ಹಿಜಾಬ್ ಧರಿಸಿದರೆ ಕಾಂಪೌಂಡ್ ಒಳಗೂ ಬರಬೇಡಿ; ಉಡುಪಿ ಕಾಲೇಜು ಸಭೆಯಲ್ಲಿ ಅಂತಿಮ ನಿರ್ಧಾರ
ಉಡುಪಿ, ಜನವರಿ 31: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಉಡುಪಿಯ ಹಿಜಾಬ್ ವಿವಾದ ನಿರ್ಣಾಯಕ ಹಂತ ತಲುಪಿದೆ. ಹಿಜಾಬ್ ಹಾಕಿ ಕಾಲೇಜು ಕಾಂಪೌಂಡ್ ಒಳಗೆ ಬರುವುದಕ್ಕೆ ಅವಕಾಶ ಇಲ್ಲ ಎಂದು ಚರ್ಚಿಸಿ ಅಂತಿಮ ನಿರ್ಧಾರ ಹೊರಹಾಕಿದ್ದಾರೆ.
ಕಾಲೇಜಿನ ತರಗತಿಗೆ ಹಿಜಾಬ್ ತೆಗೆದು ಹಾಜರಾಗುತ್ತೇನೆ ಎನ್ನುವ ನಿರ್ಧಾರ ತೆಗೆದುಕೊಂಡರಷ್ಟೇ ಕಾಲೇಜಿಗೆ ಬನ್ನಿ. ಹಿಜಾಬ್ ಹಾಕದೇ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಆವರಣದೊಳಗೂ ಬರಬೇಡಿ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಸೋಮವಾರ ಕಾಲೇಜು ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ, ಪೋಷಕರು, ಉಪನ್ಯಾಸಕರ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರಘುಪತಿ ಭಟ್, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿಷಯಕ್ಕೆ ಸಂಬಂಧಿಸಿ ಎರಡು ದಿನಗಳ ಹಿಂದೆ ಕಾಲೇಜು ಅಭಿವೃದ್ಧಿ ಸಮಿತಿ, ಪೋಷಕರನ್ನೊಳಗೊಂಡಿರುವ ಸಮಿತಿ, ಉಪನ್ಯಾಾಸಕರ ಸಭೆ ಮಾಡಿದ್ದೇವೆ.

ಹಿಜಾಬ್ ಬೇಕೆನ್ನುವ ನಾಲ್ವರು ವಿದ್ಯಾಾರ್ಥಿನಿಯರು, ಅವರ ಪೋಷಕರನ್ನು ಕರೆದಿದ್ದೇವೆ. ನಾವು ವಿವರವಾಗಿ ಮನವಿ ಮಾಡಿದ್ದೇವೆ. ಈ ಹಂತದಲ್ಲಿ ಹಿಜಾಬ್‌ಗೆ ಅವಕಾಶ ಕೊಡುವುದಕ್ಕೆ ಆಗಲ್ಲ. ಸರಕಾರ ಯಾವ ನಿರ್ಧಾರ ಮಾಡುತ್ತದೋ ಗೊತ್ತಿಲ್ಲ. ಕಾಂಪೌಂಡ್ ಆವರಣದವರೆಗೆ ಹಿಜಾಬ್ ಹಾಕಿಕೊಂಡು ಬಂದು ಕ್ಲಾಸ್‌ರೂಮ್‌ನಲ್ಲಿ ಹಿಜಾಬ್ ತೆಗೆದು ಹಾಜರಾಗಬೇಕು ಎಂದು ಹೇಳಿದ್ದಾರೆ.
ಕಾಲೇಜು ಆವರಣದೊಳಗೆ ನಿಮ್ಮ ನಿರ್ಧಾರ ಮಾಡುವಂತಿಲ್ಲ, ನಮ್ಮ ನಿರ್ಧಾರ ಆಗಿದೆ. ಇಲ್ಲಿಗೆ ಬಂದು ಕಾಲೇಜಿನ ಶೈಕ್ಷಣಿಕ ವಾತಾವರಣ ಹಾಳು ಮಾಡಬಾರದೆಂದು ಹೇಳಿದ್ದೇವೆ. ಪೊಲೀಸ್ ಇಲಾಖೆಗೂ ತಿಳಿಸಿದ್ದೇವೆ. ಬೇರೆ ಬೇರೆ ಸಂಘ- ಸಂಸ್ಥೆಗಳು, ಮಾಧ್ಯಮದವರು, ಯಾರನ್ನೂ ನಾಳೆಯಿಂದ ಅವಕಾಶ ಬೇಡ. ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಬರುತ್ತದೆ. ಉಳಿದ ಮಕ್ಕಳಿಗೆ ಓದುವುದಕ್ಕೆ ಸಮಸ್ಯೆಯಗುತ್ತಿದೆ ಅಂತಾ ಪೋಷಕರು ದೂರುತ್ತಿದ್ದಾರೆ ಎಂದು ಶಾಸಕ ರಘಪತಿ ಭಟ್ ತಿಳಿಸಿದರು.

ಶಾಸಕರು, ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ನಡೆದ ಸಭೆ ಇದಾಗಿದ್ದು, ಕಾಲೇಜಿನಲ್ಲಿ ಎರಡು ಸುತ್ತಿನ ಮಾತುಕತೆ ನಡೆದಿತ್ತು. ಸಭೆಯಲ್ಲಿ ಹಿಜಾಬ್ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು, ಪೋಷಕರು ಭಾಗಿಯಾಗಿದ್ದರು. ಐವರು ಹಿಜಾಬ್ ಹೋರಾಟಗಾರ್ತಿಯರ ಪೈಕಿ ನಾಲ್ವರು ಭಾಗಿಯಾಗಿದ್ದು, ಶಾಸಕ ರಘುಪತಿ ಭಟ್, ಬ್ಯಾರಿ ಅಕಾಡೆಮಿ ರಾಜ್ಯಾಧ್ಯಕ್ಷ ರಹೀಂ ಉಚ್ಚೀಲ, ಮುಸ್ಲಿಂ ಮುಖಂಡರು ಹಾಗೂ ಶಾಲಾಭಿವೃದ್ಧಿ ಸಮಿತಿ ಪ್ರಮುಖರು ಚರ್ಚೆ ಮಾಡಿದರು.
ಆ ಬಳಿಕ ಮಾಧ್ಯಮದ ಮುಂದೆ ಸಭೆಯ ನಿರ್ಣಯ ಪ್ರಕಟಿಸಿದ ಶಾಸಕ ರಘುಪತಿ ಭಟ್, ವಿದ್ಯಾರ್ಥಿನಿಯರು ಇನ್ನು ಮುಂದೆ ಸಮವಸ್ತ್ರ ಧರಿಸಿಯೇ ಬರಬೇಕು. ಸರ್ಕಾರ ರಚಿಸಿರುವ ರಾಜ್ಯ ಸಮಿತಿ ನಿರ್ಧಾರ ಕೈಗೊಳ್ಳುವವರೆಗೆ ಹಿಜಾಬ್‌ಗೆ ತರಗತಿಯಲ್ಲಿ ಅವಕಾಶ ಇಲ್ಲ. ಇದಕ್ಕೆ ವಿದ್ಯಾರ್ಥಿನಿಯರ ಪೋಷಕರು ಮನೆಯಲ್ಲಿ ಚರ್ಚಿಸಿ ತಿಳಿಸುತ್ತೇವೆ. ಗಂಡಸರೊಂದಿಗೆ ಮನೆಯಲ್ಲಿ ಚರ್ಚಿಸಿ ತೀರ್ಮಾನ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯರಿಗೆ ಇಂದಿನಿಂದಲೇ ತರಗತಿಗೆ ಅವಕಾಶ ಇದೆ. ನಾಳೆಯಿಂದ ಮನೆಯವರೊಂದಿಗೆ ಚರ್ಚಿಸಿ ಸ್ಪಷ್ಟ ನಿರ್ಧಾರ ತಿಳಿಸಿ ಬರಬೇಕು. ಯಾವುದೇ ಕಾರಣಕ್ಕೂ ತರಗತಿಯಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲ. ಇನ್ನು ಮುಂದೆ ಯಾವುದೇ ಸಂಘಟನೆ, ಮಾಧ್ಯಮಗಳಿಗೆ ಶಾಲೆ- ಕಾಲೇಜು ಆವರಣದೊಳಗೆ ಅನುಮತಿ ಇಲ್ಲ ಎಂದು ಉಡುಪಿ ಶಾಸಕ ರಘಪತಿ ಭಟ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಹಿಜಾಬ್ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್ ತೆಗೆದು ಬರಬೇಕು. ಶಾಲಾ ಆವರಣದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ. ಐದು ಮಂದಿ ವಿದ್ಯಾರ್ಥಿನಿಯರ ಪ್ರತಿಭಟನೆಯಿಂದ ಇತರೆ ವಿದ್ಯಾರ್ಥಿನಿಯರ ಕಲಿಕೆಗೆ ತೊಡಕಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಪರೀಕ್ಷೆ ಬರುವುದರಿಂದ ಶೈಕ್ಷಣಿಕ ವಾತಾವರಣಕ್ಕೆ ಅಡಚಣೆಯಾಗಲಿದೆ. ಇತರೆ ವಿದ್ಯಾರ್ಥಿನಿಯರ ಮನವಿ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಅಂತಾ ಶಾಸಕ ರಘುಪತಿ ಭಟ್ ಹೇಳಿದರು.

ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಒಂದೂವರೆ ತಿಂಗಳುಗಳ ಕಾಲ ವಿವಾದ ನಡೆಯಿತು. ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ ಇದೆ. ಕಾಲೇಜಿಗೆ ಬರದಿದ್ದರೆ ಆನ್‌ಲೈನ್ ಕ್ಲಾಸ್ ಅವಕಾಶ ಮಾಡಲಾಗಿದೆ. ಇನ್ನು ವಿದ್ಯಾರ್ಥಿಗಳು ಹೆಸರಿಗಾಗಿ ಹಠ ಮಾಡುವುದು ಸರಿಯಲ್ಲ. ಹಿಜಾಬ್‌ಗೆ ನಮ್ಮ ವಿರೋಧ ಇಲ್ಲ ಅದು ಇಸ್ಲಾಂನ ಪದ್ಧತಿ. ಶರಿಯತ್ ಆಧಾರಿತ ರಾಷ್ಟ್ರ ಬೇರೆ ಪ್ರಜಾಪ್ರಭುತ್ವ ರಾಷ್ಟ್ರ ಬೇರೆ. ಭಾರತದಲ್ಲಿ ಸರ್ಕಾರದ ಆದೇಶ ಪಾಲಿಸಬೇಕು. ಈವರೆಗೆ ಮುಸ್ಲಿಂ ಆಗಿ ಕರ್ತವ್ಯ ನಿರ್ವಹಿಸಿದ್ದೀರಿ, ಇನ್ನು ಮುಂದೆ ಭಾರತೀಯರಾಗಿ ಕರ್ತವ್ಯ ನಿರ್ವಹಿಸಿ ಎಂದು ಮನವರಿಕೆ ಮಾಡಲಾಗಿದೆ ಅಂತಾ ರಹೀಂ ಉಚ್ಚಿಲ ಹೇಳಿದ್ದಾರೆ.
ನಾಳೆಯ ಒಳಗೆ ಬರುವುದಾಗಿ ಮೂವರು ವಿದ್ಯಾರ್ಥಿನಿಯರು ಒಪ್ಪಿಕೊಂಡಿದ್ದಾರೆ. ಓರ್ವ ವಿದ್ಯಾರ್ಥಿನಿ ಹಿಜಾಬ್‌ಗೆ ಪಟ್ಟುಹಿಡಿದು ಅಭಿಪ್ರಾಯ ಹೇಳಿದ್ದಾಳೆ. ನಾನು ಕಾಲೇಜಿನಲ್ಲಿ ಇತರೆ ಮುಸಲ್ಮಾನ ವಿದ್ಯಾರ್ಥಿನಿಯರನ್ನು ಮಾತನಾಡಿಸಿದ್ದೇನೆ. ಅವರೆಲ್ಲಾ ನಮಗೆ ಸಮಸ್ಯೆ ಇಲ್ಲ, ಕಾಲೇಜಿನಲ್ಲಿ ಒಳ್ಳೆ ವಾತಾವರಣ ಇದೆ. ಆ ಐವರು ವಿದ್ಯಾರ್ಥಿನಿಯರಿಂದ ನಮಗೆಲ್ಲ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ ಅಂತಾ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಪ್ರತಿಕ್ರಿಯೆ ನೀಡಿದ್ದಾರೆ
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications