'ಪುಲ್ವಾಮಾ ದಾಳಿ ಬಗ್ಗೆ ಎಚ್‌ಡಿಕೆಗೆ ರೇವಣ್ಣನೇ ಭವಿಷ್ಯ ಹೇಳಿರಬೇಕು'
Recommended Video

ನಾಲ್ಕು ನಿಂಬೆ ಹಣ್ಣು ಕೈಯಲ್ಲಿ ಹಿಡ್ಕೊಂಡು ಕುಮಾರಸ್ವಾಮಿಗೆ ಭವಿಷ್ಯ ಹೇಳಿದ್ರಂತೆ ರೇವಣ್ಣ..!
ಉಡುಪಿ, ಏಪ್ರಿಲ್ 06: ಪುಲ್ವಾಮಾ ಉಗ್ರರ ದಾಳಿ ಘಟನೆ ಬಗ್ಗೆ ಮೊದಲೇ ಗೊತ್ತಿತ್ತೆಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ಉಗ್ರರ ದಾಳಿ ಘಟನೆ ಬಗ್ಗೆ ಅವರಣ್ಣ ರೇವಣ್ಣ ಭವಿಷ್ಯ ಏನಾದರೂ ಹೇಳಿದ್ದರಾ? ಎಂದು ಅವರು ವ್ಯಂಗ್ಯವಾಡಿದ್ದಾರೆ. ಎಡಗೈಯ್ಯಲ್ಲಿ ನಾಲ್ಕು , ಬಲಗೈಯ್ಯಲ್ಲಿ ನಾಲ್ಕು ನಿಂಬೆ ಹಣ್ಣು ಹಿಡ್ಕೊಂಡು ರೇವಣ್ಣ ಭವಿಷ್ಯ ಹೇಳಿರಬಹುದು ಎಂದು ಕಿಡಿಕಾರಿದ ಅವರು ಮುಖ್ಯಮಂತ್ರಿ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ವರ್ತಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುಲ್ವಾಮ ಘಟನೆ ಬಗ್ಗೆ ಗೊತ್ತಿದ್ರೆ ಎರಡು ವರ್ಷದ ಮೊದಲೇ ಹೇಳಬೇಕಿತ್ತು. ಚುನಾವಣೆ ಸಂದರ್ಭದಲ್ಲಿ ಹೇಳುವ ಅಗತ್ಯ ಏನಿತ್ತು? ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಮೈತ್ರಿಯೆಂಬ ತೇಪೆಯೊಳಗೆ ಎಲ್ಲಾ ಒಡೆದಿದೆ. ಮಂಡ್ಯ ಗೆಲ್ಲುವುದಿಲ್ಲ ಎಂಬೂದು ಸಿಎಂ ಗೆ ಗೊತ್ತಾಗಿದೆ. ತುಮಕೂರು, ಹಾಸನ ಕಷ್ಟವಿದೆ ಅಂತ ಸಿಎಂ ಗೆ ಅರಿವಾಗಿದೆ ಎಂದು ಅವರು ಹೇಳಿದರು. ಜೆಡಿಎಸ್ ನ ಕೌಟುಂಬಿಕ ರಾಜಕಾರಣದ ಕೊನೆಯ ದಿನಗಳು ನಡೆಯುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.












Click it and Unblock the Notifications