ಮಲ್ಪೆ ಬೋಟ್ ಬಲೆಗೆ ಬಿದ್ದ ರಕ್ಕಸ ಗಾತ್ರದ ಅಪರೂಪದ ತೊರಕೆ ಮೀನು!
ಉಡುಪಿ, ಮೇ 13:ಉಡುಪಿಯ ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್ ಬಲೆಗೆ ಬಿದ್ದ ಭಾರೀ ಗಾತ್ರದ ಮೀನು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್ ಅಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಭಾರೀ ಗಾತ್ರದ ಅಪರೂಪದ 'ತೊರಕೆ' ಮೀನು ಬಲೆಗೆ ಸಿಲುಕಿದೆ.
ಆಳ ಸಮುದ್ರ ಮೀನುಗಾರಿಕೆ ನಡೆಸುವ ದಿವ್ಯಾಂಶಿ ಎಂಬ ಹೆಸರಿನ ಬೋಟಿಗೆ ಬಂಪರ್ ಲಾಟರಿ ಹೊಡೆದಿದೆ. ಬಲೆಗೆ ಸಿಕ್ಕ ತೊರಕೆ ಜಾತಿಯ ರಕ್ಕಸ ಗಾತ್ರದ ಮೀನು ಬರೋಬ್ಬರಿ 1.220ಕೆ.ಜಿಗೂ ಅಧಿಕ ಭಾರವಿದೆ. ಈ ಗಾತ್ರದ ಮೀನು ಸಿಗೋದು ಬಲು ಅಪರೂಪವೇ ಸರಿ.

ಮಿಥುನ್ ಕುಂದರ್ ಈ ಬೋಟಿನ ಮಾಲೀಕರು. ಬಲೆಗೆ ಸಿಕ್ಕ ಈ ಗಜಗಾತ್ರದ ಮೀನನ್ನು ದಡಕ್ಕೆ ಎಳೆಯಲು ಹರಸಾಹಸ ಪಡಬೇಕಾಯ್ತು. ಕ್ರೈನ್ ನ ಸಹಾಯದಿಂದ ಎತ್ತಿ ಮಲ್ಪೆ ಬಂದರಿಗೆ ಸಾಗಿಸಲಾಯ್ತು. ಬಳಿಕ ಉಡುಪಿಯ ಮಾರುಕಟ್ಟೆಗೆ ಈ ಮೀನು ಸೇಲ್ ಆಗಿದೆ. ಈ ಒಂದು ಮೀನಿನ ಬೆಲೆ ಐವತ್ತು ಸಾವಿರಕ್ಕೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ.
ಇಷ್ಟು ಬೃಹತ್ ಗಾತ್ರದ ಮೀನು ಕಾಣಸಿಗುವುದು ಬಲು ಅಪರೂಪ ಎನ್ನಲಾಗಿದ್ದು, ನೋಡಲು ಬಹಳಷ್ಟು ಜನ ಸೇರಿದ್ದರು. ಈ ಕುರಿತ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ತೊರಕೆ ಮೀನಿನ ಟೇಸ್ಟ್ ತಿಂದವರಿಗೇ ಗೊತ್ತು. ಈ ಗಜಗಾತ್ರದ ಮೀನು ಸಾವಿರಾರು ಮತ್ಸ್ಯಪ್ರಿಯರ ಹೊಟ್ಟೆ ಸೇರಿ ಸಂತೃಪ್ತಿ ನೀಡೊದಂತೂ ಖಂಡಿತ.












Click it and Unblock the Notifications