ಶ್ರೀಮಂತರು ಮನೆಯಲ್ಲಿ ನಾಯಿಗಳಂತೆ ಗೋವುಗಳನ್ನು ಸಾಕಿ - ಪೇಜಾವರ ಶ್ರೀ
ಶ್ರೀಮಂತರು ಮನೆಯಲ್ಲಿ ನಾಯಿಗಳ ಸಂರಕ್ಷಣೆ ಮಾಡುವ ರೀತಿಯಲ್ಲೇ ಗೋವುಗಳನ್ನು ಸಾಕಬೇಕು. ಪ್ರತಿ ಗ್ರಾಮಗಳಲ್ಲಿ ಸಂಘಟನೆಯ ಮೂಲಕ ಗೋ ಶಾಲೆಗಳನ್ನು ಸ್ಥಾಪಿಸಬೇಕು ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ, ಫೆಬ್ರವರಿ 27: ರಾಷ್ಟ್ರಾದಾದ್ಯಂತ ಗೋ ಹತ್ಯೆ ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗೋ ಶಾಲೆಗಳ ಒಕ್ಕೂಟದ ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗ ದಳ, ಹಿಂದು ಜಾಗರಣಾ ವೇದಿಕೆ, ಗೋ ಪರಿವಾರಗಳು ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ರವಿವಾರ ಹಮ್ಮಿಕೊಳ್ಳಲಾದ ಗೋ ಸತ್ಯಾಗ್ರಹವನ್ನು ಗೋ ಪೂಜೆ ಮಾಡುವ ಮೂಲಕ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿದ್ದರು.
ಗೋ ಹತ್ಯೆ ನಿಷೇಧವು ಆಯಾ ರಾಜ್ಯಗಳಿಗೆ ಸಂಬಂಧಿಸಿದ್ದಾಗಿರುವುದರಿಂದ ಕೇಂದ್ರ ಸರಕಾರಕ್ಕೆ ಇಡೀ ದೇಶಾದ್ಯಂತ ಗೋ ಹತ್ಯೆ ನಿಷೇಧ ಜಾರಿಗೆ ತರಲು ಆಗುತ್ತಿಲ್ಲ. ಆದುದರಿಂದ ಕೇಂದ್ರ ಸರಕಾರ ಸಂವಿಧಾನವನ್ನೇ ಬದಲಾಯಿಸಿ ದೇಶಾದ್ಯಂತ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.[ಹಿಂಜಾವೇ ಕಾರ್ಯಕರ್ತರಿಂದ ಪಡುಬಿದ್ರೆ ಪೊಲೀಸ್ ಠಾಣೆಗೆ ಮುತ್ತಿಗೆ]

ಶ್ರೀಮಂತರು ಮನೆಯಲ್ಲಿ ನಾಯಿಗಳ ಸಂರಕ್ಷಣೆ ಮಾಡುವ ರೀತಿಯಲ್ಲೇ ಗೋವುಗಳನ್ನು ಸಾಕಬೇಕು. ಪ್ರತಿ ಗ್ರಾಮಗಳಲ್ಲಿ ಸಂಘಟನೆಯ ಮೂಲಕ ಗೋ ಶಾಲೆಗಳನ್ನು ಸ್ಥಾಪಿಸಬೇಕು. ಪ್ರತಿ ದೇವಸ್ಥಾನಗಳು ಕೂಡ ಗೋ ಶಾಲೆಯನ್ನು ನಿರ್ಮಿಸಬೇಕು. ಅದೇ ರೀತಿ ಸರಕಾರ ಕೂಡ ಪ್ರತಿ ತಾಲೂಕಿನಲ್ಲೂ ಗೋ ಶಾಲೆಗಳನ್ನು ಸ್ಥಾಪಿಸಿ ಗೋ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.[ತ್ಯಾಜ್ಯ ನೀರನ್ನೇ ಮರು ಬಳಕೆ ಮಾಡುವ ಉಡುಪಿಯ ಮೊದಲ ದೇಗುಲ]
ಮುಂದಿನ ಚುನಾವಣೆಯಲ್ಲಿ ಗೋ ಹತ್ಯೆ ನಿಷೇಧಿಸುವ ಪಕ್ಷಕ್ಕೆ ಮತ ಹಾಕುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ದೇಶದ ಸಮೃದ್ಧಿ ಹಾಗೂ ಮಾನವೀಯತೆ ದೃಷ್ಠಿಯಿಂದ ಗೋ ಹತ್ಯೆ ನಿಷೇಧ ಮಾಡುವುದು ಅಗತ್ಯ ಎಂದು ಅವರು ತಿಳಿಸಿದರು.[ಮಧ್ವಾಚಾರ್ಯರ ಬಗ್ಗೆ ತಪ್ಪು ಕಲ್ಪನೆ ಹರಡಿಸಲಾಗಿತ್ತು - ಪೇಜಾವರ ಶ್ರೀ]

ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿ ಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಮಧ್ವಾಚಾರ್ಯರ ಬಗ್ಗೆ ತಪ್ಪು ಕಲ್ಪನೆ ಹರಡಿಸಲಾಗಿತ್ತು - ಪೇಜಾವರ ಶ್ರೀಸ್ವಾಮೀಜಿ, ಆನೆಗುಂದಿ ಸಂಸ್ಥಾನದ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಗೋ ಹತ್ಯೆ ನಿಷೇಧಿಸುವಂತೆ ಆಗ್ರಹಿಸಿದರು.












Click it and Unblock the Notifications