ಕೊಡೇರಿ ಸಮುದ್ರದಲ್ಲಿ ನಾಡದೋಣಿ ಅವಘಡ: ಮೂವರು ಮೀನುಗಾರರು ನೀರುಪಾಲು
ಉಡುಪಿ, ಆಗಸ್ಟ್ 16: ಉಡುಪಿ ಜಿಲ್ಲೆಯ ಕಿರಿಮಂಜೇಶ್ವರ ಸಮೀಪದ ಕೊಡೇರಿ ಸಮುದ್ರದಲ್ಲಿ ನಾಡದೋಣಿ ದುರಂತ ಸಂಭವಿಸಿದೆ. ಮೀನುಗಾರಿಕೆ ನಡೆಸಿ ವಾಪಾಸ್ಸಾಗುತ್ತಿದ್ದ ನಾಡದೋಣಿಯೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ದೋಣಿಯಲ್ಲಿದ್ದ ಮೂವರು ನೀರು ಪಾಲಾಗಿದ್ದಾರೆ.
Recommended Video
Malaysia detects 10 times more dangerous Corona virus strain | Oneindia Kannada
ಮೀನುಗಾರಿಕೆಗೆ ತೆರಳಿದ್ದ ಸಾಗರಶ್ರೀ ಎಂಬ ನಾಡದೋಣಿ, ಬಂಡೆಗೆ ಬಡಿದ ಪರಿಣಾಮ ನಿಯಂತ್ರಣ ತಪ್ಪಿದ ದೋಣಿಯು ನೀರಿನಲ್ಲಿ ಮುಳುಗಿದೆ. ದುರಂತಕ್ಕೀಡಾದ ದೋಣಿಯಲ್ಲಿ ಒಟ್ಟು ಹತ್ತು ಮಂದಿ ಮೀನುಗಾರಿಕೆಗೆ ಇದ್ದರು ಎನ್ನಲಾಗಿದೆ.

ದೋಣಿಯು ಅಲೆಗಳ ಹೊಡೆತಕ್ಕೆ ಸಿಕ್ಕಿ ಮಗುಚಿ ಬಿದ್ದಿದೆ. ಈ ವೇಳೆ ಮೀನುಗಾರರು ಈಜಿ ಬಚಾವಾಗುವ ಪ್ರಯತ್ನ ಮಾಡಿದರೆ, ಮೂವರು ಅಲೆಗಳ ರಭಸಕ್ಕೆ ಸಿಲುಕಿ ಕಣ್ಮರೆಯಾದರು.

ಬಂಡೆಗೆ ಹೊಡೆದ ಸಾಗರಶ್ರೀ ಎಂಬ ನಾಡದೋಣಿ ಸಂಪೂರ್ಣ ಹಾನಿಗೊಂಡಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಣ್ಮರೆಯಾಗಿರುವ ಮೂವರು ಮೀನುಗಾರರಿಗಾಗಿ ಶೋಧ ನಡೆಯುತ್ತಿದೆ.











Click it and Unblock the Notifications