ದಸರಾ ಹಬ್ಬಕ್ಕೆ ಬೆಂಗಳೂರು-ಉಡುಪಿ-ಕಾರವಾರಕ್ಕೆ ವಿಶೇಷ ರೈಲು
ಬೆಂಗಳೂರು, ಸೆ 29: ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು-ಮಂಗಳೂರಿಗೆ ಘೋಷಿಸಿದ್ದ ವಿಶೇಷ ರೈಲನ್ನು ಕಾರವಾರದವರೆಗೆ ವಿಸ್ತರಿಸಲಾಗಿದೆ.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ ಕೋರಿಕೆಯ ಮೇರೆಗೆ ಉಡುಪಿ-ಕುಂದಾಪುರ ಜನರಿಗೆ ಸಹಾಯಕವಾಗುವಂತೆ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ.
ದಸರಾ ಹಬ್ಬದ ಸಮಯದಲ್ಲಿ ಬಸ್ ದರಗಳಲ್ಲಿ ಅತೀವ ಏರಿಕೆಯಾಗಿರುವುದರಿಂದ, ಉಡುಪಿ-ಕುಂದಾಪುರ ಭಾಗದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ವಿಶೇಷ ರೈಲಿಗೆ ಸಂಸದರು ಬೇಡಿಕೆಯಿರಿಸಿದ್ದರು.

ಸಂಸದರ ಕೋರಿಕೆಯ ಮೇರೆಗೆ ಭಾರತೀಯ ರೈಲ್ವೇ ಎರಡು ವಿಶೇಷ ರೈಲುಗಳ ಸೇವೆಯನ್ನು ಘೋಷಿಸಿದೆ.
ಬೆಂಗಳೂರು-ಕಾರವಾರ:
ದಿನಾಂಕ: 04.10.19, ರಾತ್ರಿ 10:20ಕ್ಕೆ
ದಿನಾಂಕ: 07.10.19, ರಾತ್ರಿ 11:55ಕ್ಕೆ
ಕಾರವಾರ-ಬೆಂಗಳೂರು:
ದಿನಾಂಕ: 05:10:19 ಸಂಜೆ 5:00ಕ್ಕೆ
ದಿನಾಂಕ: 08:10:19 ಸಂಜೆ 5:00ಕ್ಕೆ
ಕ್ಷೇತ್ರದ ಜನತೆ ಈ ಎರಡೂ ರೈಲಿನ ಸೇವೆಯ ಸದುಪಯೋಗ ಪಡೆಯುವಂತೆ ಸಂಸದೆ ಶೋಭಾ ಕರಂದ್ಲಾಜೆ ವಿನಂತಿಸಿದ್ದಾರೆ.












Click it and Unblock the Notifications