ಆರೆಸ್ಸೆಸ್ ಮುಖಂಡ ಸೋಮಶೇಖರ್ ಭಟ್ ಗೂ ಬಂತು ಮೋದಿ ಕರೆ

ಉಡುಪಿ, ಏಪ್ರಿಲ್ 24: ಆರೆಸ್ಸೆಸ್ ಮುಖಂಡ, ಬಿಜೆಪಿ ನಾಯಕ ಸೋಮಶೇಖರ್ ಭಟ್ ಗೆ ಪ್ರಧಾನಿ ಮೋದಿ ಕರೆ ಮಾಡಿ ಕ್ಷೇಮಕುಶಲ ವಿಚಾರಿಸಿದ್ದಾರೆ.

ಸೋಮಶೇಖರ್ ಭಟ್ ಉಡುಪಿಯಲ್ಲಿ ಜನಸಂಘ ಕಾಲದಿಂದ ಬಿಜೆಪಿಯಲ್ಲಿ ಸಕ್ರಿಯವಾಗಿರುವ ನಾಯಕರು. ಇಂದು ಕರೆ ಮಾಡಿದ ಪ್ರಧಾನಿ ಮೋದಿ ಸೋಮಶೇಖರ ಭಟ್ ಅವರ ಆರೋಗ್ಯ ವಿಚಾರಿಸಿದ್ದಾರೆ.

ಕೋವಿಡ್-19 ಸಂದರ್ಭದಲ್ಲಿ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಮೋದಿ ಕಾಳಜಿ ವಹಿಸುತ್ತಿದ್ದು, ಅನೇಕ ಹಿರಿಯರಿಗೆ ಫೋನ್ ಮಾಡಿ ಮಾತನಾಡುತ್ತಿದ್ದಾರೆ. ಮೋದಿ ಕರೆಯಿಂದ ಸೋಮಶೇಖರ ಭಟ್ ಭಾವುಕರಾಗಿದ್ದು, "ಪ್ರಧಾನಿ ಕರೆಯಿಂದ ತುಂಬಾ ಖುಷಿಯಾಗಿದೆ" ಎಂದಿದ್ದಾರೆ. "ಭಯ್ಯಾಜಿ ರಾವ್ ಜೋಶಿಯವರ ಕಾಲದಿಂದ ನಾನು ಆರ್ ಎಸ್ ಎಸ್ ನಲ್ಲಿ ಕಲಸ ಮಾಡಿದ್ದೇನೆ. ಜಯಪುರ ಅಧೀವೇಶನದಲ್ಲೂ ನಿಮ್ಮನ್ನು ಭೇಟಿಯಾಗಿದ್ದೆ" ಎಂದು ಪ್ರಧಾನಿ ಜೊತೆ ಅನುಭವ ಹಂಚಿಕೊಂಡರು. ಮಾತ್ರವಲ್ಲ ಎಮರ್ಜೆನ್ಸಿಯ ದಿನಗಳ ನೆನಪನ್ನೂ ಪ್ರಧಾನಿ ಜೊತೆ ಹಂಚಿಕೊಂಡರು. ಇದಕ್ಕೆ ಪ್ರತಿಯಾಗಿ ಮೋದಿ ಅವರು ಆರೋಗ್ಯ ಜೋಪಾನವಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

Narendra Modi Phone Call To RSS Leader Somashekhar Bhat

ನಿನ್ನೆಯೂ ಬಿಜೆಪಿಯ ಹಿರಿಯ ಮುಖಂಡ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+