ಪ್ರೇಯಸಿ ಮಾತು ಬಿಟ್ಟಳೆಂದು ರೈಲಿಗೆ ತಲೆ ಕೊಟ್ಟ ಉಡುಪಿ ಯುವಕ

ಉಡುಪಿ, ಆಗಸ್ಟ್ 12: ಈಗಿನ ಯುವಕರ ಪಾಲಿನ ಅತಿ ದೊಡ್ಡ ಗುರಿ ಅಂದರೆ ಪ್ರೀತಿ ಎಂದಾಗಿಬಿಟ್ಟಿದೆ ಎಂದು ಕನ್ನಡದ ಖ್ಯಾತ ಲೇಖಕರೊಬ್ಬರು ಬರೆದಿದ್ದರು. ಉಡುಪಿಯಲ್ಲೊಂದು ಪ್ರಕರಣ ಇದೇ ಮಾತನ್ನು ಸಾಬೀತು ಮಾಡುವಂತಿದೆ.

ತಾನು ಪ್ರೀತಿಸಿದ ಯುವತಿ ಕೋಪಿಸಿಕೊಂಡ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದ ಬಳಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಉಡುಪಿಯ ನಿಟ್ಟೂರು ಗ್ರಾಮದ ಇಪ್ಪತ್ತು ವರುಷದ ಪ್ರತೀಕ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡವನು.

Love

ಎರಡು ದಿನಗಳ ಹಿಂದೆ ಈತನ ಪ್ರೇಯಸಿ ಮುನಿಸಿಕೊಂಡು ಮಾತನಾಡುವುದನ್ನು ಬಿಟ್ಟಿದ್ದಳು. ಹೀಗಾಗಿ ಈತ ಸಾಕಷ್ಟು ಮನನೊಂದಿದ್ದ ಎನ್ನಲಾಗಿದೆ.

ಶುಕ್ರವಾರ ತಡರಾತ್ರಿ ಇದ್ದಕ್ಕಿದ್ದಂತೆ ಈತ ಮನೆ ಬಿಟ್ಟು ಹೋಗಿದ್ದು, ಸಂಬಂಧಿಕರು ಈತನಿಗಾಗಿ ಹುಡುಕಾಡುತ್ತಿದ್ದ ಸಂದರ್ಭದಲ್ಲಿ ಇಂದ್ರಾಳಿ ರೈಲು ನಿಲ್ದಾಣದ ಬಳಿಯ ಹಳಿಯ ಮೇಲೆ ಪ್ರತೀಕ್ ಶವ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+