ಉಡುಪಿಗೆ ಬರಲಿದೆ 2.5 ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಡೇರಿ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಎಪ್ರಿಲ್ 17: ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದಲ್ಲಿ 2.5 ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ಹಾಲಿನ ಡೇರಿ ಸದ್ಯದಲ್ಲೇ ತಲೆ ಎತ್ತಲಿದೆ.

ಹಾಲಿನ ಡೈರಿಯ ಶಂಕು ಸ್ಥಾಪನೆ ಕೂಡಾ ನೇರವೇರಿದ್ದು, ಉಪ್ಪೂರಿನಲ್ಲಿ 5.9 ಎಕರೆ ಜಾಗದಲ್ಲಿ ಸುಮಾರು 92 ಕೋಟಿ ವೆಚ್ಚದಲ್ಲಿ ಈ ಡೇರಿ ನಿರ್ಮಾಣವಾಗುತ್ತಿದೆ. ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿ ವತಿಯಿಂದ ಟರ್ನ್ ಕೀ ಆಧಾರದಲ್ಲಿ 2.5 ಲಕ್ಷ ಲೀ. ಸಾಮರ್ಥ್ಯದ ಈ ಡೇರಿ ನಿರ್ಮಾಣವಾಗಲಿದೆ.

ಉಡುಪಿ ಜಿಲ್ಲೆಯಲ್ಲಿ 95 ಹಾಲು ಉತ್ಪಾದಕರ ಮಹಿಳಾ ಸಂಘಗಳಿವೆ. ಜೊತೆಗೆ 326 ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. 17 ಹಾಲು ಸಂಗ್ರಹಣಾ ಮಾರ್ಗಗಳು ಹಾಗೂ 40 ಬಿ.ಎಂ.ಸಿ. ಕೇಂದ್ರಗಳ ಮೂಲಕ ದಿನಾಲೂ ಸರಾಸರಿ 1.87 ಲಕ್ಷ ಲೀಟರ್ ಹಾಲು ಇಲ್ಲಿ ಸಂಗ್ರಹಣೆಯಾಗುತ್ತದೆ.[ರೈಲ್ವೆ ಚಿಲ್ಡ್ರನ್, ರಿಸರ್ವೇಶನ್ ಚಿತ್ರಗಳಿಗೆ ಉಡುಪಿಯ ನಂಟು]

New milk dairy to come up at Udupi's Uppur

ಈ ಹಿಂದೆ ಮಂಗಳೂರಿನ ಮಂಗಳೂರಿಗೆ ಹಾಲು ಕೊಂಡೊಯ್ಯಬೇಕಾಗಿತ್ತು. ಇದೀಗ ಡೈರಿ ಉಡುಪಿಯಲ್ಲೇ ನಿರ್ಮಾಣವಾಗುವುದರಿಂದ ಹಾಲು ಉತ್ಪಾದಕರಿಗೆ ಸಹಕಾರಿಯಾಗಲಿದೆ.

ಓಮರ್ ಅಬ್ದುಲ್ಲಾ ವಿರುದ್ಧ ಕುಮಾರಸ್ವಾಮಿ ಗರಂ
ಸೋಮವಾರ ಉಡುಪಿಗೆ ಭೇಟಿ ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರನ್ನು ಪಾಕಿಸ್ತಾನ ಮಾಜಿ ಪ್ರಧಾನಿ ಮುಷರಫ್ ಗೆ ಹೋಲಿಸಿ ಟ್ವೀಟ್ ಮಾಡಿದ್ದ ಉಮರ್ ಅಬ್ದುಲ್ಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.[15ರೂ.ಗೆ ಊಟ ನೀಡುತ್ತಿದ್ದ 'ಅನ್ನದಾತೆ' ಅಜ್ಜಮ್ಮ ಇನ್ನಿಲ್ಲ]

ಉಡುಪಿಯಲ್ಲಿ ಮಾತನಾಡಿದ ಅವರು, 'ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ದೇವೇಗೌಡರ ಕೊಡುಗೆ ಅಪಾರ. ಅಲ್ಲಿ ಶಾಂತಿ , ನೆಮ್ಮದಿ ನೆಲೆಸಲು ದೇವೇಗೌಡರೇ ಕಾರಣ. ಇದು ಓಮರ್ ಅಬ್ದುಲ್ಲಾ ಅವರಿಗೆ ತಿಳಿಯದಿದ್ದರೆ ತಂದೆ ಫಾರೂಕ್ ಅಬ್ದುಲ್ಲಾ ಅವರನ್ನು ಕೇಳಲಿ. ದೇವೇಗೌಡರು ಪ್ರಧಾನಿ ಆಗಿದ್ದಾಗ ಓಮರ್ ವಿದೇಶದಲ್ಲಿದ್ದರು' ಎಂದರು.

ಇದೇ ವೇಳೆ ಉಡುಪಿ ಜಿಲ್ಲಾಧಿಕಾರಿ‌ ಕೊಲೆ ಯತ್ನ ಪ್ರಕರಣದ ಕುರಿತು ಮಾತನಾಡಿದ ಹೆಚ್ ಡಿಕೆ, "ಅಕ್ರಮ ಮರಳು ದಂಧೆಯ ಮಾಲೀಕರ ಬಂಧನ‌ ಅಸಾಧ್ಯ. ಮರಳು ಮಾಫಿಯಾಕ್ಕೆ ಸರಕಾರದ ನೇರ ರಕ್ಷಣೆ ಇದೆ. ಸರಕಾರದಿಂದ ಅಧಿಕಾರಿಗಳಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲ. ಇನ್ನು ಜನಸಾಮಾನ್ಯರಿಗೆ ಎಲ್ಲಿದೆ ರಕ್ಷಣೆ..?," ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New milk dairy with a huge capacity of 2.5 lack liters is under construction in Uppur village of Udupi. Which will benefits to the farmers of Udupi district who involved in animal husbandry.
Please Wait while comments are loading...