ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿನ್ನಿಸ್ ದಾಖಲೆ ಪುಟಕ್ಕೆ ಮಣಿಪಾಲ ವಿವಿ ಕಸ್ತೂರ್‌ಬಾ ಆಸ್ಪತ್ರೆ

ಮಣಿಪಾಲ ವಿವಿಯ ಕಸ್ತೂರ್‌ಬಾ ಆಸ್ಪತ್ರೆಯು ಜಾಗತಿಕ ಕೈ ತೊಳೆಯುವ ದಿನದ ಅಂಗವಾಗಿ ಆರೋಗ್ಯ ಜನಜಾಗೃತಿಗೆ ಕಳೆದ ಅ. 15ರಂದು ಮಣಿಪಾಲದಲ್ಲಿ ನಡೆಸಿದ್ದ 'ಕೈಗಳ ನೈಮ್ಯಲ್ಯ ರಿಲೇಯಲ್ಲಿ 3422 ಮಂದಿ ಕೈ ತೊಳೆಯುವ ಮೂಲಕ ಗಿನ್ನಿಸ್ ದಾಖಲೆ ಮಾಡಿದೆ.

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ. 14 : ಮಣಿಪಾಲ ವಿಶ್ವವಿದ್ಯಾಲಯದ ಕಸ್ತೂರ್‌ಬಾ ಆಸ್ಪತ್ರೆ ಗಿನ್ನಿಸ್ ದಾಖಲೆ ಮಾಡಿದೆ. ಕಳೆದ ವರ್ಷ ಅಕ್ಟೋಬರ್ 15ರಂದು ನಡೆದ ಕೈಗಳ ನೈರ್ಮಲ್ಯ ರಿಲೇಯಲ್ಲಿ ಈ ದಾಖಲೆ ಮಾಡಿದೆ.

ಸ್ವಚ್ಛತೆಯ ಕೊರತೆಯಿಂದಾಗಿ ಉಂಟಾಗುವ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅನೇಕ ರೋಗಗಳಿಂದ ಪಾರಾಗಲು ಕಳೆದ ವರ್ಷದ ಅ.15ರಂದು ನಡೆದ ಕೈಗಳ ನೈರ್ಮಲ್ಯ ರಿಲೇಗಾಗಿ ಮಣಿಪಾಲ ವಿಶ್ವವಿದ್ಯಾಲಯದ ಕಸ್ತೂರ್‌ಬಾ ಆಸ್ಪತ್ರೆಯ ಹೆಸರು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರ್ಪಡೆಗೊಂಡಿದೆ.

ಜಾಗತಿಕ ಕೈತೊಳೆಯುವ ದಿನದ ಅಂಗವಾಗಿ ಏರ್ಪಡಿಸಲಾದ ಈ ರಿಲೇಯಲ್ಲಿ ಕೆಎಂಸಿಯ 3,500 ಮಂದಿ ಪಾಲ್ಗೊಂಡಿದ್ದರು. ಈ ಸಂಬಂಧ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಕಳೆದ ವಾರ 3422 ಪ್ರಮಾಣಪತ್ರಗಳನ್ನು ಪಡೆಯಲಾಗಿತ್ತು.

ಈ ಗಿನ್ನಿಸ್ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ಜನವರಿ 13ರಂದು ಅಧಿಕೃತವಾಗಿ ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಅವರು ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಮುಖ್ಯ ನಿರ್ವಹಣಾಧಿಕಾರಿ ಡಾ. (ಕರ್ನಲ್) ಎಂ.ದಯಾನಂದ್ ಅವರಿಗೆ ಹಸ್ತಾಂತರಿಸಿದರು.

Kasturba Hospital enters Guinness Book of World Records for Hand Sanitization Relay

ಕಳೆದ ವರ್ಷ ನಡೆದ ಕೆಎಂಸಿಯ ವಿಶ್ವ ದಾಖಲೆಯ ಅಭಿಯಾನ ಬೆಳಗ್ಗೆ 7ಗಂಟೆಗೆ ಪ್ರಾರಂಭಗೊಂಡು ಸರಿ ಸುಮಾರು ಅದೇ ದಿನ ಮಧ್ಯರಾತ್ರಿಯ ವೇಳೆಗೆ ಕೊನೆಗೊಂಡಿತ್ತು.

ಹೆಚ್ಚು ಕಡಿಮೆ 5000 ಮಂದಿ ಬೋಧಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲು ಹೆಸರು ನೊಂದಾಯಿಸಿದ್ದರು. ಕೊನೆಗೆ ಇದಕ್ಕೆ ಮಂಗಳ ಹಾಡಿದಾಗ 3422 ಮಂದಿ ಕೈಗಳನ್ನು ತೊಳೆಯುವ ಕೆಲಸವನ್ನು ಮುಗಿಸಿದ್ದರು. ಅಲ್ಲದೇ ದಾಖಲೆಗಾಗಿ ಗಿನ್ನಿಸ್ ಸಂಸ್ಥೆ ಇದೇ ಸಂಖ್ಯೆಯನ್ನು ಅನುಮೋದಿಸಿತ್ತು.

ಈ ಬಗ್ಗೆ ಮಾಹಿತಿ ನೀಡಿದ ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕೈಗಳ ನೈರ್ಮಲ್ಯದ ಕಾಳಜಿ ವಹಿಸುವ ಸಂದೇಶ ಸಾರಲು ಮತ್ತು ಆಸ್ಪತ್ರೆ ಸೋಂಕುಗಳನ್ನು ತಡೆಗಟ್ಟುವುದಕ್ಕೆ ವೈದ್ಯರು ಹಾಗೂ ಇತರ ಆರೋಗ್ಯ ಆರೈಕೆ ವೃತ್ತಿಪರರು ನಿಯಮಿತವಾಗಿ ಕೈಗಳನ್ನು ತೊಳೆಯುವ ಅಭ್ಯಾಸವನ್ನು ಪ್ರೋತ್ಸಾಹಿಸಲು ಜಾಗತಿಕ ಕೈತೊಳೆಯುವ ದಿನದಂದು ಒಂದು ಸಾಮಾಜಿಕ ಉಪಕ್ರಮವಾಗಿ ಈ ಅಭಿಯಾನವನ್ನು ಮಾಡಿದ್ದೆವು.

ಆದರೆ, ಇದೀಗ ವಿಶ್ವ ದಾಖಲೆ ಗರಿ ಸಿಕ್ಕಿದ್ದು ನಿಜಕ್ಕೂ ಸಂತಸ ಹಾಗೂ ಹೆಮ್ಮೆಯ ವಿಷಯ. ಎಲ್ಲರೂ ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಉತ್ತಮ.

ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಆರೋಗ್ಯವನ್ನು ವೃದ್ದಿಸಬೇಕಾದರೆ ನಾವು ಕೈಗಳ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

English summary
The Guinness World Records confirmed a place in history for KMC Hospital, a unit of Manipal University, when it recognised Hand Sanitisation Relay held on the occasion of Global Hand Washing Day here on October 15, 2016, as a world record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X