250ವರ್ಷಗಳ ನಂತರ ಮುಖದರ್ಶನ ಮಾಡಿಕೊಂಡ ಮಾಧ್ವಪೀಠದ ಯತಿಗಳು
250 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸೋದೆ ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಠದ ಯತಿಗಳ ಸಮಾಗಮ ಕಾರ್ಯಕ್ರಮ ಸೋಮವಾರ (ಮೇ 29) ನಡೆದಿದೆ.
ಉಡುಪಿ, ಮೇ 29: ಸುಮಾರು 250 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸೋದೆ ಮತ್ತು ಕುಕ್ಕೆ
ಸುಬ್ರಹ್ಮಣ್ಯ ಮಠದ ಯತಿಗಳ ಸಮಾಗಮ ಕಾರ್ಯಕ್ರಮ ಸೋಮವಾರ (ಮೇ 29) ನಡೆದಿದೆ.
ಉಡುಪಿಯ ರಥಬೀದಿ ಆವರಣದಲ್ಲಿರುವ ಅನಂತೇಶ್ವರ ದೇಗುಲದಲ್ಲಿ ಉಭಯ ಶ್ರೀಗಳು
ಮುಖಾಮುಖಿಯಾಗಿ, ಮುಖದರ್ಶನ ಮಾಡಿಕೊಂಡಿದ್ದಾರೆ.
ಸೋದೆ ಮಠದ ಪೀಠಾಧಿಪತಿ ವಿಶ್ವವಲ್ಲಭ ತೀರ್ಥರು ಮತ್ತು ಸುಬ್ರಹ್ಮಣ್ಯ ಮಠದ ಪೀಠಾಧಿಪತಿ
ವಿದ್ಯಾಪ್ರಸನ್ನ ತೀರ್ಥರ ಸಮಾಗಮಕ್ಕೆ ಅಷ್ಠಮಠದ ಇತರ ಯತಿಗಳು, ಇತರ ಗಣ್ಯರು
ಸಾಕ್ಷಿಯಾಗಿದ್ದಾರೆ. [250 ವರ್ಷ ಮುಖದರ್ಶನ ಮಾಡಿಕೊಳ್ಳದಿರಲು ಕಾರಣವೇನು]

ಸುಮಾರು ಎರಡುವರೆ ಶತಮಾನಗಳ ಕೆಳಗೆ, ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಉಭಯ ಮಠಗಳ ಪೀಠಾಧಿಪತಿಗಳ ಮುಖದರ್ಶನ ಇರಲಿಲ್ಲ. ಪರಸ್ಪರ ಭೇಟಿ, ಮಾತುಕತೆಯೂ ಇರಲಿಲ್ಲ.
ಈಗ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿದ ಸೋದೆ, ಸುಬ್ರಹ್ಮಣ್ಯ ಪೀಠಾಧಿಪತಿಗಳು,
ಅನಂತೇಶ್ವರ ಸನ್ನಿಧಾನದಲ್ಲಿ, ಪೇಜಾವರ ಹಿರಿಯ ಶ್ರೀಗಳ ಸಮ್ಮುಖದಲ್ಲಿ ಇಬ್ಬರೂ ಯತಿಗಳು ಒಂದಾಗಿದ್ದಾರೆ.

ಮಧ್ವಾಚಾರ್ಯರ ಸೋದರ ಶ್ರೀವಿಷ್ಣುತೀರ್ಥಾಚಾರ್ಯರಿಂದ ಸೋದೆ ಮಠ ಮತ್ತು ಸುಬ್ರಮಣ್ಯ ಮಠದ
ಪರಂಪರೆ. ಆರಂಭಗೊಂಡಿತ್ತು. ಅಂದಾಜು 250 ವರ್ಷಗಳ ಹಿಂದೆ ಭಿಕ್ಷೆಯ ವಿಚಾರದಲ್ಲಿ ಉಂಟಾದ
ಮನಸ್ತಾಪದಿಂದಾಗಿ ಉಭಯ ಮಠಗಳ ಬಾಂಧವ್ಯ ಕಡಿದು ಹೋಗಿತ್ತು.
ಸಮಾಗಮ ಕಾರ್ಯಕ್ರಮದ ಮುಂದಿನ ಭಾಗವಾಗಿ, ಮೇ 30ರಂದು ಸಂಜೆ 4ಗಂಟೆಗೆ ಸುಬ್ರಮಣ್ಯ
ಪೀಠಾಧಿಪತಿಗಳ ಸೋದೆ ಪುರಪ್ರವೇಶ, ಮೇ 31ರಂದು ಸಂಜೆ 5ಗಂಟೆಗೆ ಸೋದೆ ಶ್ರೀಗಳ ಸುಬ್ರಮಣ್ಯ
ಕ್ಷೇತ್ರ ಪುರಪ್ರವೇಶ ನಡೆಯಲಿದೆ.












Click it and Unblock the Notifications