ಉಡುಪಿಯ ನವನೀತ್ ಶೆಟ್ಟಿ ಜಿಮ್ ನಲ್ಲಿ ಸಿಐಡಿ ಪರಿಶೀಲನೆ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಸೆಪ್ಟೆಂಬರ್ 21: ಉದ್ಯಮಿ ಕೆ. ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಿಐಡಿ ಕಸ್ಟಡಿಯಲ್ಲಿರುವ ಆರೋಪಿ ನವನೀತ ಶೆಟ್ಟಿಯನ್ನು ಸಿಐಡಿ ಪೊಲೀಸರು ಉಡುಪಿ ಶಂಕರ್ ಬಿಲ್ಡಿಂಗ್‌ನಲ್ಲಿರುವ ಆತನ ಜಿಮ್‌ಗೆ ಕರೆದುಕೊಂಡು ಬಂದು ಪರಿಶೀಲನೆ ಮಾಡಿದ್ದಾರೆ.

ಭಾಸ್ಕರ ಶೆಟ್ಟಿ ಕೊಲೆಯಾಗುವ ಮೂರು ತಿಂಗಳ ಮುಂಚೆಯಷ್ಟೇ ನವನೀತ್ ಶೆಟ್ಟಿಯ ಆಕ್ಸಿ ಜಿಮ್ ಆರಂಭಗೊಂಡಿತ್ತು. ಭಾಸ್ಕರ್ ಶೆಟ್ಟಿ ಸೌದಿಯಿಂದ ಬರುವುದಕ್ಕಿಂತ ಎರಡು ವಾರ ಮೊದಲೇ ಇದನ್ನು ತರಾತುರಿಯಲ್ಲಿ ನಿರಂಜನ ಭಟ್ಟನ ಉಸ್ತುವಾರಿಯಲ್ಲಿ ಉದ್ಘಾಟಿಸಲಾಗಿತ್ತು. ಮಂಗಳವಾರ ಆ ಜಿಮ್‌ಗೆ ಭೇಟಿ ನೀಡಿದ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಅಲ್ಲದೆ ಇತರೆಡೆಗೆ ಕೂಡ ಕರೆದುಕೊಂಡು ಹೋಗಿ, ಮಾಹಿತಿ ಕಲೆ ಹಾಕುತ್ತಿದ್ದಾರೆ.[ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಕ್ಯಾಂಟೀನ್ ಊಟ, ಬಸ್ ಪ್ರಯಾಣ]

Navaneeth-bhaskar shetty

ಮಂಗಳೂರು ಜೈಲಿನಲ್ಲಿದ್ದ ನವನೀತ ಶೆಟ್ಟಿಯನ್ನು ಸೋಮವಾರ ಸಿಐಡಿ ಕಸ್ಟಡಿಗೆ ಪಡೆಯಲಾಗಿತ್ತು. ನಿರಂಜನ ಭಟ್ ಕೂಡ ಸಿಐಡಿ ವಶದಲ್ಲೇ ಇದ್ದರೂ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi businessman Bhaskar shetty murder accused Navaneeth shetty's gym in Udupi inspected by CID police on Tuesday.
Please Wait while comments are loading...