ಡಿಜಿಪಿ ಕೊಲ್ಲೂರಿಗೆ ಭೇಟಿ, ಚಂಡಿಕಾ ಹೋಮದಲ್ಲಿ ಭಾಗಿ
ಉಡುಪಿ, ಸೆಪ್ಟೆಂಬರ್ 24: ಡಿಜಿಪಿ ನೀಲಮಣಿ ರಾಜು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅವರು ಚಂಡಿಕಾಹೋಮದಲ್ಲೂ ಪಾಲ್ಗೊಂಡರು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಮುಂಜಾನೆ ಆಗಮಿಸಿದ ನೀಲಮಣಿ ಜೊತೆ ಪತಿ ಡಿ.ಎನ್. ನರಸಿಂಹರಾಜು ಕೂಡ ಇದ್ದರು. ಪತಿಯೊಂದಿಗೆ ಡಿಜಿಪಿ ನೀಲಮಣಿ ಚಂಡಿಕಾ ಹೋಮದಲ್ಲಿ ಭಾಗಿಯಾದರು. ಈ ವೇಳೆ ಡಿಜಿಪಿ ನೀಲಮಣಿ ಅವರಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.

ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಕೂಡ ಈ ಸಂದರ್ಭ ಉಪಸ್ಥಿತರಿದ್ದರು. ಡಿಜಿಪಿ ನೀಲಮಣಿ ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ ಚಂಡಿಕಾ ಹೋಮದ ಹರಕೆ ಹೇಳಿದ್ದರು. ಅದರಂತೆ ಇವತ್ತು ಆಗಮಿಸಿ ಹರಕೆ ಸಲ್ಲಿಸಿದ್ದಾರೆ. ಇವತ್ತು ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ.












Click it and Unblock the Notifications