ಡಿಕೆಶಿಗಾಗಿ ಕೊಲ್ಲೂರಿನಲ್ಲಿ ನವಚಂಡಿಕಾ ಹೋಮ
ಉಡುಪಿ, ಜನವರಿ 19: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಹಾರೈಸಿ ಕೊಲ್ಲೂರು ದೇವಸ್ಥಾನದಲ್ಲಿ ಚಂಡಿಕಾಹೋಮ ನಡೆಸಲಾಗಿದೆ.
ಜ್ಯೋತಿಷಿ ಹಾಗೂ ವಾಸ್ತು ತಜ್ಞರಾಗಿರುವ ಡಾ.ಬಿ.ಪಿ.ಆರಾಧ್ಯ ಅವರು ಈ ವಿಶೇಷ ಪೂಜೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ ಹಾಗೂ ಜ್ಯೋತಿಷಿ ಆಗಿರುವ ಆರಾಧ್ಯ ಅವರು ಕುಟುಂಬ ಸಮೇತರಾಗಿ ಬಂದು ಈ ಪೂಜೆ ನಡೆಸಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಜೈಲು ಸೇರಿದ್ದಾಗಲೂ ಅವರ ಶೀಘ್ರ ಬಿಡುಗಡೆಗೆ ಪ್ರಾರ್ಥಿಸಿ ಕೊಲ್ಲೂರಿನಲ್ಲಿ ಹೋಮ, ಪೂಜೆ ನಡೆಸಿದ್ದರು.

ಪೂಜೆ ನಡೆದ ಬೆನ್ನಲ್ಲೇ ಶಿವಕುಮಾರ್ ಬಿಡುಗಡೆಯಾಗಿತ್ತಂತೆ. ಈ ಬಾರಿಯೂ ಶಿವಕುಮಾರ್ ಅವರ ರಾಜಕೀಯ ಏಳಿಗೆಗೆ ಪ್ರಾರ್ಥಿಸಿ ಈ ನವಚಂಡಿಕಾ ಹೋಮ ನಡೆಸಿದ್ದಾರೆ. ಪೂಜಾ ಪ್ರಸಾದವನ್ನು ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ನೀಡುವುದಾಗಿ ತಿಳಿಸಿದ್ದಾರೆ.












Click it and Unblock the Notifications