ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಸ್ತೂಲು ತೋರಿಸಿ ರೈಲಿನಲ್ಲಿ ನಾಲ್ಕು ಕೆ.ಜಿ. ಚಿನ್ನ ದೋಚಿ ಪರಾರಿ

By ಕಿರಣ್ ಸಿರ್ಸೀಕರ್
|
Google Oneindia Kannada News

ಉಡುಪಿ, ಸೆಪ್ಟೆಂಬರ್ 18 : ರೈಲಿನಲ್ಲಿ ಚಿನ್ನದ ವ್ಯಾಪಾರಿಯೊಬ್ಬರಿಗೆ ದುಷ್ಕರ್ಮಿಗಳ ತಂಡ ಪಿಸ್ತೂಲು ತೋರಿಸಿ, ಅಪಾರ ಪ್ರಮಾಣದ ಚಿನ್ನವನ್ನು ಕಸಿದು ಪರಾರಿಯಾದ ಘಟನೆ ಉಡುಪಿ ಹೊರವಲಯದ ಕಾಪು ಎಂಬಲ್ಲಿ ನಡೆದಿದೆ. ಈ ಘಟನೆ ಬೆಳಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮುಂಬಯಿ- ತಿರುವನಂತಪುರ ನಡುವೆ ಸಂಚರಿಸುವ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಮುಂಬಯಿಯ ಆಭರಣ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಜೇಂದ್ರ ಸಿಂಗ್ ರೈಲಿನ ಎಸ್ 7 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಕಾಪು ತಲುಪುತ್ತಿದ್ದಂತೆ ದುಷ್ಕರ್ಮಿಗಳ ತಂಡ ರಾಜೇಂದ್ರ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದೆ.

ಉಡುಪಿ: ವೃದ್ಧ ಅತ್ತೆ-ಮಾವನನ್ನು ಮನಬಂದಂತೆ ಥಳಿಸಿದ ಸೊಸೆಉಡುಪಿ: ವೃದ್ಧ ಅತ್ತೆ-ಮಾವನನ್ನು ಮನಬಂದಂತೆ ಥಳಿಸಿದ ಸೊಸೆ

ಈ ಸಂದರ್ಭದಲ್ಲಿ ಚಾಕು ಹಾಗೂ ಪಿಸ್ತೂಲ್ ತೋರಿಸಿದ ದುಷ್ಕರ್ಮಿಗಳ ತಂಡ ರಾಜೇಂದ್ರ ಸಿಂಗ್ ಅವರನ್ನು ಕೊಲ್ಲುವುದಾಗಿ ಬೆದರಿಸಿದೆ. ಆ ನಂತರ ರಾಜೇಂದ್ರ ಸಿಂಗ್ ಅವರ ಬಳಿಯಿದ್ದ 4.11 ಕಿಲೋ ಗ್ರಾಂ ಚಿನ್ನದ ಬಳೆಗಳನ್ನು ಕಸಿದುಕೊಂಡಿದೆ.

Gun

ಕಾಪುವಿನಲ್ಲಿ ಚಿನ್ನಾಭರಣ ಲೂಟಿ ಮಾಡಿದ ದುಷ್ಕರ್ಮಿಗಳ ತಂಡವು ಮಂಗಳೂರು ಹೊರವಲಯದ ಸುರತ್ಕಲ್ ನಿಲ್ದಾಣ ತಲಪುತ್ತಿದ್ದಂತೆ ರೈಲಿನಿಂದ ಇಳಿದು ಪರಾರಿಯಾಗಿದೆ.

ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕಾರ್ಕಳದ ಎಎಸ್ ಪಿ ನೇತೃತ್ವದಲ್ಲಿ ತನಿಖೆಗೆ ಪೊಲೀಸ್ ಅಧಿಕಾರಿಗಳ 3 ತಂಡ ರಚಿಸಲಾಗಿದೆ.

English summary
Gold bangles robbed in train by showing pistol near Kapu in Udupi. Incident came in to light late.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X