ಹಿಜಾಬ್ ವಿವಾದ : "ಜೈ ಶ್ರೀ ರಾಮ್" ಎಂದ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು
ಕುಂದಾಪುರ, ಫೆಬ್ರವರಿ 4: ಕುಂದಾಪುರದಲ್ಲಿ ದಿನಕಳೆದಂತೆ ಹಿಜಾಬ್ ಗಲಾಟೆ ಹೆಚ್ಚಾಗುತ್ತಿದೆ. ಇಂದು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯರನ್ನು ಕಾಲೇಜು ಹೊರಗೆ ತಡೆಯಲಾಗಿದೆ. ಜೊತೆಗೆ ಕೇಸರಿ ಶಾಲು ಧರಿಸಿ ಬಂದ ಹಿಂದೂ ವಿದ್ಯಾರ್ಥಿಗಳನ್ನೂ ಶಾಲೆಗೆ ಪ್ರವೇಶಿಸದಂತೆ ತಡೆದು ವಾಪಸ್ಸು ಕಳುಹಿಸಲಾಗಿದೆ. ಈ ವೇಳೆ ಕೇಸರಿ ಶಾಲು ಧರಿಸಿದ ಹಿಂದೂ ವಿದ್ಯಾರ್ಥಿಗಳು "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗುತ್ತಾ ಕ್ಯಾಂಪಸ್‌ನಿಂದ ಹೊರಬರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿದೆ.
ಮಂಗಳೂರಿನಲ್ಲಿದ್ದ ಹಿಜಾಬ್ ಗಲಾಟೆ ಸದ್ಯ ಉಡುಪಿಯ ಕುಂದಾಪುರಕ್ಕೆ ಬಂದು ನಿಂತಿದೆ. ದಿನಕಳೆದಂತೆ ವಿದ್ಯಾರ್ಥಿಗಳ ನಡುವೆ ಹಿಜಾಬ್ ಮತ್ತು ಕೇಸರಿ ಶಾಲ್ ವಿವಾದ ಹೆಚ್ಚಾಗುತ್ತಿದೆ. ಉಡುಪಿಯ ಕುಂದಾಪುರ ಪಿಯು ಕಾಲೇಜಿನಲ್ಲಿ ಮುಸ್ಲೀಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರಲು ತಡೆಯುವಂತೆ ಹಿಂದೂ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಲು ಅವಕಾಶ ನೀಡಿದಲ್ಲಿ ತಮಗೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಲು ಅವಕಾಶ ನೀಡಬೇಕು ಎಂದು ಹಿಂದೂ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಈ ಸಮಸ್ಯೆ ಸದ್ಯ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಈ ವಿಚಾರವಾಗಿ ಪರಸ್ಪರ ವಾಗ್ದಾಳಿ ಮಾಡುತ್ತಿವೆ. ಈಗಾಗಲೇ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹೊದಿಸಿ ಜಾತಿ ನಡುವೆ ಕಿಚ್ಚು ಹಚ್ಚುವ ಪ್ರಯತ್ನಗಳು ನಡೆದಿವೆ ಎಂದು ವಿಪಕ್ಷಗಳು ಕಿಡಿ ಕಾರಿವೆ. ಇದು ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಬಿಜೆಪಿಯ ಕುತಂತ್ರ ಎಂದು ಕಾಂಗ್ರೆಸ್ ಆಕ್ರೋಶಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಜಮೀರ್ ಅಹ್ಮದ್, ಹಿಜಾಬ್ ಕಾಲೇಜಿನಲ್ಲಿ ಧರಿಸುವುದನ್ನು ತಡೆಹಿಡಿಯುವುದರ ವಿರುದ್ಧ ಆಕ್ರೋಶಗೊಂಡಿದ್ದಾರೆ. 'ಹಿಜಾಬ್ ಬ್ರಿಟಿಷ್ ಕಾಲದಿಂದಲೂ ಹಾಕಲಾಗುತ್ತಿದೆ. ಕೇಸರಿ ಶಾಲು ಈಗ ಮೂರು ತಿಂಗಳಿಂದ ಹಾಕಿಕೊಳ್ಳುತ್ತಿದ್ದಾರೆ. ಈ ಘಟನೆ ಮಂಗಳೂರು ಒಂದು ಕಾಲೇಜಿನಲ್ಲಿ ನಡೆದಿದೆ. ಸರಿ ಹೋಗಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಇದು ವಿಪರೀತವಾಗುತ್ತಿದೆ. ಇದನ್ನ ನಾವು ಸಹಿಸುವುದಿಲ್ಲ. ಹಿಂದಿನಿಂದ ಕೇಸರಿ ಶಾಲು ಹಾಕಿಕೊಂಡು ಹೋಗುತ್ತಿದ್ದರೆ ಹಾಕಿಕೊಂಡು ಹೋಗಲಿ. ಹಿಜಾಬ್ ಹಾಕಿಕೊಳ್ಳುವುದು ಅವರ ರಕ್ಷಣೆಗಾಗಿ. ಬೇರೆಯವರ ಕಣ್ಣು ಬೀಳದೇ ಇರಲು ಹೆಣ್ಣು ಮಕ್ಕಳು ಹಾಕಿಕೊಳ್ಳುತ್ತಾರೆ. ಆದರೆ ಹುಡುಗರು ಯಾವತ್ತೂ ಕೇಸರಿ ಶಾಲು ಹಾಕಿಲ್ಲ. ಇಷ್ಟು ದಿನ ಹಿಜಾಬ್ ಬಗ್ಗೆ ಮಾತನಾಡಿಲ್ಲ. ಈಗ ಯಾಕೆ ಇದು ಪ್ರಶ್ನೆ ಬಂತು. ಇವತ್ತಿಲ್ಲ ನಾಳೆ ಬಗೆ ಹರಿಯುತ್ತದೆ ಎಂದು ನಾವು ಸುಮ್ಮನ್ನಿದ್ದೆವು. ಬಿಜೆಪಿ ಹಿಂದೂ ಮುಸ್ಲಿಂ ಗಲಬೆ ತೆಗೆದು ಲಾಭ ಪಡೆಯುತ್ತಾರೆ. ಬಿಜೆಪಿ ಚುನಾವಣೆಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಮೌನವಾಗಿರುವುದನ್ನು ನೋಡಿದರೆ ಇದರ ಹಿಂದೆ ಬಿಜೆಪಿ ಕೈವಾಡವಿದೆ. ಇದನ್ನ ನಾವು ಸುಮ್ಮನೆ ಕುಳಿತು ನೋಡುವುದಿಲ್ಲ. ಸರ್ಕಾರ ಕುಳಿತು ಚರ್ಚೆ ಮಾಡಬೇಕು' ಎಂದರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನೂ ಶಾಸಕ ಯುಟಿ ಖಾದರ್ ಅವರು ಮಾತನಾಡಿ, 'ಹೆಣ್ಣು ಮಕ್ಕಳು ಶಿಕ್ಷಣ ಕುಂಠಿತ ಆಗಬಾರದು. ಶಿಕ್ಷಣಕ್ಕೆ ಮಹತ್ವ ಕೊಡದ ವಿಚಾರ ಇದಾಗಿದೆ. ಸರ್ಕಾರ ಸ್ಪಷ್ಟವಾದ ಮಾಹಿತಿ ಕೊಡದೆ ಇರುವುದು ಇದಕ್ಕೆ ಕಾರಣ. ಶಿಕ್ಷಕರು ಪೋಷಕರು ಕುಳಿತು ಮಾತನಾಡಬೇಕು. ಇಷ್ಟು ದಿನ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬಂದರೆ ಶಿಕ್ಷಣ ಕಡಿಮೆ ಆಯ್ತಾ? ಅಥವಾ ಅಂಕಗಳು ಕಡಿಮೆ ಬಂತಾ? ವಿದ್ಯಾರ್ಥಿಗಳು ಒಟ್ಟಿಗೆ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕು. ಜಾತಿ ರಾಜಕಾರಣ ಕಾಲೇಜಿನಲ್ಲಿ ಮಾಡುವುದಲ್ಲ. ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕೋರ್ಟ್ ತೀರ್ಮಾನ ನೀಡುತ್ತದೆ. ಯಾರೋ ನಾಳ್ಕು ಜನ ಬಂದು ಬೆದರಿಸಿದ ತಕ್ಷಣ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ಕಳಿಸುವುದು ಸರಿಯಲ್ಲ' ಎಂದಿದ್ದಾರೆ.
ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಸಮವಸ್ತ್ರ ಸಮಾನತೆಯ ಸಂಕೇತ, ಜಾತಿ ಜಾತಿಗೊಂದು ಬಟ್ಟೆ, ಬಡವ-ಶ್ರೀಮಂತರಿಗೊಂದು ಉಡುಪಿಗೆ ಅವಕಾಶ ಮಾಡಿಕೊಡಲು ಆಗುವುದಿಲ್ಲ. ಬ್ರಿಟಿಷ್ ಕಾಲದಿಂದಲೂ ಸಮವಸ್ತ್ರವಿದೆ. ಶಾಲೆಗಳು ಏನು ಸೂಚಿಸುತ್ತವೆ ಅದನ್ನ ಧರಿಸಬೇಕು. ಆಗ ಮಾತ್ರ ಅದು ಸಮವಸ್ತ್ರ ಎನಿಸುತ್ತದೆ. ಒಂದೊಂದು ಧರ್ಮದಲ್ಲಿ ಒಂದೊಂದು ಉಡುಗೆ ಇದೆ. ಹಾಗಂತ ಶಾಲೆಯಲ್ಲಿ ಇದನ್ನು ಅನುಸರಿಸಲಾಗುವುದಿಲ್ಲ. ಸಂಸ್ಕಾರ ಕೊಡುವ ಶಾಲೆಗಳಲ್ಲಿ ಧರ್ಮದಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ಗೊಂದಲ ನಿರ್ಮಾಣ ಮಾಡುತ್ತಿರುವುದು ಕಾಂಗ್ರೆಸ್. ಇತ್ತೀಚೆಗೆ ಹಿಜಾಬ್ ಧರಿಸುವಂತೆ ವಿದ್ಯರ್ಥಿಗಳನ್ನು ಎತ್ತಿಕಟ್ಟುತ್ತಿದ್ದಾರೆ. ಅದಕ್ಕೆ ನನ್ನ ಬಳಿ ಸಾಕ್ಷಿಗಳಿವೆ ಎಂದು ಹರಿಹಾಯ್ದಿದ್ದರು. ಹೀಗಾಗಿ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಬೇಡಿ, ಹಿಜಾಬ್ ಕೂಡ ಧರಿಸಬೇಡಿ. ಮನಸೋಯಿಚ್ಛೆ ಧರಿಸಿ ಬಂದರೆ ಅದು ಶಾಲೆಯಲ್ಲಿ ನಡೆಯುವುದಿಲ್ಲ. ನಾಳೆ ವಿದ್ಯಾರ್ಥಿಗಳು ಒಂದು ಪಾಠ ಬೇಡ ಅಂದರೆ ಅದನ್ನು ಮಾಡಲು ಆಗುತ್ತಾ? ಎಂದು ಅರಗ ಅವರು ಪ್ರರ್ಶನೆ ಮಾಡಿದ್ದಾರೆ. ಕಾಂಗ್ರೆಸ್ ಓಟ್ ಬ್ಯಾಂಕ್ ಹೇಗೆ ಮಾಡಿದರು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಕಾಂಗ್ರೆಸ್ ಗೊಂದು ಮನವಿ ವಿದ್ಯಾರ್ಥಿಗಳಿಗೆ ಮತೀಯ ಹುಳ ಬಿಡಬೇಡಿ ಎಂದರು.
ಇನ್ನೂ ಸಚಿವ ಬಿಸಿ ನಾಗೇಶ್ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ, ಅವರ ಕಾಲದಲ್ಲೇ ಹಿಜಾಬ್ ನಿಯಮ ಮಾಡಿದ್ರು. ಸಿದ್ದರಾಮಯ್ಯ ನೋಡಿದ್ರು ದುಃಖವಾಗುತ್ತದೆ. ಒಂದಿಷ್ಟು ಪಕ್ಷಗಳು ರಾಜಕೀಯ ಮಾಡಲು ಹುಟ್ಟಿವೆ. ಅವುಗಳಿಗೆ ಪ್ರಗತಿ ಕಾಳಜಿ ಬಗ್ಗೆ ವಿಚಾರವಿಲ್ಲ. ಕೆಲವರು ಹೇಳಿದಂತೆ ಕೇಳಿಕೊಂಡು ಓಟಿಗಾಗಿ ರಾಜಕೀಯ ಮಾಡುತ್ತಾ ಹೋಗುತ್ತಾರೆ. ದೇಶದ ಅನೇಕ ಸಮಸ್ಯೆಗಳಿಗೆ ಅವರೇ ಉತ್ತರ ಕೊಡಬೇಕು ಎಂದರು.
-
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
ಹೈಟೆಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್: 65ಮೀ ವಿಸ್ತರಣೆ, ಮೆಟ್ರೋ-ಸೈಕಲ್ ಟ್ರ್ಯಾಕ್ಗಳೂ ಲಭ್ಯ; ವಿನ್ಯಾಸ ವಿವರ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ












Click it and Unblock the Notifications