ರಸ್ತೆ ದುರಸ್ಥಿಗಾಗಿ ರಸ್ತೆ ಹೊಂಡದಲ್ಲಿ ಈಜಿ ಪ್ರತಿಭಟನೆ
ಉಡುಪಿ, ಆ.08 : ರಸ್ತೆಯ ಹೊಂಡದಲ್ಲಿ ನಿಂತಿರುವ ನೀರಿನಲ್ಲಿ ಈಜಾಡಿ ರಸ್ತೆ ದುರಸ್ಥಿತಿಗಾಗಿ ವಿನೂತನವಾಗಿ ಪ್ರತಿಭಟನೆ ನಡೆಸಲಾಗಿದೆ. ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮಣಿಪಾಲದಲ್ಲಿ ರಸ್ತೆಯನ್ನು ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಲಾಯಿತು.
ಈ ಪ್ರತಿಭಟನೆ ನಡೆದಿರುವುದು ಮಣಿಪಾಲದ ಟೈಗರ್ ಸರ್ಕಲ್ ನಲ್ಲಿರುವ ಬಸ್ ನಿಲ್ದಾಣದ ಬಳಿ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಆದರೆ, ಜಿಲ್ಲಾಡಳಿತ, ನಗರಸಭೆ ಅಥವಾ ಯಾವುದೇ ಜನ ಪ್ರತಿನಿಧಿಗಳಿಗೂ ಇಲ್ಲಿನ ರಸ್ತೆಗಳ ಸ್ಥಿತಿ ಕಾಣುವುದಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಯಾರೂ ಇತ್ತ ಗಮನ ಹರಿಸಲಿಲ್ಲ. ಆದ್ದರಿಂದ, ಇಂದು ರಸ್ತೆಯ ಹೊಂಡದ ನೀರಿನಲ್ಲಿ ಈಜುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ರಸ್ತೆಯಲ್ಲಿ ಈಜಿ ಪ್ರತಿಣಭಟನೆ ನಡೆಸಿದವರು ನಿತ್ಯಾನಂದ ಒಳಕಾಡು. ನಿತ್ಯಾನಂದ ಅವರ ಪ್ರತಿಭಟನೆಗೆ ಹಲವು ಜನರು ಬೆಂಬಲ ನೀಡಿದರು ಮತ್ತು ರಸ್ತೆ ದುರಸ್ಥಿ ಮಾಡುವಂತೆ ಒತ್ತಾಯಿಸಿದರು.

ರಸ್ತೆಗಾಗಿ ವಿನೂತನ ಪ್ರತಿಭಟನೆ
ಈ ವ್ಯಕ್ತಿ ಆಕಸ್ಮಿಕವಾಗಿ ರಸ್ತೆಯ ಹೊಂಡಕ್ಕೆ ಬಿದಿಲ್ಲ. ಇದು ಈಜುಕೊಳವೂ ಅಲ್ಲ. ರಸ್ತೆ ದುರಸ್ಥಿ ಮಾಡಿ ಎಂದು ಒತ್ತಾಯಿಸಲು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ ರೀತಿ ಇದು.

ಈ ಪ್ರತಿಭಟನೆ ನಡೆದಿದ್ದು ಮಣಿಪಾಲ್ ನಲ್ಲಿ
ಈ ಪ್ರತಿಭಟನೆ ನಡೆದಿರುವುದು ಮಣಿಪಾಲದಲ್ಲಿರುವ ಟೈಗರ್ ಸರ್ಕಲ್ ಬಸ್ ನಿಲ್ದಾಣದ ಬಳಿ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಆದರೆ, ರಸ್ತೆ ಮಾತ್ರ ಸಂಪೂರ್ಣವಾಗಿ ಹದಗೆಟ್ಟಿದೆ.

ಪ್ರತಿಭಟನೆ ನಡೆಸಿದ್ದು ನಿತ್ಯಾನಂದ ಒಳಕಾಡು
ಈ ರೀತಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಂಡಿದ್ದು ನಿತ್ಯಾನಂದ ಒಳಕಾಡು. ಹಲವು ಸಾರ್ವಜನಿಕರು ಈ ಪ್ರತಿಭಟನೆಗೆ ಸಹಕಾರ ನೀಡಿದರು ಮತ್ತು ರಸ್ತೆ ದುರಸ್ತಿಗೆ ಆಗ್ರಹಿಸಿದರು.

ಇದು ವಿಶಿಷ್ಟ ಪ್ರತಿಭಟನೆ
ಈ ರಸ್ತೆಯನ್ನು ದುರಸ್ಥಿ ಆಡಲು ಆಗ್ರಹಿಸಿ ಹಿಂದೆಯೂ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ದುರಸ್ಥಿ ಮಾಡದ ಕಾರಣ ಈ ರೀತಿ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆಯಲಾಯಿತು.












Click it and Unblock the Notifications