'ಬಿಜೆಪಿ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಯಲಿ'

Posted By:
Subscribe to Oneindia Kannada

ಉಡುಪಿ, ಆ.4 : 'ಐಟಿ ಇಲಾಖೆ ಕೇವಲ ವಿರೋಧ ಪಕ್ಷದ ಮೇಲೆ ಮಾತ್ರ ದಾಳಿ ಮಾಡುವುದನ್ನು ಬಿಟ್ಟು, ಬಿಜೆಪಿ ಪಕ್ಷದ ಒಂದೆರಡು ಮಂತ್ರಿ, ಶಾಸಕರ ಮೇಲೂ ದಾಳಿ ಮಾಡಲಿ' ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಐಟಿ ಅಧಿಕಾರಿಗಳಿಗೆ ಸಲಹೆ ಸಲಹೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : ಶುಕ್ರವಾರದ 10 ಮಿಂಚಿನ ಬೆಳವಣಿಗೆ

ಉಡುಪಿಯಲ್ಲಿ ಶುಕ್ರವಾರ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು, 'ಸಚಿವ ಡಿ.ಕೆ. ಶಿವಕುಮಾರ್ ಮೇಲೆ ನಡೆದಿರುವ ದಾಳಿ ತಪ್ಪಲ್ಲ. ಆದರೆ. ಪ್ರಸ್ತುತ ನಡೆದಿರುವ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ' ಎಂದರು.

IT raid on DK Shivakumar : IT Dept Should Also Initiate Raids On BJP Ministers Pramod Madhwaraj

'ಕರ್ನಾಟಕದಲ್ಲಿ ಗುಜರಾತ್ ಶಾಸಕರಿಗೆ ರಕ್ಷಣೆ ನೀಡುತ್ತಿರುವುದರಿಂದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗಿದೆ. ಆದ್ದರಿಂದ, ದುರುದ್ದೇಶಪೂರಿತವಾಗಿ ಅವರ ಮನೆ ಹಾಗೂ ಇತರ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ' ಎಂದು ಹೇಳಿದರು.

'ಪ್ರಾಮಾಣಿಕವಾಗಿ ಯಾವ ಮಂತ್ರಿ, ಶಾಸಕರು ತೆರಿಗೆಯನ್ನು ಪಾವತಿ ಮಾಡುತ್ತಾರೋ ಅವರು ಚಿಂತಿಸಬೇಕಾಗಿಲ್ಲ. ಅಂತಹ ಪ್ರತಿಯೊಬ್ಬರೂ ಕೂಡ ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು' ಎಂದು ಹೇಳಿದರು.

ಪತ್ರ : ಅಕ್ರಮ ಸಂಪಾದನೆ ಮಾಡಿರುವವರನ್ನು ಬಿಡಬೇಡಿ!

ಪ್ರತಿಕ್ರಿಯೆ ನೀಡುವುದಿಲ್ಲ : 'ಐಟಿ ದಾಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ' ಎಂದು ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಮಾಡಿರುವ ಗಂಭೀರ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, 'ಶಿವಕುಮಾರ್ ತಾಯಿ ಗೌರಮ್ಮ ಎಷ್ಟು ಪರಿಪಕ್ವರೋ ಗೊತ್ತಿಲ್ಲ ಹಾಗೂ ಅವರಿಗೆ ರಾಜಕೀಯದ ಬಗ್ಗೆ ಏನು ಗೊತ್ತಿಲ್ಲದೆ ಮಾಡಿರುವ ಆರೋಪದ ಕುರಿತು ತಾನು ಪ್ರತಿಕ್ರಿಯೆ ನೀಡುವುದಿಲ್ಲ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Why is the Income Tax Department initiating raids only on the houses of Congress MLA and Ministers, it should also conduct raids on BJP ministers and their aides said Minister for Fisheries Pramod Madhwaraj.
Please Wait while comments are loading...