ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಗುಲಗಳಿಗೆ ನುಗ್ಗಿತು ಮಳೆ ನೀರು, ಮುಳುಗಿತು ಕಮಲಶಿಲೆ

By ಉಡುಪಿ ಪ್ರತಿನಿಧಿ
|
Google Oneindia Kannada News

Recommended Video

ಉಡುಪಿಯಲ್ಲಿ ಬಾರಿ ಮಳೆ : ನೀರಿನಲ್ಲಿ ಮುಳುಗಿತು ದೇಗುಲದ ಕಮಲಶಿಲೆ

ಉಡುಪಿ, ಜೂನ್ 29 : ಗುರುವಾರ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಐದು ನದಿಗಳು ಉಕ್ಕಿ ಹರಿಯುತ್ತಿವೆ. ಮಳೆಯ ಅಬ್ಬರಕ್ಕೆ ಜನರು ಕಂಗಾಲಾಗಿದ್ದು, ಪ್ರಮುಖ ದೇವಾಲಯಗಳಲ್ಲಿ ಒಂದಾದ ಸಿದ್ದಾಪುರದ ಕಮಲಶಿಲೆ ದೇವಸ್ಥಾನಕ್ಕೆ ಕುಬ್ಜ ನದಿಯ ನೀರು ತುಂಬಿದೆ.

ಮುಳುಗಿದ ಸುಬ್ರಹ್ಮಣ್ಯ ಹೊಸಮಠ ಸೇತುವೆ: ವಾಹನ ಸಂಚಾರ ಸ್ಥಗಿತಮುಳುಗಿದ ಸುಬ್ರಹ್ಮಣ್ಯ ಹೊಸಮಠ ಸೇತುವೆ: ವಾಹನ ಸಂಚಾರ ಸ್ಥಗಿತ

ಇನ್ನು ಬೈಂದೂರಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ನೀರು ನುಗ್ಗಿದ್ದು, ದೇಗುಲವು ಸಂಪೂರ್ಣ ಜಲಾವೃತಗೊಂಡಿದೆ. ಉಪ್ಪೂರು, ಕಾಪು, ನಾವುಂದ, ಕಟಪಾಡಿ, ಕೊಕ್ಕರ್ಣೆ, ಹೊಸಂಗಡಿ ಮೊದಲಾದ ಕಡೆ ಮಳೆಯು ಬಿರುಸಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಕುಂದಾಪುರ ಭಾಗದಲ್ಲಿ ಮನೆಗಳೊಳಗೆ ನೀರು ನುಗ್ಗಿ, ಜನರು ಪರದಾಡುವಂತೆ ಆಗಿದೆ.

Heavy rain in Udupi district, Kamalashile drowned in water

ಇನ್ನು ಕಡಲತೀರದ ಪ್ರದೇಶಗಳಲ್ಲಿ ಅಲೆಗಳ ಅಬ್ಬರ ಕೂಡ ಜೋರಾಗಿದ್ದು, ತೀರ ಪ್ರದೇಶದಲ್ಲಿ ವಾಸ ಮಾಡುವವರು ಮನೆ ಬಿಟ್ಟು ತೆರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ವರ್ಣ ನದಿ ಕೂಡ ತುಂಬಿ ಹರಿಯುತ್ತಿದ್ದು, ನದಿಯ ಬಳಿಯಿರುವ ಸೇತುವೆ ಕುಸಿದಿದೆ. ಒಟ್ಟಿನಲ್ಲಿ ಮಳೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಆತಂಕಕಾರಿಯಾಗಿದೆ.

English summary
Heavy rain in Udupi district, Kamalashile drowned in water. Dakshina Kannada and Udupi district people life hit by heavy rain. Many temples drowned in water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X