udupi :Pejawara Shri speaks about Iftar get together | Watch video | Oneindia Kannada

ನಿಮ್ಮ ಮಗುವಿನ ವಿಡಿಯೋ ಕಥೆಯು ಚೆನ್ನಾಗಿ ಕಾಣಿಸಲು ಒಂದಿಷ್ಟು ಸಲಹೆಗಳು
* ಕಥೆ ಹೇಳುತ್ತಿರುವಾಗ ಇತರರು ಬಳಸುತ್ತಿರುವ ಮೊಬೈಲ್ ಫೋನುಗಳನ್ನು ನಿಷ್ಕ್ರಿಯಗೊಳಿಸಿ.
* ಸಹಜವಾಗಿಯೆ ಬೆಳಕು ಬರುತ್ತಿರುವ ಜಾಗದಲ್ಲಿ ವಿಡಿಯೋ ಚಿತ್ರೀಕರಣ ಮಾಡಿರಿ
* ಬಾಗಿಲು ಮುಚ್ಚಿದ ಕೋಣೆಯಲ್ಲಿ ಚಿತ್ರೀಕರಣ ಮಾಡುವುದಾದಲ್ಲಿ ಪ್ರತಿಧ್ವನಿ ಬಾರದಂತೆ ನೋಡಿಕೊಳ್ಳಿ. ಸೋಫಾ ಇತ್ಯಾದಿ * ಪೀಠೋಪಕರಣಗಳು ಇರುವಲ್ಲಿ ಪ್ರತಿಧ್ವನಿ ಬರುವ ಸಾಧ್ಯತೆಗಳು ಕಡಿಮೆ.
* ಮಗುವಿನ ಬಟ್ಟೆಯು ಹಿನ್ನೆಲೆಯ ಬಣ್ಣದಲ್ಲಿ ಮುಚ್ಚಿ ಹೋಗದಂತೆ ಇರಲಿ.
* ಮಗುವಿನಲ್ಲಿ ಆತ್ಮವಿಶ್ವಾಸ ತುಂಬಿ, ಕಥೆಯನ್ನು ಹೇಳುವಾಗ ಭಾವನೆಗಳನ್ನು ಮುಖದಲ್ಲಿ ತೋರಿಸುವುದು ಹೇಗೆಂದು ಹೇಳಿಕೊಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Palimaru Matha – Udupi is conducting Sri Krishna Online story telling competition for Kids across Karnataka. Interested can send their entries latest by Aug 11, 2017
Please Wait while comments are loading...