ಅತ್ತುರು ದೇವಾಲಯದಲ್ಲಿ ರಾಕೇಶ್ ಸಿದ್ದರಾಮಯ್ಯಗೆ ಶ್ರದ್ಧಾಂಜಲಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಆಗಸ್ಟ್ 04 : ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್‍, ಅತ್ತೂರು ದೇವಾಲಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ನಿಧನಕ್ಕೆ, ಬಹು ಅಪರೂಪದ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಸಿದ್ದರಾಮಯ್ಯ ಪುತ್ರ ರಾಕೇಶ ಅಕಾಲಿಕಾವಾಗಿ ಇಹ ಲೋಕವನ್ನು ತ್ಯಜಿಸಿದರು. ಅವರ ಅಂತ್ಯಕ್ರಿಯೆಯ ದಿನವೇ ಕಾರ್ಕಳದ ಅತ್ತೂರು ಇಗರ್ಜಿಯನ್ನು ಮೈನರ್ ಬೆಸಿಲಿಕಾ ಎಂದು ಘೋಷಸಲಾಯಿತು. ಅಂದು ಅಲ್ಲಿ ಸೇರಿದ್ದ 16 ಸಾವಿರಕ್ಕೂ ಅಧಿಕ ಜನರು ಮೌನಾಚರಣೆ ಮೂಲಕ ರಾಕೇಶ್ ಸಿದ್ದರಾಮಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.[ಅತ್ತೂರ್ ಚರ್ಚ್ ಇನ್ನು ಮುಂದೆ ಮೈನರ್ ಬೆಸಿಲಿಕಾ]

Minor Basilica

ಕೆಥೋಲಿಕ್ ಧರ್ಮದ ದೇಶಾದ್ಯಾಂತ ಅತ್ಯುನ್ನದ ಪದವಿಯ ಧರ್ಮ ಶ್ರೇಷ್ಠರು, ಭಾರತ ದೇಶದ ಮೂರು ಕಾರ್ಡಿನಲ್‍ಗಳು, ಓಸ್ವಲ್ಡ್ ಗ್ರೇಶಿಯಸ್, ಬಸೆಲಿಯೋಸ್ ಕ್ಲೀಮಿಸ್, ಅರ್ಚ್ ಬಿಷಪ್‍ಗಳಾದ ಬರ್ನಾಡ್ ಮೊರಾಸ್, ಫಿಲಿಪ್ ನೇರಿ, ಉಡುಪಿಯ ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರಿನ ಆಲೋಶಿಯಸ್ ಪಾವ್ಲ್ ಡಿಸೋಜಾ, ಸಚಿವ ಪ್ರಮೋದ್ ಮಧ್ವರಾಜ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕ ಗೋಪಾಲ್ ಭಂಡಾರಿ ಸೇರಿದಂತೆ ಹಲವಾರು ಜನರು ರಾಕೇಶ್ ಸಿದ್ದರಾಮಯ್ಯ ಅವರ ಸದ್ಗತಿಗೆ ಮೌನ ಪ್ರಾರ್ಥನೆ ಸಲ್ಲಿಸಿದರು.[ಚಿತ್ರಗಳು : ರಾಕೇಶ್ ಸಿದ್ದರಾಮಯ್ಯಗೆ ಅಂತಿಮ ನಮನ]

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಬ್ಬದ ವೇಳೆ ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ, ಭಕ್ತಿಯಿಂದ ಮುಂಬತ್ತಿಯನ್ನು ಅರ್ಪಿಸಿ, ಉಡುಪಿ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊ ಅವರಿಮದ ಗೌರವ, ಸನ್ಮಾನ ಸ್ವೀಕರಿಸಿದ್ದನ್ನು ನೆನೆಪು ಮಾಡಿಕೊಳ್ಳಬಹುದು.

ಸಿದ್ದರಾಮಯ್ಯ ಪುತ್ರ ರಾಕೇಶ್‍ಗೆ ಸಾವಿರಾರು ಜನರಿಂದ ಮತ್ತು ಮಹಾಸ್ವಾಮಿಗಳಿಂದ, ಪವಾಡಮಯವಾದ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ಪುಣ್ಯ ಕ್ಷೇತ್ರದಲ್ಲಿ ಈ ರೀತಿಯಲ್ಲಿ ಸಿಕ್ಕಿದ ಒಂದು ಶ್ರದ್ಧಾಂಜಲಿ ಭಾಗ್ಯ ಇನ್ಯಾರಿಗೂ ಸಿಗದ ಭಾಗ್ಯವೆಂದು ಸ್ಥಳೀಯರ ಅಭಿಪ್ರಾಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Udupi Minor Basilica paid last tributes to Rakesh Siddaramaiah (39), elder son of Siddaramaiah - chief minister of Karnataka. Rakesh died due to multi-organ failure at Antwerp University Hospital in Brussels.
Please Wait while comments are loading...