'ಹಲಸಿನ ಹಣ್ಣು ಸೇವನೆಯಿಂದ ಏಡ್ಸ್ ಕಾಯಿಲೆ ದೂರವಿಡಬಹುದು'
ಉಡುಪಿ, ಜೂನ್ .24: ಹಲಸಿನ ಹಣ್ಣನ್ನು ಹೆಚ್ಚು ತಿನ್ನುವುದರಿಂದ ಏಡ್ಸ್ ನಂತಹ ಕಾಯಿಲೆಗಳನ್ನು ದೂರವಿಡಬಹುದು. ಅಷ್ಟೇ ಅಲ್ಲ ಅದನ್ನು ಬಾರದಂತೆಯೂ ತಡೆಗಟ್ಟಬಹುದು. ಈ ವಿಚಾರವನ್ನು ಬಹಳಷ್ಟು ಜನರು ಹೇಳುವುದನ್ನು ನಾನು ಕೇಳಿದ್ದೇನೆ ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದರು.
ಉಡುಪಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ, ಶನಿವಾರ ದೊಡ್ಡಣಗುಡ್ಡೆಯಲ್ಲಿ ಆರಂಭವಾದ ಹಲಸು ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಲಸಿನ ಹಣ್ಣು ಹಲವು ರೋಗಗಳನ್ನು ತಡೆಗಟ್ಟುವ ಶಕ್ತಿ ಹೊಂದಿದೆ. ಹಲಸಿನ ಹಣ್ಣಿನ ಹುಳಿ ಹಾಗೂ ಪದಾರ್ಥ ಮಾಡಿ ಸೇವಿಸಿದರೆ ಮಧುಮೇಹಕ್ಕೆ ಒಳ್ಳೆಯದು ಎಂದು ನಾಟಿ ವೈದ್ಯರು ಹೇಳುತ್ತಾರೆ. ಈ ರೀತಿಯ ವಿಚಾರಗಳಿಂದಲೇ ಹಲಸಿನ ಹಣ್ಣಿಗೆ ಪ್ರಖ್ಯಾತಿ ಬಂದಿದೆ ಎಂದು ಹಲಸಿನ ಹಣ್ಣಿನ ಮಹತ್ವವನ್ನು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಾಕರ್ ಮಾತನಾಡಿ ಹಲಸಿನ ಉತ್ತೇಜನಕ್ಕೆ ನಾವೂ ಕೈಜೋಡಿಸಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications