ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಜಿಲ್ಲೆಯಲ್ಲಿ ಹೆಚ್ಚಿದ ಮಂಗಗಳ ಸಾವಿನ ಸಂಖ್ಯೆ: ಆತಂಕ

|
Google Oneindia Kannada News

ಉಡುಪಿ ಜನವರಿ 16 : ಉಡುಪಿ ಜಿಲ್ಲೆಯಲ್ಲಿ ಮಂಗ ಗಳ ಸಾವಿನ ಸರಣಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಕಂದಾವರ , ಕಾರ್ಕಳ ಸುತ್ತಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ವಿವಿಧೆಡೆ ಮತ್ತೆ ನಾಲ್ಕು ಮಂಗಗಳ ಶವ ಪತ್ತೆಯಾಗಿದೆ.

ಕಂದಾವರ ಗ್ರಾಮದ ಮೂಡ್ಲಕಟ್ಟೆ ಎಂಬಲ್ಲಿನ ತೋಟದಲ್ಲಿ ಮಂಗನ ಅದಲ್ಲದೇ ಒಂದು ಶವ ದೊರೆತಿದೆ. ಅದಲ್ಲದೇ ಹೊಸಂಗಡಿಯಲ್ಲಿ 1, ಯಡಮೊಗೆ ಯಲ್ಲಿ 2 ಮಂಗಗಳ ಶವ ದೊರೆತಿದೆ.

ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳುಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು

ಈ ಕುರಿತು ಮಾಹಿತಿ ಪಡೆದ ವೈದ್ಯಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸೀಲನೆ ನಡೆಸಿ ಶವಗಳ ಮರಣೋತ್ತರ ಪರೀಕ್ಷೆನಡೆಸಿದ್ದಾರೆ.ಬಸ್ರೂರು , ಬಳ್ಕೂರು, ಮೂಡ್ಲಕಟ್ಟೆ ಪರಿಸರದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

Monkey fever in Udupi district

ಮಂಗನ ಕಾಯಿಲೆ ಸಂಬಂಧಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ಆಸುಪಾಸಿನ 76 ಜನರು ಜನವರಿ 15ರ ವರೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. 27 ಜನರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಶಂಕೆ ಕಂಡು ಬಂದಿದೆ. 46 ಜನರಿಗೆ ಮಂಗನ ಕಾಯಿಲೆ ಇಲ್ಲವೆಂದು ದೃಢಪಟ್ಟಿದೆ. ಮೂವರ ಪರೀಕ್ಷಾ ವರದಿ ಕೈಸೇರಬೇಕಾಗಿದೆ. 59 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ .

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ

ಕರ್ನಾಟಕದಲ್ಲಿ ಮಂಗನ ಕಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶವಾಗಿರುವ ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಈ ಬಗ್ಗೆ ಎಚ್ಚರಿಕೆ ಬೇಕು ಎಂದವರು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ. ಮಂಗ ಮೃತಪಟ್ಟಿದ್ದರೆ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

English summary
Monkey death is continued in Udupi district .Monkey fever being reported in Udupi is on high alert following the beath of monkey in Basruru, Balkuru and Mudlu Katte.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X