ಉಡುಪಿ ಜನತೆಗೆ ಐದು ದಿನ ಉಚಿತ ಬಸ್ ಸೇವೆ
ಉಡುಪಿ, ಮೇ 25: ಲಾಕ್ ಡೌನ್ ನಿಂದಾಗಿ ಒಂದೂವರೆ ತಿಂಗಳು ಸಾರ್ವಜನಿಕ ಸಂಚಾರ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೀಡಾದ ಜನ ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಉಡುಪಿಯಲ್ಲಿ ಇಂದಿನಿಂದ ಖಾಸಗಿ ಬಸ್ ಸಂಚಾರ ಪ್ರಾರಂಭಗೊಂಡಿದೆ. ಅಷ್ಟೇ ಅಲ್ಲದೆ ಐದು ದಿನ ಉಚಿತವಾಗಿ ಜನರು ನಗರದಲ್ಲಿ ಸಂಚರಿಸಬಹುದಾಗಿದೆ.
Recommended Video
ಭಾನುವಾರ ಎಣ್ಣೆ ಸಿಗುತ್ತಾ ಇಲ್ವಾ ಅನ್ನೋದೇ ಪ್ರಶ್ನೆ ! Liquor available on sunday
ತಮ್ಮ ಸ್ವಂತ ಖರ್ಚಿನಿಂದ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಉಡುಪಿ ಶಾಸಕ ರಘುಪತಿ ಭಟ್ ನಗರದ ಜನರಿಗೆ ಉಚಿತ ಬಸ್ ಸೇವೆ ಕಲ್ಪಿಸಿದ್ದಾರೆ. ಉಡುಪಿ ನಗರದ ಏಳು ಮಾರ್ಗಗಳಿಗೆ 12 ಬಸ್ಸುಗಳ ಓಡಾಟವನ್ನು ಇಂದು ಪ್ರಾರಂಭಿಸಲಾಗಿದೆ.

ಉಚಿತ ಬಸ್ ಸೇವೆಯನ್ನು ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಈ ಬಸ್ ಗಳು ಟಿಕೆಟ್ ಕಲೆಕ್ಟರ್ ಇಲ್ಲದೆ ಓಡಾಡಲಿವೆ. ಜನರು ಹೆಚ್ಚಿಲ್ಲದ ಕಾರಣ, ಉಡುಪಿಯ ಖಾಸಗಿ ಬಸ್ ಮಾಲೀಕರು ಬಸ್ ಓಡಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಮೇ ತಿಂಗಳ ಮೂವತ್ತರ ತನಕ ಉಚಿತ ಬಸ್ ಸೇವೆಯನ್ನು ಉಡುಪಿ ಶಾಸಕರು ಕಲ್ಪಿಸಿದ್ದಾರೆ.












Click it and Unblock the Notifications