ಮುಸ್ಲಿಂಮರ ಹಕ್ಕು ಕೇಳಿದಾಕ್ಷಣ ಪಾಕಿಸ್ತಾನಕ್ಕೆ ಹೋಗಬೇಕಾ?; ಹಿಜಾಬ್ ಹೋರಾಟಗಾರ್ತಿ

ಉಡುಪಿ, ಫೆಬ್ರವರಿ 09; ರಾಜ್ಯದಲ್ಲಿ ವಿದ್ಯಾರ್ಥಿ ಯುವ ಸಮುದಾಯದಲ್ಲಿ ಕೋಲಾಹಲವನ್ನು ಎಬ್ಬಸಿದ್ದ ಹಿಜಾಬ್ ವಿವಾದವನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತ್ರಿ ಸದಸ್ಯ ಪೀಠ ಗುರುವಾರದಿಂದ ವಿಚಾರಣೆ ನಡೆಸಲಿದೆ.

ತ್ರಿ ಸದಸ್ಯ ಪೀಠದಲ್ಲಿ ಎಲ್ಲಾ ಅರ್ಜಿಗಳ ವಿವರವಾದ ವಿಚಾರಣೆ ನಡೆಯುವುದರಿಂದ ಜನರ ನೀರೀಕ್ಷೆಯ ಕೋರ್ಟ್ ತೀರ್ಪು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ವಿವಾದದ ಮೂಲ ವಾದ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಕೋರ್ಟ್ ತೀರ್ಪು ನೀಡೋಕೆ ಮತ್ತಷ್ಟು ವಿಳಂಬ ಮಾಡಿರೋದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿದ್ಯಾರ್ಥಿನಿ ಆಲಿಯಾ ಅಸಾದಿ ಈ ಬಗ್ಗೆ ಮಾತನಾಡಿದ್ದು, ಹಲವು ವಿಚಾರಗಳ ಬಗ್ಗೆ ಆಕ್ರೋಶ ಭರಿತರಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಕೋರ್ಟ್ ತೀರ್ಪು ತಡವಾಗಿ ನೀಡೋದರಿಂದ ನಮ್ಮ ಮುಂದಿನ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ತಿಂಗಳಾಂತ್ಯದಲ್ಲಿ ಪರೀಕ್ಷೆ ಇರೋದಿರಿಂದ ಕೋರ್ಟ್ ಬೇಗ ತೀರ್ಪು ನೀಡಬೇಕು. ಆದರೂ ತೀರ್ಪು ನಮ್ಮ ಹಿಜಾಬ್ ಬೇಡಿಕೆಯ ಪರ ಬರುವ ವಿಶ್ವಾಸ ಇದೆ" ಎಂದು ಆಲಿಯಾ ಹೇಳಿದ್ದಾರೆ.

Hijab Issue Why We Go To Pakistan Asks Aaliya Assadi

ಈ ವಿವಾದ ಹಬ್ಬಲು ಮೂಲ ಕಾರಣ ಶಾಸಕ ರಘಪತಿ ಭಟ್ ಅಂತಾ ಆಲಿಯಾ ನೇರ ಆರೋಪ ಮಾಡಿದ್ದಾರೆ. "ಈ ವಿವಾದ ಹಬ್ಬಲು ಮೂಲ ಕಾರಣ ಧಾಸಕ ರಘಪತಿ ಭಟ್. ಈ ಸಣ್ಣ ವಿಚಾರವನ್ನು ರಘಪತಿ ಭಟ್ ಮಾತುಕತೆಯ ಮೂಲಕ ಬಗೆಹರಿಸಬಹುದಿತ್ತು. ಆದರೆ ವಿಚಾರವನ್ನು ಕೋಮುವಾದ ಬಣ್ಣಕ್ಕೆ ತಿರುಗಿಸಿದರು. ನೀವು ಹಿಜಾನ್ ಧರಿಸಿದರೆ ನಮ್ಮವರು ಕೇಸರಿ ಶಾಲು ಧರಿಸುತ್ತಾರೆ ಅಂತಾ ಮೊದಲು ರಘಪತಿ ಭಟ್ ಅವರೇ ಹೇಳಿದ್ದಾರೆ. ಆ ಬಳಿಕ ಕೇಸರಿ ಶಾಲು ಹಾಕೋಕೆ ಆರಂಭವಾಯಿತು" ಎಂದು ದೂರಿದರು.

ಇನ್ನು ಶಾಸಕ ರಘಪತಿ ಭಟ್ ಬಿಡುಗಡೆ ಮಾಡಿರುವ ದಾಖಲೆಗಳನ್ನು ನಿರಾಕರಿಸಿತರುವ ಆಲಿಯಾ, "ಇದು ಸುಳ್ಳು, ಆ ಸಂಧರ್ಭದಲ್ಲಿ ಪ್ರಾಂಶುಪಾಲರು ಒತ್ತಾಯ ಪೂರ್ವಕವಾಗಿ ಹಿಜಾಬ್ ತೆಗೆಸಿದ್ದಾರೆ. ಫೋಟೋ ಬಳಿಕ ಹಿಜಾಬ್ ಧರಿಸಿದ್ದೇವೆ" ಎಂದರು.

ಪಾಕಿಸ್ತಾನಕ್ಕೆ ಏಕೆ ಹೋಗಬೇಕು?: ಇನ್ನು ಹಿಜಾಬ್ ಬೇಕಾದರೆ ಪಾಕಿಸ್ಥಾನಕ್ಕೆ ಹೋಗಲಿ ಎಂಬ ಬಿಜೆಪಿಗರ ಟೀಕೆಗೆ ಉತ್ತರಿಸಿದ ಅರ್ಜಿದಾರೆ ಆಲಿಯಾ, "ಪಾಕ್‌ಗೆ ನಾವು ಯಾಕೆ ಹೋಗಬೇಕು. ಭಾರತ ನನ್ನ ದೇಶ, ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತೇವೆ. ಹಕ್ಕು ಕೇಳಿದಾಕ್ಷಣ ಪಾಕಿಸ್ಥಾನಕ್ಕೆ ಹೋಗಬೇಕಾ?. ಪಾಕ್‌ಗೆ ಹೋಗಿ ಅಂತಾ ಹೇಳೋಕೆ ಪಾಕ್ ಏನು ಅವರದ್ದಾ?. ಮುಸ್ಲಿಮರು ಹಕ್ಕು ಕೇಳಿದರೆ ಪಾಕ್‌ಗೆ ಹೋಗಿ ಅಂತಾ ಯಾಕೆ ಹೇಳೋದು ಅಂತಾ?" ಆಲಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ವಿವಾದ ವಿದ್ಯಾರ್ಥಿಗಳ ನಡುವೆ ಅಂತರ ತರುವ ಬಗ್ಗೆ ಮಾತನಾಡಿದ ಆಲಿಯಾ, "ಈ ಅಂತರವನ್ನು ರಾಜಕಾರಣಿಗಳು ಸೃಷ್ಟಿಸಿದ್ದಾರೆ. ಮೊದಲು ನಮ್ಮ ಶಾಲೆಯ ಮುಸ್ಲಿಂಮೇತರರು ಹಿಜಾಬ್ ನಿಮ್ಕ ಹಕ್ಕು, ನೀವು ಕೇಳಬೇಕು ಅಂತಾ ಹೇಳಿದ್ದರು" ಎಂದರು.

"ಆದರೆ ಈಗ ನಮ್ಮನ್ನು ವಿರೋಧಿಸುತ್ತಿದ್ದಾರೆ. ರಾಜಕಾರಣಿಗಳು ಅವರ ರಾಜಕಾರಣದ ಮೈಲೇಜ್ ತೋರಿಸುತ್ತಿದ್ದಾರೆ. ಕಾಲೇಜಿನಲ್ಲಿ ನಮಗೆ ಹಿಜಾಬ್ ಧರಿಸೋಕೆ ಬಿಡುತ್ತಿರಲಿಲ್ಲ. ನಮ್ಮ ಸಿನೀಯರ್ ವಿದ್ಯಾರ್ಥಿಗಳು ಹಿಜಾಬ್ ಧರಿಸಿದರೆ ಶಿಕ್ಷಕರು ಹೀನವಾಗಿ ಪ್ರಶ್ನೆ ಮಾಡುತ್ತಿದ್ದರು. ಹಿಜಾಬ್ ಧರಿಸಿದ್ದ ಕಾರಣ ನನ್ನನ್ನು ತರಗತಿಯಿಂದ ಹೊರಹಾಕಿದ್ದಾರೆ. ಸೀನಿಯರ್‌ಗಳಿಗೆ ಇಂಟರ್ನಲ್ ಪರೀಕ್ಷೆಯಲ್ಲಿ ಅಂಕಗಳನ್ನು ಕಡಿಮೆ ಕೊಟ್ಟಿದ್ದಾರೆ" ಅಂತಾ ರಿಟ್ ಅರ್ಜಿದಾರೆ ಆಲಿಯಾ ಹೇಳಿದ್ದಾರೆ.

ರಘುಪತಿ ಭಟ್ ವಿರುದ್ಧ ಆರೋಪ; "ಉಡುಪಿಯ ಹಿಜಾಬ್ ವಿವಾದಕ್ಕೆ ಶಾಸಕ ರಘಪತಿ ಭಟ್ ಕಾರಣ" ಎಂದು ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಪೂಂಜಾಲಕಟ್ಟೆ ಬುಧವಾರ ಬೆಳಗ್ಗೆ ಆರೋಪಿಸಿದ್ದರು.

"ಸಣ್ಣದಾಗಿ ಮುಗಿಸುವ ವಿಷಯವನ್ನು ಶಾಸಕ ರಘಪತಿ ಭಟ್ ಮತ್ತು ಬಿಜೆಪಿ, ಸಂಘಪರಿವಾರ ಮುಂದಿನ ಚುನಾವಣೆಯ ದೃಷ್ಠಿಯಿಂದ ದೊಡ್ಡ ವಿವಾದವಾಗಿ ಮಾಡಿದ್ದಾರೆ. ಹಿಂದೂ-ಮುಸ್ಲಿಂ ವಿಭಜನೆ ಮಾಡುವ ಮೂಲಕ ತಮ್ಮ ಮತ ಬ್ಯಾಂಕ್ ಭಧ್ರ ಮಾಡಿಕೊಳ್ಳುತ್ತಿದ್ದಾರೆ" ಎಂದು ದೂರಿದ್ದರು.

ಮಂಗಳವಾರ ಶಾಸಕ ರಘುಪತಿ ಭಟ್ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ವಿರುದ್ಧ ಸ್ಪೋಟಕ ದಾಖಲೆ ಬಹಿರಂಗ ಮಾಡಿದ್ದರು. ಕಾಲೇಜಿನಲ್ಲಿ ಹಲವು ವರ್ಷಗಳಿಂದ ಹಿಜಾಬ್ ಧರಿಸಲು ಅವಕಾಶ ನೀಡಿದ್ದರು ಎಂಬ ಹೇಳಿಕೆ‌ ನೀಡಿದ್ದ ವಿದ್ಯಾರ್ಥಿನಿಯರದ್ದು ಹಸಿ ಹಸಿ ಸುಳ್ಳು ಎಂದು ದಾಖಲೆಗಳ ಮೂಲಕ ಬಹಿರಂಗಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+