Get Updates
Get notified of breaking news, exclusive insights, and must-see stories!

ಬದುಕಿನ ಪಯಣ, ನಗುವಿನ ನಿಲ್ದಾಣ ಕಾರ್ಟೂನು ಹಬ್ಬ

ಕುಂದಾಪುರ, ನವೆಂಬರ್ 30: ಕಾರ್ಟೂನು ಕುಂದಾಪ್ರ ಸಂಸ್ಥೆಯು 'ಬದುಕಿನ ಪಯಣ, ನಗುವಿನ ನಿಲ್ದಾಣ' ಶೀರ್ಷಿಕೆಯೊಂದಿಗೆ ಕಾರ್ಟೂನು ಹಬ್ಬ- 2018'ನ್ನು ಹಮ್ಮಿಕೊಂಡಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರರ್ಯ ಅವರ ನೇತೃತ್ವದಲ್ಲಿ ನಡೆಯಲಿದೆ.

ಡಿಸೆಂಬರ್ 6ರ ಕಾರ್ಯಕ್ರಮಗಳು: ಕಾರ್ಟೂನು ಹಬ್ಬ ಡಿಸೆಂಬರ್ 6ರಿಂದ 9ರವರೆಗೆ ಕುಂದಾಪುರದ ಕಲಾಮಂದಿರಲ್ಲಿ ನಡೆಯಲಿದೆ. ಡಿಸೆಂಬರ್ 6ರಂದು ಕುಂದಾಪುರ ಕನ್ನಡದಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿ ಸ್ಪರ್ಧೆ ನಡೆಯಲಿದೆ.

ಡಿಸೆಂಬರ್ 7ರ ಕಾರ್ಯಕ್ರಮಗಳು: ಕಾರ್ಟೂನು ಕಲಿ ಎನ್ನುವ ಕಾರ್ಟೂನು ಕಾರ್ಯಾಗಾರ ಏರ್ಪಡಿಸಲಾಗುತ್ತಿದ್ದು, ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ. ಐಡಿಯಾಗಳ ಬಗ್ಗೆ ತರಬೇತಿ ನೀಡಲು ಸಾಧ್ಯವಾಗದಿದ್ದರೂ ಕಾರ್ಟೂನ್ ಐಡಿಯಾಗಳು ಹೇಗೆ ಹುಟ್ಟಿತು ಎನ್ನುವುದರ ಬಗ್ಗೆ ಅನುಭವ ಹಂಚಿಕೊಳ್ಳಲಿದ್ದಾರೆ.

Four day cartoon festival in Kundapur from December 6

ಡಿಸೆಂಬರ್ 8ರ ಕಾರ್ಯಕ್ರಮ: ಅಂದು ಕಾರ್ಟೂನು ಮೊಗ್ಗು ಎನ್ನುವ ಉದಯೋನ್ಮುಖ ವ್ಯಂಗ್ಯಚಿತ್ರಕಾರರಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಮಾಜ ಸೇವಕ ದತ್ತಾನಂದ ಗಂಗೊಳ್ಳಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.

ಡಿಸೆಂಬರ್ 9ರ ಕಾರ್ಯಕ್ರಮ: ಅಂದು ವ್ಯಂಗ್ಯಚಿತ್ರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹರಿಣಿ, ರಘುಪತಿ, ಚಂದ್ರ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಗುತ್ತದೆ. ಅದರ ಜೊತೆಗೆ ಸಮಾರೋಪ ಸಮಾರಂಭ, ಪ್ರಶಸ್ತಿ ವಿತರಣೆ ಕಾರ್ಯಕ್ರಮವು ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+