ಉಡುಪಿಯಲ್ಲಿ ಜೋರು ಮಳೆಗೆ ಹಲವು ಮನೆಗಳು ಜಲಾವೃತ
ಉಡುಪಿ, ಜುಲೈ 24: ಕರಾವಳಿ ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮಳೆ ಹಿನ್ನೆಲೆಯಲ್ಲಿ ಉಡುಪಿ ನಗರ ಸೇರಿದಂತೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿದೆ. ಇದರಿಂದ ಹಲವು ಮನೆಗಳು ಜಲಾವೃತಗೊಂಡಿವೆ.
ನಗರದ ಮೂಡನಿಡಂಬೂರು, ನಿಟ್ಟೂರು, ಗುಂಡಿಬೈಲು ಹಾಗೂ ಶ್ರೀಕೃಷ್ಣ ಮಠದ ಬೈಲಕೆರೆ ಪ್ರದೇಶಗಳಲ್ಲಿ ಸುಮಾರು 30-40 ಮನೆಗಳಿಗೆ ಮಳೆಯ ನೀರು ನುಗ್ಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಮನೆಯವರನ್ನು ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಸುಮಾರು 30 ಮನೆಗಳು ಜಲಾವೃತಗೊಂಡಿವೆ. ಬನ್ನಂಜೆಯ ಮೂಡನಿಡಂಬೂರು ಪರಿಸರದಲ್ಲಿ ಮನೆಗಳು ಜಲಾವೃತಗೊಂಡಿದ್ದು, ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಇಡೀ ಪರಿಸರ ಸಂಪರ್ಕ ಕಡಿದುಕೊಂಡಿದೆ.












Click it and Unblock the Notifications