ಪ್ರಿಯತಮನ ಜೊತೆ ಪರಾರಿಯಾದ ಉಡುಪಿಯ ವಿವಾಹಿತ ಮಹಿಳೆ

ಉಡುಪಿ, ಮೇ 21: ಹೋಮ್ ಕ್ವಾರಂಟೈನ್ ನಲ್ಲಿದ್ದ ವಿವಾಹಿತ ಮಹಿಳೆಯೊಬ್ಬಳು ತನ್ನ 8 ವರ್ಷದ ಮಗುವನ್ನು ತವರು ಮನೆಯಲ್ಲಿ ಬಿಟ್ಟು, ಹಳೆ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ನಡೆದಿದೆ.

ಅಜೆಕಾರು ಕೈಕಂಬ ನಿವಾಸಿಯ ಮಹಿಳೆ ಪರಾರಿಯಾಗಿದ್ದಾಳೆ. ಮದುವೆಗೆಂದು ಮಂಗಳೂರಿಗೆ ಹೋದ ಕಾರಣಕ್ಕೆ ಈ ಮಹಿಳೆ, ತಾಯಿ ಮತ್ತು ಸಹೋದರನ ಜೊತೆ ಹೋಂ ಕ್ವಾರಂಟೈನ್ ಆಗಿದ್ದಳು. ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ತನ್ನ ಹಳೆಯ ಪ್ರಿಯಕರನ ಜೊತೆ ಮಹಿಳೆ ಪರಾರಿಯಾಗಿದ್ದಾಳೆ.

ಮಹಿಳೆ 8 ವರ್ಷದ ಹಿಂದೆ ಉದ್ಯಾವರದ ವ್ಯಕ್ತಿ ಜೊತೆ ಮದುವೆಯಾಗಿ ಪುಣೆಯ ಲೋನಾವಲದಲ್ಲಿ ನೆಲೆಸಿದ್ದಳು. ಕೌಟುಂಬಿಕ ಸಮಸ್ಯೆಯಿಂದ ಆಕೆ ತನ್ನ 8 ವರ್ಷದ ಮಗಳೊಂದಿಗೆ ಊರಿಗೆ ಬಂದು ಹೆತ್ತವರೊಂದಿಗೆ ವಾಸವಾಗಿದ್ದಳು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾದ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ವಿವಾಹ ಕಾರ್ಯಕ್ರಮಕದಲ್ಲಿ ಭಾಗವಹಿಸಿ, ಮರಳಿ ಊರಿಗೆ ಬಂದು ಕ್ವಾರಂಟೈನ್ ಆಗಿದ್ದಳು.

Married Woman Escaped With Old Lover From Quarantine In Udupi

ಇತ್ತ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ಅಜೆಕಾರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಇದೀಗ ಆಕೆ ಪತ್ತೆಯಾಗಿದ್ದು, ಆಕೆಯನ್ನು ಪೋಷಕರ ಜೊತೆಗೆ ಕಳುಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+