ಕೇಂದ್ರ, ಉ.ಪ್ರ.ದಲ್ಲಿ ಮಂದಿರ ನಿರ್ಮಾಣಕ್ಕೆ ಪೂರಕ ಸರಕಾರ: ಪೇಜಾವರ ಶ್ರೀ
ಉಡುಪಿ, ನವೆಂಬರ್ 22: ಇಲ್ಲಿ ನಡೆಯಲಿರುವ ಹಿಂದೂ ಧರ್ಮ ಸಂಸದ್ ನಲ್ಲಿ ರಾಮ ಮಂದಿರ ನಿರ್ಮಾಣ, ಗೋಹತ್ಯಾ ನಿಷೇಧ ಹಾಗೂ ಜಾತಿಗಳ ಮಧ್ಯದ ಅಸ್ಪೃಶ್ಯತಾ ನಿವಾರಣೆ ವಿಚಾರ ಚರ್ಚೆಯ ಪ್ರಮುಖ ಅಂಶಗಳಾಗಲಿವೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ಹಿಂದೂ ಧರ್ಮ ಸಂಸದ್ ಗಾಗಿ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಧರ್ಮ ಸಂಸದ್ ನಲ್ಲಿ ಮೂರು ಪ್ರಮುಖ ವಿಚಾರದ ಚರ್ಚೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ದೇಶದ ನಾನಾ ಭಾಗದಿಂದ ಸಂತರು ಈ ಧರ್ಮ ಸಂಸದ್ ನಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ. ರಾಮಜನ್ಮಭೂಮಿ ಸಮಸ್ಯೆ ನಿವಾರಣೆಗೆ ಮೂರು ಅವಕಾಶಗಳಿವೆ. ಸರಕಾರದ ನೇತೃತ್ವದಲ್ಲಿ ಸಂಧಾನ ಮಾಡಬಹುದು, ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾಯಬಹುದು ಅಥವಾ ವಿಶೇಷ ವಿಧೇಯಕ ಮಂಡಿಸಿ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದರು.
ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪೂರಕವಾದ ಸರಕಾರ ಇದೆ. ಮಂದಿರ ನಿರ್ಮಾಣಕ್ಕೆ ಇರುವ ಬಿಕ್ಕಟ್ಟನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಬಹುದು. ಸಂತರು ಈ ಎಲ್ಲಾ ಆಯಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಉಡುಪಿಯಲ್ಲಿ ಚರ್ಚೆ ಮಾಡಲಿದ್ದಾರೆ ಎಂದರು.












Click it and Unblock the Notifications