ನಿಶ್ಚಿತವಾಗಿ ಜಯ ನನ್ನದು: ಮತದಾನ ಮಾಡಿದ ಬಳಿಕ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸದ ಮಾತು
ಉಡುಪಿ, ಏಪ್ರಿಲ್ 26: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮತದಾನ ಮಾಡಿದ್ದಾರೆ. ಕೋಟತಟ್ಟು ಗ್ರಾಮ ಪಂಚಾಯತ್‌ನ ಮತ ಕೇಂದ್ರಕ್ಕೆ ಕುಟುಂಬ ಸಮೇತರಾಗಿ ಬಂದ ಕೋಟ ಶ್ರೀನಿವಾಸ ಪೂಜಾರಿ ಮತ ಚಲಾಯಿಸಿದ್ದಾರೆ.
ಮತಚಲಾವಣೆ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಭಾರತೀಯ ಜನತಾ ಪಕ್ಷದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಎಂಟು ವಿಧಾನಸಭಾ ಕ್ಷೇತ್ರದ ತಿರುಗಾಟ ಮಾಡಿದ್ದೇನೆ. ಕೋಟತಟ್ಟು ಗ್ರಾಮ ಪಂಚಾಯತ್‌ನಲ್ಲಿ ಕುಟುಂಬ ಸಮೇತ ಬಂದು ಮತದಾನ ಮಾಡಿದ್ದೇನೆ ಎಂದರು.

ಇಡೀ ಲೋಕಸಭಾ ಕ್ಷೇತ್ರದಲ್ಲಿ ಜನ ಉತ್ಸಾಹದಲ್ಲಿ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಷ್ಟ್ರಕ್ಜಾಗಿ, ರಾಷ್ಟ್ರದ ಭದ್ರತೆಗಾಗಿ, ರಾಷ್ಟ್ರದ ಐಕ್ಯತೆಗಾಗಿ ರಾಷ್ಟ್ರದಲ್ಲಿ ಶಾಂತಿ ನೆಮ್ಮದಿಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಅಭ್ಯರ್ಥಿಯಾದ ನಾನು ಸಚಿವನಾಗಿ ಶಾಸಕನಾಗಿ ಮಾಡಿರುವ ಕೆಲಸವನ್ನು ಜನ ಗಮನಿಸಿದ್ದಾರೆ. ನಿಶ್ಚಿತವಾಗಿ ಜಯ ನನ್ನದಾಗುತ್ತದೆ. ಬಿಜೆಪಿ ಗೆಲ್ಲುತ್ತದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ ಎನ್ನುವ ಆಶಯ ನಮ್ಮದು ಎಂದರು.
ಮತ ಚಲಾಯಿಸಿದ ಪೇಜಾವರ ಶ್ರೀ
ಉಡುಪಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಲೋಕಸಭಾ ಚುನಾವಣೆಯ ಮತ ಚಲಾಯಿಸಿದ್ದಾರೆ. ಉಡುಪಿ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾರ್ತ್‌ಗೆ ಆಗಮಿಸಿದ ಶ್ರೀಗಳು ಮತಗಟ್ಟೆ ಸಂಖ್ಯೆ 185ರಲ್ಲಿ ಮತದಾನ ಮಾಡಿದ್ದಾರೆ. ಸದ್ಯ ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ಟ್ರಸ್ಟ್‌ನ ಸದಸ್ಯರಾಗಿರುವ ಶ್ರೀಗಳು, ತಮ್ಮ ಶಿಷ್ಯ ವೃಂದದೊಂದಿಗೆ ಬಂದು ಮತದಾನ ಮಾಡಿ, ಎಲ್ಲರೂ ಮತದಾನ ಮಾಡುವಂತೆ ತಿಳಿಸಿದ್ದಾರೆ.
ಅಷ್ಟಮಠಾಧೀಶರಿಂದ ಮತದಾನ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 185ರಲ್ಲಿ ಅಷ್ಟಮಠಾಧೀಶರು ಮತದಾನ ಮಾಡಿದ್ದಾರೆ. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಮತದಾನ ಮಾಡಿದ್ದು, ಪಲಿಮಾರು ಮಠದ ಕಿರಿಯ ಶ್ರೀಗಳು ಮೊದಲ ಮತದಾನ ಮಾಡಿದ್ದಾರೆ.












Click it and Unblock the Notifications