ಉಡುಪಿ ಸೌಂದರ್ಯವನ್ನು ಹೆಲಿಕಾಪ್ಟರ್‌ನಲ್ಲಿ ಸವಿಯಿರಿ

Posted By: Gururaj
Subscribe to Oneindia Kannada

ಉಡುಪಿ, ಡಿಸೆಂಬರ್ 24 : 'ಉಡುಪಿ ಪರ್ಬ'ದ ಅಂಗವಾಗಿ ಹೆಲಿ ಟೂರಿಸಂಗೆ ಚಾಲನೆ ನೀಡಲಾಗಿದೆ. ಡಿಸೆಂಬರ್ 29 ರಿಂದ 31ರ ತನಕ ಮಲ್ಪೆ ಕಡಲ ಕಿನಾರೆಯಲ್ಲಿ ಉಡುಪಿ ಪರ್ಬ ನಡೆಯಲಿದೆ.

ಕ್ರೀಡೆ ಮತ್ತು ಯುವ ಸಬಲೀಕರಣ ಖಾತೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೆಲಿಟೂರಿಸಂಗೆ ಚಾಲನೆ ನೀಡಿದ್ದಾರೆ. ಡಿಸೆಂಬರ್ 27ರ ತನಕ ಉಡುಪಿಯಲ್ಲಿ ಹೆಲಿ ಟೂರಿಸಂ ಅನುಭವ ಪಡೆಯಬಹುದಾಗಿದೆ.

ಉಡುಪಿಯಲ್ಲಿ 60 ಲಕ್ಷ ವೆಚ್ಚದಲ್ಲಿ 'ಅಡ್ವೆಂಚರ್ ಫೆಸ್ಟ್'

ಉಡುಪಿ ಹೆಲಿಪ್ಯಾಡ್‌ನಿಂದ ಹೆಲಿ ಟೂರಿಸಂ ಸೇವೆ ಆರಂಭವಾಗಲಿದ್ದು, 8 ನಿಮಿಷಗಳ ಕಾಲ ಉಡುಪಿಯ ಸೌಂದರ್ಯವನ್ನು ಸವಿಯಬಹುದಾಗಿದೆ. ಡಿಸೆಂಬರ್ 28ರಿಂದ ಕುಂದಾಪುರದಲ್ಲಿ ಈ ಸೇವೆ ಆರಂಭವಾಗಲಿದೆ.

'ಮಾರಿಹಬ್ಬ' ಎನ್ನುವುದು ಬಲಿ ಪಡೆಯುವುದಾ? ಪ್ರಮೋದ್ ಮಧ್ವರಾಜ್ ಟಾಂಗ್

'ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೆಲಿ ಟೂರಿಸಂ ಆರಂಭಿಸಲಾಗಿದೆ. ಶಾಶ್ವತ ಹೆಲಿ ಟೂರಿಸಂ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತದೆ' ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಹೇಳಿದ್ದಾರೆ.

ಪ್ರವಾಸೋದ್ಯಮಕ್ಕೆ ಒತ್ತು

ಪ್ರವಾಸೋದ್ಯಮಕ್ಕೆ ಒತ್ತು

ಹೆಲಿ ಟೂರಿಸಂಗೆ ಚಾಲನೆ ನೀಡಿ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು, ‘ಉಡುಪಿಯಲ್ಲಿ ಕಾಡು, ಹಿನ್ನೀರು, ಸಮುದ್ರ ಮತ್ತು ಪ್ರಸಿದ್ಧ ದೇವಾಲಯಗಳಿವೆ. ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ಉತ್ತಮ ಅವಕಾಶವಿದೆ' ಎಂದರು.

ಉಡುಪಿಯಲ್ಲಿ ಸೌಂದರ್ಯ ನೋಡಿದ್ದೇನೆ

ಉಡುಪಿಯಲ್ಲಿ ಸೌಂದರ್ಯ ನೋಡಿದ್ದೇನೆ

‘ಮುಖ್ಯಮಂತ್ರಿಗಳ ಜೊತೆ ಹಲವು ಬಾರಿ ಹೆಲಿಪಾಕ್ಟರ್‌ನಲ್ಲಿ ಪ್ರಯಾಣಿಸಿದ್ದೇನೆ. ವಿದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ಸುತ್ತಾಡಿದ್ದೇನೆ. ಆದರೆ, ಇದೆ ಮೊದಲ ಬಾರಿಗೆ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಹೆಲಿಕಾಪ್ಟರ್ ಮೂಲಕ ನೋಡುವ ಅವಕಾಶ ಸಿಕ್ಕಿತ್ತು' ಎಂದು ಸಚಿವರು ಹೇಳಿದರು.

8 ನಿಮಿಷದ ಪ್ರಯಾಣಕ್ಕೆ 2,500

8 ನಿಮಿಷದ ಪ್ರಯಾಣಕ್ಕೆ 2,500

ಹೆಲಿಕಾಪ್ಟರ್‌ನಲ್ಲಿ 8ನಿಮಿಷ ಪ್ರಯಾಣಿಸಲು 2,500 ರೂ. ನಿಗದಿ ಮಾಡಲಾಗಿದೆ. ಸಾಹಸಯಾನಕ್ಕೆ 3,500 ಇದೆ. ವೈಮಾನಿಕ ಸ್ಟಂಟ್‌ಗಳನ್ನು ಮಾಡಲಾಗುತ್ತದೆ.

ಡಿಸೆಂಬರ್ 28ರಿಂದ ಕುಂದಾಪುರದಲ್ಲಿ

ಡಿಸೆಂಬರ್ 28ರಿಂದ ಕುಂದಾಪುರದಲ್ಲಿ

ಡಿಸೆಂಬರ್ 27ರ ತನಕ ಉಡುಪಿಯಲ್ಲಿ ಹೆಲಿ ಟೂರಿಸಂ ಸೇವೆ ಲಭ್ಯವಿದೆ. ಡಿಸೆಂಬರ್ 28ರಿಂದ ಕುಂದಾಪುರದಲ್ಲಿ ಹೆಲಿ ಟೂರಿಸಂ ಸೇವೆಯನ್ನು ಆರಂಭಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Enjoy the beauty of Udupi and its surroundings by helicopter. The Udupi district administration launched heli-tourism as part of the Udupi Parba (Udupi Festival). Facility will be available at the NCC Ground in Udupi from December 22 to 27 and December 28 to 31, 2017 at at UVA Meridian Resorts at Koteshwar near Kundapur.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ