ಮತದಾನ ಬಹಳ ಮುಖ್ಯ, ಆದ್ದರಿಂದ ನಾನು ಬೆಂಗ್ಳೂರಿಂದ ಉಡುಪಿಗೆ ಬಂದು ಮತ ಚಲಾಯಿಸಿದ್ದೇನೆ: ರಕ್ಷಿತ್ ಶೆಟ್ಟಿ

ಉಡುಪಿ, ಮೇ, 10: ರಾಜ್ಯದೆಲ್ಲೆಡೆ ವಿಧಾನಸಭಾ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದ್ದು, ಈಗಾಗಲೇ ರಾಜಕಾರಣಿಗಳು ಸೇರಿದಂತೆ ಸಿನಿ ಸ್ಟಾರ್‌ಗಳು ಕೂಡ ಮತ ಚಲಾವಣೆ ಮಾಡಿದ್ದಾರೆ. ಅದೇ ರೀತಿ ಉಡುಪಿಯಲ್ಲಿ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರು ಮತದಾನ ಮಾಡಿದರು. ನಂತರ ಮಾತನಾಡಿದ ಅವರು, ಮತದಾನ ಮಾಡುವುದು ಬಹಳ ಮುಖ್ಯ. ಆದ್ದರಿಂದ ನಾನು ಮತದಾನ ಮಾಡಲು ಬೆಂಗಳೂರಿನಿಂದ ಬಂದಿದ್ದೇನೆ. ಅದು ನಮ್ಮ ಜವಾಬ್ದಾರಿ ಎಂದರು.

ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು. ನಾನು ಚಿಕ್ಕವನಾಗಿದ್ದಾಗ ಉಡುಪಿ ನಗರ ಬೆಳೆಯಬೇಕು ಎಂದು ಆಸೆ ಇತ್ತು. ಈಗ ಬಂದು ನೋಡಿದರೆ ಮೊದಲೇ ಚೆನ್ನಾಗಿತ್ತು ಎಂದು ಅನಿಸುತ್ತಿದೆ. ನಾಯಕನಾದವರು ಊರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಕ್ಷೇತ್ರದ ಜನರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

Karnataka election 2023: Voting is very important says Rakshit Shetty in Udupi

ಹಳ್ಳಿ ಭಾಗದಲ್ಲಿ ಮತದಾನ ಬಗ್ಗೆ ಜನರಿಗೆ ಕಾಳಜಿ ಜಾಸ್ತಿ ಇದೆ. ನಮ್ಮ ನಾಯಕ ಯಾರಾಗಬೇಕು ಎಂದು ಜನ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ. ಆದರೆ ನಗರದ ಜೀವನನೇ ಬೇರೆ ಆಗಿರುತ್ತದೆ. ಯಾವ ನಾಯಕರು ಅಧಿಕಾರಕ್ಕೆ ಬರುತ್ತಾರೆ ಅಂತಾ ನಾವು ನಿರೀಕ್ಷೆ ಮಾಡುತ್ತಿದ್ದೇವೆ.
ಯುವಜನರು ಯಾರನ್ನು ಆಯ್ಕೆ ಮಾಡುತ್ತಾರೆ ಅವರು ನಮ್ಮ ದೇಶದ ಭವಿಷ್ಯ ಆಗಿರುತ್ತಾರೆ. ಚುನಾವಣಾ ಪ್ರಕ್ರಿಯೆಗೆ ಹೊಸ ಹೊಸ ಮುಖಗಳು ಬರಲೇಬೇಕು. ಆಗ ಮಾತ್ರ ಹೊಸ ಹೊಸ ನಿರೀಕ್ಷೆಗಳು ಇರುತ್ತದೆ ಎಂದರು.

ತುಂಬಾ ಜನ ನನ್ನನ್ನು ರಾಜಕೀಯ ಪ್ರಚಾರಕ್ಕೆ ಕರೆದಿದ್ದರು, ಆದರೆ ನಾನು ಯಾವುದೇ ಪ್ರಚಾರಗಳಿಗೆ ಹೋಗುವುದಿಲ್ಲ. ನಾನು ಹೆಚ್ಚು ಮಾತನಾಡಿದರೆ ರಾಜಕಾರಣಿಗಳ ಹೆಸರುಗಳು ಬಾಯಿಗೆ ಬರುತ್ತದೆ ಎಂದರು. ಇನ್ನು ತಮ್ಮ ಮದುವರೆ ಬಗ್ಗೆ ಪ್ರತಿಕ್ರಿಯಿಸಿ,ಮದುವೆ ಬಗ್ಗೆ ಮುಂದೆ ನೋಡೋಣ ಎಂದರು.

ಇನ್ನು ನಟ ರಿಶಬ್ ಶೆಟ್ಟಿ ಅವರು, ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು. ಅದರಲ್ಲೂ ರಿಶಬ್ ಶೆಟ್ಟಿ ಅವರು ಬಿಳಿ ಅಂಗಿ, ಬಿಳಿ ಪಂಚೆಯಲ್ಲಿ ಬಂದು ಮತ ಚಲಾವಣೆ ಮಾಡಿರುವುದು ಇನ್ನು ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+